ಲಂಡನ್: ಇಂಗ್ಲೆಂಡ್ ತಂಡ ಈ ಸಾರಿ 2019ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಲ್ರೌಂಡರ್ಗೆ ಜಗತ್ತಿನ ಪ್ರತಿಷ್ಠಿತ ಮಾಧ್ಯಮ ಬಿಬಿಸಿ ವರ್ಷದ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಿದೆ.
ವಿಶ್ವಕಪ್ನಲ್ಲಿ 5 ಅರ್ಧಶತಕದ ಸಹಿತ 465 ರನ್ ಗಳಿಸಿದ್ದ ಸ್ಟೋಕ್ಸ್ ಫೈನಲ್ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 441 ರನ್ಗಳಿಸಿ ಇಂಗ್ಲೆಂಡ್ ತಂಡದ ಗರಿಷ್ಠ ಸ್ಕೋರರ್ ಎನಿಸಿದ್ದರು. 3ನೇ ಆ್ಯಶಸ್ ಟೆಸ್ಟ್ನಲ್ಲಿ ಕೊನೆಯ ವಿಕೆಟ್135 ರನ್ ಸೇರಿಸಿ ಒಂದು ವಿಕೆಟ್ ಗೆಲುವು ಸಾಧಿಸಲು ನೆರವಾಗಿದ್ದರು. ಈ ಎಲ್ಲ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಂಡು ಬಿಬಿಸಿ ಸ್ಟೋಕ್ಸ್ಗೆ ವರ್ಷದ ಕ್ರೀಡಾಪಟು ಅವಾರ್ಡ್ ನೀಡಿದೆ.
-
Here's Ben Stokes' acceptance speech after winning the BBC Sports Personality of the Year 2019 award👏pic.twitter.com/B6IDQubG1x
— ICC (@ICC) December 16, 2019 " class="align-text-top noRightClick twitterSection" data="
">Here's Ben Stokes' acceptance speech after winning the BBC Sports Personality of the Year 2019 award👏pic.twitter.com/B6IDQubG1x
— ICC (@ICC) December 16, 2019Here's Ben Stokes' acceptance speech after winning the BBC Sports Personality of the Year 2019 award👏pic.twitter.com/B6IDQubG1x
— ICC (@ICC) December 16, 2019
ಈ ಪ್ರಶಸ್ತಿ ಸುತ್ತಿನಲ್ಲಿ ಮ್ಯಾಂಚೆಸ್ಟರ್ ಸಿಟಿ ಹಾಗೂ ಇಂಗ್ಲೆಂಡ್ ತಂಡದ ಫುಟ್ಬಾಲರ್ ರಹೀಮ್ ಸ್ಟರ್ಲಿಂಗ್, ಫಾರ್ಮುಲಾ ಒನ್ ರೇಸರ್ ಲೆವಿಸ್ ಹ್ಯಾಮಿಲ್ಟನ್,ಅಥ್ಲೀಟ್ ದಿನಾ ಆಷ್ಯರ್ ಸ್ಮಿತ್, ರಗ್ಬಿ ಯುನಿಯನ್ ಲೆಜೆಂಡ್ ಅಲುನ್ ವಿನ್ ಜಾನ್ಸ್, ವಿಶ್ವ ಹೆಪತ್ಲಾನ್ ಚಾಂಪಿಯನ್ ಜಾನ್ಸನ್ ಥಾಮ್ಸನ್ ಕೂಡ ಇದ್ದರು.
ಆದರೆ, ಬೆನ್ಸ್ಟೋಕ್ಸ್ ಹೆಚ್ಚು ವೋಟು ಪಡೆದು ಜಯಶಾಲಿಯಾಗಿದ್ದಾರೆ. ಫಾರ್ಮುಲಾ ಒನ್ ರೇಸರ್ ಲೆವಿಸ್ ಹ್ಯಾಮಿಲ್ಟನ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಅಥ್ಲೀಟ್ ದಿನಾ ಆಷ್ಯರ್ ಸ್ಮಿತ್ ಮೂರನೇ ಸ್ಥಾನ ಪಡೆದಿದ್ದಾರೆ.
ಸ್ಟೋಕ್ಸ್ ಜೊತೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ವರ್ಷದ ಕ್ರೀಡಾ ತಂಡ ಪ್ರಶಸ್ತಿ, ಸೂಪರ್ ಓವರ್ನಲ್ಲಿ ಕಿವೀಸ್ನ ಮಾರ್ಟಿನ್ ಗುಪ್ತಿಲ್ ರನ್ಔಟ್ ಆದ ಕ್ಷಣವನ್ನು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಎಂಬ ಗೌರವ ಪಡೆದುಕೊಂಡಿದೆ.