ETV Bharat / sports

ದ್ರಾವಿಡ್ ಭಾರತದ ಯುವ ಆಟಗಾರರನ್ನು ಮಾನಸಿಕವಾಗಿ ಕಠಿಣವಾಗಿಸಿದ್ದಾರೆ: ಇಂಜಮಾಮ್ ಉಲ್ ಹಕ್ - ದ್ರಾವಿಡ್ ಬಗ್ಗೆ ಇಂಜಮಾಮ್ ಹೇಳಿಕೆ

ರಿಷಭ್ ಪಂತ್, ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಅವರ ಬೆಳವಣಿಗೆಯಲ್ಲಿ ಭಾರತದ ಮಾಜಿ ನಾಯಕನ ಪ್ರಮುಖ ಪಾತ್ರವಿದೆ ಎಂದು ಇಂಜಮಾಮ್ ಹೇಳಿದ್ದಾರೆ.

Inzamam-ul-Haq
ದ್ರಾವಿಡ್ ಬಗ್ಗೆ ಇಂಜಮಾಮ್ ಹೇಳಿಕೆ
author img

By

Published : Jan 22, 2021, 11:01 AM IST

ಲಾಹೋರ್: ಆಸ್ಟ್ರೇಲಿಯಾದಲ್ಲಿ ಸತತ ಎರಡನೇ ಟೆಸ್ಟ್ ಸರಣಿ ಗೆಲುವು ದಾಖಲಿಸಿದ ನಂತರ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ - ಉಲ್-ಹಕ್ ಭಾರತ ತಂಡದ ಮೇಲೆ ರಾಹುಲ್ ದ್ರಾವಿಡ್ ಅವರ ಪ್ರಭಾವವನ್ನು ಶ್ಲಾಘಿಸಿದರು.

"ಅಂಡರ್ -19 ತಂಡದಿಂದ ಇಂಡಿಯಾ ಎ, ಮತ್ತು ಇಂಡಿಯಾ ಎ ಯಿಂದ ರಾಷ್ಟ್ರೀಯ ತಂಡಕ್ಕೆ ಈ ಪ್ರಯಾಣ, ರಾಹುಲ್ ದ್ರಾವಿಡ್ ಅಲ್ಲದೇ ಬೇರೆ ಯಾವ ವ್ಯಕ್ತಿಯ ಸಹಾಯದಿಂದಲೂ ಅವರು ತಮ್ಮ ನೆಲೆಯನ್ನು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ದ್ರಾವಿಡ್​ ಶಕ್ತಿ, ಅವನನ್ನು 'ದಿ ವಾಲ್' ಎಂದು ಕರೆಯಲು ಕಾರಣ. ಏಕೆಂದರೆ ಅವರು ಬಲವಾದ ರಕ್ಷಣೆಯನ್ನು ಹೊಂದಿದ್ದರು. ಅವರು ಪ್ರತಿಯೊಂದು ಸ್ಥಿತಿಯಲ್ಲೂ ಆಡಬಲ್ಲರು, ಮಾನಸಿಕವಾಗಿ ಎಷ್ಟು ಪ್ರಬಲರಾಗಿದ್ದರು ಎಂದರೆ ಅವರು ಯಾವುದೇ ಸ್ಥಾನದಲ್ಲಿ ತಮ್ಮನ್ನು ತಾವು ಹೊಂದಿಸಿಕೊಳ್ಳಬಲ್ಲರು. ದ್ರಾವಿಡ್ ಈ ಆಟಗಾರರೊಂದಿಗೆ ಮಾನಸಿಕವಾಗಿ ಕಠಿಣರಾಗಲು ಕೆಲಸ ಮಾಡಿದರು" ಎಂದು ಇಂಜಮಾಮ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

  • " class="align-text-top noRightClick twitterSection" data="">

2016 ಮತ್ತು 2019ರ ಅಂಡರ್ -19 ವಿಶ್ವಕಪ್‌ನಲ್ಲಿ ದ್ರಾವಿಡ್ ತರಬೇತುದಾರನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ ಪಂತ್, ವಾಷಿಂಗ್ಟನ್ ಸುಂದರ್, ಗಿಲ್ ಮತ್ತು ಪೃಥ್ವಿ ಶಾ ಆಡಿದ್ದರು. ಸಿರಾಜ್, ಸೈನಿ, ವಿಹಾರಿ, ಮತ್ತು ಅಗರ್ವಾಲ್ ಅವರು ಭಾರತ ಎ ತಂಡದ ಭಾಗವಾಗಿ ದ್ರಾವಿಡ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

"ಮೊದಲ ಟೆಸ್ಟ್ ಸೋಲು, ವಿರಾಟ್ ತವರಿಗೆ ಮರಳಿದ ನಂತರ, ಮೆಲ್ಬೋರ್ನ್ ಟೆಸ್ಟ್ ಪಂದ್ಯ ಗೆದ್ದರು. ನಾಲ್ಕು ಪ್ರಮುಖ ಆಟಗಾರರು ಗಾಯಗೊಂಡರೂ ಸರಣಿ ಗೆಲ್ಲುವಲ್ಲಿ ಯಶಸ್ವಿಯಾದರು. ಇದು ದ್ರಾವಿಡ್ ಅವರ ಕೆಲಸ ಎಂದು ನಾನು ಭಾವಿಸುತ್ತೇನೆ. ತಂತ್ರಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರೂ ಗೋಡೆಯಂತೆ ನಿಲ್ಲಲು ಪ್ರಯತ್ನಿಸಿದ್ರು. ದ್ರಾವಿಡ್, ಈ ಹುಡುಗರಿಗೆ ತರಬೇತಿ ನೀಡಿದ್ದಾರೆ, ಈ ಆಟಗಾರರು ಅದರ ಲಾಭವನ್ನು ಪಡೆದಿದ್ದಾರೆ "ಎಂದು ಇಂಜಮಾಮ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.