ಲಂಡನ್: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ತಂಡ ಚಾಂಪಿಯನ್ಶಿಪ್ ಪಟ್ಟಿಯಲ್ಲಿ 120 ಅಂಕಗಳಿಸಿ ಫೈನಲ್ ರೇಸ್ಗೆ ಮರಳಿದೆ.
ಪ್ರಸ್ತುತ 68.7 ಗೆಲುವಿನ ಸರಾಸರಿ ಹೊಂದಿರುವ ಇಂಗ್ಲೆಂಡ್ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ (69.2) ತಂಡಕ್ಕಿಂತ ಕೇವಲ 0.5 ಅಂಕ ಮಾತ್ರ ಹಿಂದಿದೆ. ಒಂದು ವೇಳೆ ಭಾರತ ತಂಡವನ್ನು 3-0 ಅಥವಾ 4-0ಯಲ್ಲಿ ಮಣಿಸಿದರೆ ಫೈನಲ್ ತಲುಪುವ ಅವಕಾಶವಿದೆ.
-
England gain two rating points in the @MRFWorldwide ICC Test Team Rankings after the conclusion of the #SLvENG series 👇 pic.twitter.com/I02hpazHWz
— ICC (@ICC) January 25, 2021 " class="align-text-top noRightClick twitterSection" data="
">England gain two rating points in the @MRFWorldwide ICC Test Team Rankings after the conclusion of the #SLvENG series 👇 pic.twitter.com/I02hpazHWz
— ICC (@ICC) January 25, 2021England gain two rating points in the @MRFWorldwide ICC Test Team Rankings after the conclusion of the #SLvENG series 👇 pic.twitter.com/I02hpazHWz
— ICC (@ICC) January 25, 2021
ಪ್ರಸ್ತುತ ಭಾರತ 71.7 ಅಂಕಗಳೊಡನೆ ಅಗ್ರಸ್ಥಾನದಲ್ಲಿದ್ದು, ಫೈನಲ್ ಪ್ರವೇಶಿಸಬೇಕಾದರೆ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳಲ್ಲಿ ಕನಿಷ್ಠ ಪಕ್ಷ 2-0ಯಲ್ಲಿ ಗೆಲ್ಲಬೇಕಿದೆ. ಒಂದು ವೇಳೆ ಒಂದು ಪಂದ್ಯವನ್ನು ಸೋತರೆ, ಉಳಿದ 3 ಪಂದ್ಯಗಳನ್ನು ಗೆದ್ದರೆ ಮಾತ್ರ ಫೈನಲ್ ಪ್ರವೇಶಿಸಲು ಅರ್ಹತೆ ಪಡೆಯಲಿದೆ.
ಮತ್ತೊಂದು ಕಡೆ ಆಸ್ಟ್ರೇಲಿಯಾ ಚಾಂಪಿಯನ್ಶಿಪ್ನ ತನ್ನ ಕೊನೆಯ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಿದೆ. ಆಸ್ಟ್ರೇಲಿಯಾ ಕೂಡ 2 ಪಂದ್ಯಗಳನ್ನು ಗೆದ್ದರೆ ಫೈನಲ್ ಪ್ರವೇಶಿಸಲಿದೆ, ಸೋತರೆ ನ್ಯೂಜಿಲ್ಯಾಂಡ್ ತಂಡ ಫೈನಲ್ ಪ್ರವೇಶಿಸಲಿದೆ.
ಇದನ್ನು ಓದಿ:ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹಲವು ವಿಶೇಷ ದಾಖಲೆ ಬರೆದ ಜೋ ರೂಟ್