ETV Bharat / sports

ದುಬೈ, ಧರ್ಮಶಾಲಾ, ಅಹ್ಮಮದಾಬಾದ್​..: ಟೀಂ ಇಂಡಿಯಾ ತಂಡಕ್ಕೆ ತರಬೇತಿ ಶಿಬಿರ ಎಲ್ಲಿ? - ಇಂಡಿಯನ್​ ಪ್ರೀಮಿಯರ್​ ಲೀಗ್​

ಟೀಂ ಇಂಡಿಯಾ ತಂಡಕ್ಕೆ ರಾಷ್ಟ್ರೀಯ ತರಬೇತಿ ಶಿಬಿರ ಹಾಗೂ ಇಂಡಿಯನ್​ ಪ್ರೀಮಿಯರ್​ ಲೀಗ್​​ ಟೂರ್ನಿ ಆಯೋಜನೆ ಸೇರಿದಂತೆ ಕೆಲವೊಂದು ವಿಷಯಗಳ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚಿಸಲಾಗಿದೆ.

team india training camp
team india training camp
author img

By

Published : Jul 18, 2020, 7:02 PM IST

ಹೈದರಾಬಾದ್​: ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಇಂಡಿಯನ್​ ಪ್ರೀಮಿಯರ್​ ಲೀಗ್​ ಹಾಗೂ ಟೀಂ ಇಂಡಿಯಾ ತಂಡಕ್ಕೆ ರಾಷ್ಟ್ರೀಯ ತರಬೇತಿ ಶಿಬಿರ ಎಲ್ಲಿ ನಡೆಸಬೇಕು ಎಂಬ ವಿಚಾರ ಗೊಂದಲಮಯವಾಗಿದೆ.

ನಿನ್ನೆ ಬಿಸಿಸಿಐ ನಡೆಸಿದ ಅಪೆಕ್ಸ್​ ಕೌನ್ಸಿಲ್​ ಸಭೆಯಲ್ಲಿ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪ್ರಮುಖವಾಗಿ ಐಪಿಎಲ್​ ಆಯೋಜನೆ ಹಾಗೂ ಟೀಂ ಇಂಡಿಯಾ ತಂಡಕ್ಕೆ ತರಬೇತಿ ನೀಡುವ ವಿಷಯಗಳು ಹೆಚ್ಚು ಚರ್ಚೆಗೊಳಗಾಗಿವೆ.

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ತಂಡಕ್ಕೆ ದುಬೈ, ಧರ್ಮಶಾಲಾ ಅಥವಾ ಅಹ್ಮಮದಾಬಾದ್​ನಲ್ಲಿ ರಾಷ್ಟ್ರೀಯ ತರಬೇತಿ ಕ್ಯಾಂಪ್​ ಆಯೋಜನೆ ಮಾಡಲು ಚರ್ಚೆ ನಡೆಸಲಾಗಿದ್ದು, ಅಂತಿಮ ನಿರ್ಧಾರ ಹೊರಬರಬೇಕಾಗಿದೆ.

ಇದರ ಮಧ್ಯೆ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ನಡೆಸಲು ದುಬೈ ಸೂಕ್ತ ಸ್ಥಳ ಎಂದು ನಿರ್ಧಾರ ಮಾಡಲಾಗಿದ್ದು, ಬಹುತೇಕವಾಗಿ ಟೂರ್ನಿ ಇಲ್ಲೇ ನಡೆಯುವ ಸಾಧ್ಯತೆ ಇದೆ. ಐಪಿಎಲ್​ ಇದೇ ಸ್ಥಳದಲ್ಲಿ ನಡೆದರೆ ತರಬೇತಿ ಶಿಬಿರ ಕೂಡ ಇಲ್ಲೇ ನಡೆಯಬಹುದು ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದೆ.

ಸೋಮವಾರ ಭಾರತೀಯ ಕ್ರಿಕೆಟ್​ ಮಂಡಳಿ ಸಭೆ ನಡೆಸಲಿದ್ದು, ಐಪಿಎಲ್​ ಟೂರ್ನಿ ಹಾಗೂ ರಾಷ್ಟ್ರೀಯ ತರಬೇತಿ ಶಿಬಿರಗಳ ದಿನಾಂಕ, ಸ್ಥಳ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿವೆ.ಇದೇ ವೇಳೆ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ ಅವರ ಕಾರ್ಯಾವಧಿ ಜುಲೈ 27ಕ್ಕೆ ಮುಕ್ತಾಯಗೊಳ್ಳುತ್ತಿರುವ ಕಾರಣ, ಇದನ್ನ ಮುಂದೂಡಿಕೆ ಮಾಡುವ ಬಗ್ಗೆ ಸಹ ಚರ್ಚೆ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.