ಮುಂಬೈ : ಪ್ರಸ್ತುತ ಏಕದಿನ ಸರಣಿಯಲ್ಲಿ ತೊಡಗಿಸಿಕೊಂಡಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಯುಎಇಗೆ ಆಗಮಿಸಿದ ವೇಳೆ ಕ್ವಾರಂಟೈನ್ ಅವಧಿ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 19ರಿಂದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭಗೊಳಲ್ಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಲಿವೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಸೆಪ್ಟೆಂಬರ್ 16ರಂದು ನಡೆಯಲಿದೆ. ಅವರು ಪಂದ್ಯವನ್ನು ಮುಗಿಸಿಕೊಂಡು ಐಪಿಎಲ್ಗಾಗಿ 17ರಂದು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.
ಆದರೆ, ಯುಎಇನ ಪ್ರಸ್ತುತ ಕ್ವಾರಂಟೈನ್ ನಿಯಮಗಳ ಪ್ರಕಾರ ವಿದೇಶಗಳಿಂದ ಬರುವವರು 6 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕಾಗಿದೆ. ಜೊತೆಗೆ ಈ ವೇಳೆ 2 ಕೋವಿಡ್-19 ಟೆಸ್ಟ್ಗಳನ್ನು ಸಹ ಎದುರಿಸಬೇಕಾಗಿದೆ. ಆದರೆ, ಬಯೋಬಬಲ್ನಲ್ಲಿರುವ 2 ದೇಶಗಳ ಆಟಗಾರರು ಕ್ವಾರಂಟೈನ್ ಅವಧಿಯನ್ನು 3 ದಿನಗಳಿಗೆ ಇಳಿಸಲು ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಯುಎಇಗೆ ಆಗಮಿಸಿದ ನಂತರ ಆರು ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅಂದರೆ ನಾವು ಮೊದಲ ಪಂದ್ಯದಿಂದ ಆಡಲು 6 ದಿನಗಳ ಮುಂಚಿತವಾಗಿ ಅಲ್ಲಿರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕ್ವಾರಂಟೈನ್ ಅವಧಿಯನ್ನು 6ರ ಬದಲಾಗಿ ಮೂರು ದಿನಕ್ಕೆ ಇಳಿಸಿದ್ರೆ ನಾವು ಆರಂಭದ ಪಂದ್ಯದಿಂದಲೇ ಆಡುಬಹುದು ಎಂದು ಇಂಗ್ಲೆಂಡ್ ಮತ್ತು ಆಸೀಸ್ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.
ಐಪಿಎಲ್ನಲ್ಲಿ ಆಡಲಿರುವ ಎರಡು ದೇಶಗಳ 21 ಆಟಗಾರರು ಸೆಪ್ಟೆಂಬರ್ 17ರಂದು ಮ್ಯಾಂಚೆಸ್ಟರ್‌ನಿಂದ ದುಬೈಗೆ ಚಾರ್ಟರ್ಡ್ ಫ್ಲೈಟ್ ಮೂಲಕ ದುಬೈಗೆ ಬರಲಿದ್ದಾರೆ.