ETV Bharat / sports

ಸ್ಫೋಟಕ ಆಟಗಾರ ಜೇಸನ್​ ರಾಯ್​ ಮೆಚ್ಚಿನ ಆರಂಭಿಕ ಬ್ಯಾಟ್ಸ್​ಮನ್ ಭಾರತೀಯ!!

ಖಾಸಗಿ ಕ್ರೀಡಾವೆಬ್​ಸೈಟ್​ ಜೊತೆ ಮಾತನಾಡುವಾಗ ಡೇವಿಡ್​ ವಾರ್ನರ್​ ಹಾಗೂ ರೋಹಿತ್​ ಶರ್ಮಾ ಇಬ್ಬರಲ್ಲಿ ಯಾರು ನಿಮ್ಮ ಮೆಚ್ಚಿನ ಆರಂಭಿಕ ಬ್ಯಾಟ್ಸ್‌ಮನ್​ ಎಂದು ರಾಯ್​ರನ್ನು ಪ್ರಶ್ನಿಸಿದ್ದಕೆ, ಇಂಗ್ಲೆಂಡ್​ ಓಪನರ್​ ‘ಹಿಟ್​ಮ್ಯಾನ್‘ಹೆಸರನ್ನು ಸೂಚಿಸಿದ್ದಾರೆ..

England Opener Jason Roy
England Opener Jason Roy
author img

By

Published : Jul 11, 2020, 8:30 PM IST

ಲಂಡನ್ ​: ಪ್ರಸ್ತುತ ಕ್ರಿಕೆಟ್​ನಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಇಂಗ್ಲೆಂಡ್​ನ ಜೇಸನ್​ ರಾಯ್​ ತಮ್ಮ ನೆಚ್ಚಿನ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಭಾರತ ತಂಡದ ರೋಹಿತ್​ ಶರ್ಮಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಖಾಸಗಿ ಕ್ರೀಡಾವೆಬ್​ಸೈಟ್​ ಜೊತೆ ಮಾತನಾಡುವಾಗ ಡೇವಿಡ್​ ವಾರ್ನರ್​ ಹಾಗೂ ರೋಹಿತ್​ ಶರ್ಮಾ ಇಬ್ಬರಲ್ಲಿ ಯಾರು ನಿಮ್ಮ ಮೆಚ್ಚಿನ ಆರಂಭಿಕ ಬ್ಯಾಟ್ಸ್​ಮನ್​ ಎಂದು ರಾಯ್​ರನ್ನು ಪ್ರಶ್ನಿಸಿದ್ದಕೆ, ಇಂಗ್ಲೆಂಡ್​ ಓಪನರ್ ‘ಹಿಟ್​ಮ್ಯಾನ್‘​ ಹೆಸರನ್ನು ಸೂಚಿಸಿದ್ದಾರೆ. ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ 3 ದ್ವಿಶತಕ, ಟಿ20 ಕ್ರಿಕೆಟ್​ನಲ್ಲಿ ನಾಲ್ಕು ಶತಕ ಸಿಡಿಸಿರುವ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

ಅಲ್ಲದೆ ಕಳೆದ ವರ್ಷ ಟೆಸ್ಟ್​ ಕ್ರಿಕೆಟ್​ನಲ್ಲೂ ಆರಂಭಿಕನಾಗಿ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮೂರು ಮಾದರಿಯಲ್ಲೂ ತಾವೊಬ್ಬ ಶ್ರೇಷ್ಠ ಓಪನರ್​ ಎಂದು ಸಾಬೀತುಪಡಿಸಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ವೇಳೆ 5 ಶತಕದ ಸಹಿತ 647 ರನ್​ಗಳಿಸಿ ದಾಖಲೆ ಬರೆದಿದ್ದರು. ಅಲ್ಲದೆ 2019ರ ಋತುವಿನಲ್ಲಿ ಬರೋಬ್ಬರಿ 1490 ರನ್​ಗಳಿಸುವ ಮೂಲಕ ಆವೃತ್ತಿಯ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ವಿಶ್ವಪ್ರಸಿದ್ಧ ಟಿ20 ಲೀಗ್​ಗಳಾದ ಐಪಿಎಲ್​, ಬಿಬಿಎಲ್​ ಹಾಗೂ ಪಿಎಸ್​ಎಲ್​ಗಳನ್ನು ಆಡಿದ್ದೀರಾ.. ನಿಮ್ಮ ನೆಚ್ಚಿನ ಲೀಗ್ ಯಾವುದು ಎಂದು ಕೇಳಿದ್ದಕ್ಕೆ ರಾಯ್​ ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂದು ಹೇಳಿದ್ದಾರೆ. ಪಿಎಸ್​ಎಲ್​ನಲ್ಲಿ ಒಮ್ಮೆ ಮಾತ್ರ ಆಡಿದ್ದೇನೆ. ಆದರೆ, ಭಾರತದಲ್ಲಿ 3-4 ಸಲ ಆಡಿದ್ದೇನೆ. ಬಿಬಿಎಲ್​ ವಿಭಿನ್ನವಾಗಿದೆ.

ಕ್ರಿಕೆಟ್​ ಅನುಭವದ ಪ್ರಕಾರ ಹೋಗುವುದಾದ್ರೆ ನಾನು ಐಪಿಎಲ್​ ಆಯ್ಕೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಕೊಹ್ಲಿ, ವಿಲಿಯಮ್ಸನ್​, ರೂಟ್​ ಹಾಗೂ ಸ್ಟೀವ್​ ಸ್ಮಿತ್​ ಇವರಲ್ಲಿ ಯಾರು ಅತ್ಯುತ್ತಮ ಬ್ಯಾಟ್ಸ್​ಮನ್​ ಎಂಬ ಪ್ರಶ್ನೆಗೆ ‘ರೂಟ್​‘ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.