ಲಂಡನ್: ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ ಹೈವೋಲ್ಟೇಜ್ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 14 ಸದಸ್ಯರನ್ನೊಳಗೊಂಡ ತಂಡ ಪ್ರಕಟಿಸಿದ್ದು, ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ಗೆ ಉಪನಾಯಕನ ಪಟ್ಟ ನೀಡಲಾಗಿದೆ.
ಇಂಗ್ಲೆಂಡ್ ತಂಡವನ್ನು ಜೋ ರೂಟ್ ಮುನ್ನಡೆಸಲಿದ್ದು, ವಿಶ್ವಕಪ್ನಲ್ಲಿ ಆಂಗ್ಲರ ಪರ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ವೇಗಿ ಜೋಫ್ರಾ ಆರ್ಚರ್ಗೆ ಚೊಚ್ಚಲ ಬಾರಿಗೆ ತಂಡ ಸೇರಿಕೊಳ್ಳಲು ಕರೆ ಬಂದಿದೆ. ಈಗಾಗಲೇ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಇವರು ಮಿಂಚು ಹರಿಸಿದ್ದಾರೆ.
ಬ್ರಿಸ್ಟೋಲ್ ನೈಟ್‌ಕ್ಲಬ್‌ನಲ್ಲಿ 2017ರಲ್ಲಿ ಬೆನ್ ಸ್ಟೋಕ್ಸ್ ವ್ಯಕ್ತಿಯೊಂದಿಗೆ ಹೊಡೆದಾಟ ನಡೆಸಿದ್ದರಿಂದ ಅವರನ್ನ ನಾಯಕನ ಸ್ಥಾನದಿಂದ ಇಸಿಬಿ ಕಿತ್ತು ಹಾಕಿತ್ತು. ಅದಾದ ಬಳಿಕ ವಿಶ್ವಕಪ್ನಲ್ಲಿ ಸ್ಟೋಕ್ಸ್ ಅದ್ಭುತ ಪ್ರದರ್ಶನ ನೀಡಿದ್ದು,ಇದೀಗ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 1ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಆಸ್ಟ್ರೇಲಿಯಾ ಸಹ ತಂಡ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪಕ್ಕೊಳಗಾಗಿ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಸ್ಟಿವ್ ಸ್ಮಿತ್,ಡೇವಿಡ್ ವಾರ್ನರ್ ಹಾಗೂ ಬ್ಯಾನ್ಕ್ರಾಫ್ಟ್ ಅವಕಾಶ ಪಡೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಐರ್ಲೆಂಡ್ ವಿರುದ್ಧ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 143 ರನ್ಗಳ ಗೆಲುವಿನ ನಗೆ ಬೀರಿದೆ.
ಇಂಗ್ಲೆಂಡ್ ತಂಡ:
ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್ (ಉಪನಾಯಕ), ಮೊಯಿನ್ ಅಲಿ, ಜೇಮ್ಸ್ ಆಂಡ್ರೆಸನ್, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಜೋ ಡೆನ್ಲಿ, ಜೇಸನ್ ರಾಯ್, ಒಲ್ಲಿ ಸ್ಟೋನ್ ಹಾಗೂ ಕ್ರಿಸ್ ವೋಕ್ಸ್