ಸೌತಾಂಪ್ಟನ್: ಎರಡನೇ ಇನ್ನಿಂಗ್ಸ್ನಲ್ಲಿ 313 ರನ್ಗಳಿಗೆ ಆಲೌಟ್ ಆಗಿರುವ ಇಂಗ್ಲೆಂಡ್ ಎದುರಾಳಿ ವಿಂಡೀಸ್ ತಂಡಕ್ಕೆ 200 ರನ್ಗಳ ಟಾರ್ಗೇಟ್ ನೀಡಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ಗೆ ಜೋಫ್ರಾ ಆರ್ಚರ್ ಆರಂಭದಲ್ಲೇ 2 ವಿಕೆಟ್ ಪಡೆದು ಆಘಾತ ನೀಡಿದ್ದಾರೆ.
ನಾಲ್ಕನೇ ದಿನ 284 ರನ್ಗಳಿಸಿದ್ದ ಇಂಗ್ಲೆಂಡ್ ಇಂದು ಆ ಮೊತ್ತಕ್ಕೆ 29 ರನ್ ಸೇರಿಸಿದ ಆಲೌಟ್ ಆದರೂ ವೆಸ್ಟ್ ಇಂಡೀಸ್ ತಂಡಕ್ಕೆ 200 ರನ್ಗಳ ಸ್ಪರ್ಧಾತ್ಮ ಮೊತ್ತ ನೀಡಲು ಯಶಸ್ವಿಯಾಗಿದೆ. 5 ರನ್ಗಳಿಸಿದ್ದ ಆರ್ಚರ್ 23, ರನ್ಗಳಿಸಿ ಇಂಗ್ಲೆಂಡ್ ತಂಡದಕ್ಕೆ ನೆರವಾದರು. ಆರ್ಚರ್ ಹಾಗೂ ಮಾರ್ಕ್ವುಡ್ ವಿಕೆಟ್ ಪಡೆಯುವ ಮೂಲಕ ಶೆನಾನ್ ಗೇಬ್ರಿಯಲ್ 5 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ ಗೇಬ್ರಿಯಲ್ 4 ವಿಕೆಟ್ ಪಡೆದಿದ್ದರು.
200 ರನ್ಗಳ ಮೊತ್ತ ಗುರಿ ಪಡೆದಿರುವ ವೆಸ್ಟ್ ಇಂಡೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ. ಆರಂಭಿಕನಾಗಿ ಕಣಕ್ಕಿಳಿದಿದ್ದ ಕ್ಯಾಂಪ್ಬೆಲ್(1) ಗಾಯಗೊಂಡು ನಿವೃತ್ತಿಯಾದರೆ, ಕ್ರೈಗ್ ಬ್ರಾಥ್ವೇಟ್ 4 ಹಾಗೂ ಸಮರ್ಹ್ ಬ್ರೂಕ್ಸ್(0) ರನ್ನು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಔಟ್ ಮಾಡುವುದರೊಂದಿಗೆ ಇಂಗ್ಲೆಂಡ್ಗೆ ಮುನ್ನಡೆ ತಂದುಕೊಟ್ಟಿದ್ದಾರೆ.
ಕೊನೆಯ ದಿನವಾದ ಇಂದು ವೆಸ್ಟ್ ಇಂಡೀಸ್ಗೆ ಗೆಲ್ಲಲು 77 ಓವರ್ಗಳ ಬಾಕಿಯಿದೆ. 10 ಓವರ್ಗಳಲ್ಲಿ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 25 ರನ್ಗಳಿಸಿದೆ.