ಸೌತಾಂಪ್ಟನ್: ಜರ್ಮೈನ್ ಬ್ಲಾಕ್ವುಡ್ ಅಮೋಘ ಬ್ಯಾಟಿಂಗ್ ಹಾಗೂ ಬೌಲರ್ಗಳ ಚಾಣಾಕ್ಷ್ಯ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೂರು ತಿಂಗಳ ನಂತರ ಮರಳಿದ ಕ್ರಿಕೆಟ್ ಪಂದ್ಯದಲ್ಲಿ ಎರಡು ತಂಡಗಳು ಭರ್ಜರಿ ಪೈಪೋಟಿ ನಡೆಸಿದವು. ಇಂಗ್ಲೆಂಡ್ ನೀಡಿದ 200 ರನ್ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ ತಂಡ ಬ್ಲಾಕ್ವುಡ್(95) ರನ್ಗಳ ನೆರವಿನಿಂದ 4 ವಿಕೆಟ್ಗಳ ಜಯ ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಗೆಲುವು ಸಾಧಿಸಿತು.
ನಾಲ್ಕನೇ ದಿನ ಔಟಾಗದೇ ಉಳಿದಿದ್ದ ಜೋಫ್ರಾ ಆರ್ಚರ್ 23 ರನ್ಗಳಿಸಿ ಎದುರಾಳಿಗೆ 200 ರನ್ಗಳ ಟಾರ್ಗೆಟ್ ನೀಡಲು ನೆರವಾದರು.
ಆದರೆ, ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ವಿಂಡೀಸ್ ತಂಡ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕ್ಯಾಂಪ್ಬೆಲ್ ಗಾಯಗೊಂಡು ನಿವೃತ್ತಿಗೊಂಡರು. ನಂತರ ಬಂದ ಅನರ್ಹ್ ಬ್ರೂಕ್ಸ್(0) ಆರ್ಚರ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಮತ್ತೊಬ್ಬಆರಂಭಿಕ ಬ್ಯಾಟ್ಸ್ಮನ್ ಕ್ರೈಗ್ ಬ್ರಾತ್ವೇಟ್ 4 ರನ್ಗಳಿಸಿ ಆರ್ಚರ್ಗೆ 2ನೇ ಬಲಿಯಾದರು. ಶಾಯ್ ಹೋಪ್ (9) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
-
Windies win by 4 wickets!#ENGvWI pic.twitter.com/uD7ax9pgwF
— ICC (@ICC) July 12, 2020 " class="align-text-top noRightClick twitterSection" data="
">Windies win by 4 wickets!#ENGvWI pic.twitter.com/uD7ax9pgwF
— ICC (@ICC) July 12, 2020Windies win by 4 wickets!#ENGvWI pic.twitter.com/uD7ax9pgwF
— ICC (@ICC) July 12, 2020
ಈ ಸಂದರ್ಭದಲ್ಲಿ ಒಂದಾದ ರಾಸ್ಟನ್ ಚೇಸ್(37) ಹಾಗೂ ಬ್ಲಾಕ್ವುಡ್ 73 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 37 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಚೇಸ್ರನ್ನು ಆರ್ಚರ್ ಪೆವಿಲಿಯನ್ಗಟ್ಟಿದರು. ಆದರೆ, ಬ್ಲಾಕ್ವುಡ್ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿದರು. 5ನೇ ವಿಕೆಟ್ ಜೊತೆಯಾಟದಲ್ಲಿ ಡೋರಿಚ್(20) ಜೊತೆ 68 ರನ್ಗಳ ಸೇರಿಸಿದರು.
154 ಎಸೆತಗಳನ್ನು ಎದುರಿಸಿದ ಬ್ಲಾಕ್ವುಡ್ 12 ಬೌಂಡರಿ ಸಹಿತ 95 ರನ್ಗಳಿಸಿದ್ದ ವೇಳೆ ಇಂಗ್ಲೆಂಡ್ ನಾಯಕ ಬೆನ್ಸ್ಟೋಕ್ಸ್ ಬೌಲಿಂಗ್ನಲ್ಲಿ ಆ್ಯಂಡರ್ಸನ್ ಹಿಡಿದ ಕ್ಯಾಚ್ಗೆ ಬಲಿಯಾದರು. ಹೋಲ್ಡರ್(ಔಟಾಗದೇ 14) ಹಾಗೂ ಕ್ಯಾಂಪ್ಬೆಲ್(8) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು
ನಾಲ್ಕು ವಿಕೆಟ್ಗಳ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಯಲ್ಲಿ ಮುನ್ನಡೆ ಸಾಧಿಸಿದ ವೆಸ್ಟ್ ಇಂಡೀಸ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಎರಡು ಇನ್ನಿಂಗ್ಸ್ಗಳು ಸೇರಿ 9 ವಿಕೆಟ್ ಪಡೆದ ಶೆನಾನ್ ಗೇಬ್ರಿಯಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.