ETV Bharat / sports

ಟಿ-20 ವಿಶ್ವಕಪ್​ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರಂತೆ ಭಾರತದ ಹಿರಿಯ ವಿಕೆಟ್​ ಕೀಪರ್​

author img

By

Published : Nov 7, 2019, 2:32 PM IST

ಕಾರ್ತಿಕ್ ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ದೃತಿಗೆಡದೇ ಇತ್ತೀಚೆಗೆ ಮುಗಿದ ವಿಜಯ್​ ಹಜಾರೆ ಏಕದಿನ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್​ ನಡೆಸಿದ್ದರು. ಅವರು ತಂಡದ ನಾಯಕನಾಗಿ ಹಾಗೂ ಮಧ್ಯಮ ಕ್ರಮಾಂದ ಬ್ಯಾಟ್ಸ್​ಮನ್​ ಆಗಿ 418 ರನ್​ ಗಳಿಸುವ ಮೂಲಕ ತಮ್ಮ ತಂಡವನ್ನು ಫೈನಲ್​ಗೇರಿಸುವಲ್ಲಿ ಯಶಸ್ವಿಯಾಗಿದ್ದರು.

Dinesh Karthik

ಚೆನ್ನೈ: ಪ್ರಸ್ತುತ ಭಾರತ - ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಟಿ-20 ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿರುವ ದಿನೇಶ್​ ಕಾರ್ತಿಕ್​ 2020ರ ವಿಶ್ವಕಪ್​ ವೇಳೆಗೆ ತಂಡಕ್ಕೆ ಸೇರಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"2020ಕ್ಕೆ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್​ನಲ್ಲಿ​ ನಡೆಯಲಿದ್ದು, ನಾನು ಫಿನಿಶರ್​ ರೋಲ್​ ನಿರ್ವಹಿಸಲು ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ತಂಡ ಉತ್ತಮ ಮೊತ್ತ ದಾಖಲಿಸುವಂತೆ ಮಾಡಲು ನಾನು ಸಿದ್ದನಿದ್ದೇನೆ" ಎಂದು ದಿನೇಶ್​ ಕಾರ್ತಿಕ್​ ಆತ್ಮವಿಶಾಸದಿಂದ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾರ್ತಿಕ್ ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ದೃತಿಗೆಡದೆ ಇತ್ತೀಚೆಗೆ ಮುಗಿದ ವಿಜಯ್​ ಹಜಾರೆ ಏಕದಿನ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್​ ನಡೆಸಿದ್ದರು. ಅವರು ತಂಡದ ನಾಯಕನಾಗಿ ಹಾಗೂ ಮಧ್ಯಮ ಕ್ರಮಾಂದ ಬ್ಯಾಟ್ಸ್​ಮನ್​ ಆಗಿ 418 ರನ್​ಗಳಿಸಿದ್ದಲ್ಲೆ ತಮ್ಮ ತಂಡವನ್ನು ಫೈನಲ್​ಗೇರಿಸುವಲ್ಲಿ ಯಶಸ್ವಿಯಾಗಿದ್ದರು.

ಇದಲ್ಲದೇ ನಾಳೆಯಿಂದ ಆರಂಭವಾಗಲಿರುವ ಸಯ್ಯದ್​ ಮುಸ್ತಾಕ್​ ಅಲಿ ಟಿ-20 ಟೂರ್ನಿಗೂ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಮೊದಲ ಟೂರ್ನಿಮೆಂಟ್​ನಲ್ಲಿ ಚಾಂಪಿಯನ್​ ಆಗಿದ್ದು, ಬಿಟ್ಟರೆ ಕಳೆದ 10 ಸೀಸನ್​ಗಳಲ್ಲಿ ಫೈನಲ್ ತಲುಪಲೂ ಸಾಧ್ಯವಾಗಿಲ್ಲ. "ನಮ್ಮ ತಂಡ ಟಿ-20 ಫಾರ್ಮೆಟ್​ನಲ್ಲಿ ಉತ್ತಮವಾಗಿಲ್ಲ. ಜೊತೆಗೆ ಪ್ರಸ್ತುತ ನಮ್ಮ ತಂಡ ಈ ಟೂರ್ನಿಯಲ್ಲಿ ಬಲಿಷ್ಠವಾಗಿ ಸ್ಪರ್ಧೆಗಿಳಿಯುತ್ತಿಲ್ಲ. ಆದರೆ, ಈ ಬಾರಿ ಕೆಲವು ಉತ್ತಮ ಟಿ-20 ಆಟಗಾರರು ತಂಡದಲ್ಲಿದ್ದು, ಉತ್ತಮ ಪ್ರದರ್ಶನ ತೋರಲು ಬಯಸಿದ್ದೇವೆ" ಎಂದು ಕಾರ್ತಿಕ್​ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.