ETV Bharat / sports

ಧೋನಿ, ರೋಹಿತ್​ ಐಪಿಎಲ್​ನ ಶ್ರೇಷ್ಠ ನಾಯಕರು... ಆರ್​ಸಿಬಿ ತಂಡದಲ್ಲಿದ್ದಾನೆ ಶ್ರೇಷ್ಠ ಬ್ಯಾಟ್ಸ್​ಮನ್​

50 ಸದಸ್ಯರ ತೀರ್ಪುಗಾರರ ಮತಗಳ ಆಧಾರದ ಮೇಲೆ 3 ಹೆಸರುಗಳ ಕಿರುಪಟ್ಟಿಯನ್ನು ಕೆಕೆಆರ್​ ತಂಡಕ್ಕೆ ಎರಡು ಬಾರಿ ಟ್ರೋಫಿ ತಂದುಕೊಟ್ಟ ನಾಯಕ ಗೌತಮ್​ ಗಂಭೀರ್​ ಹೆಸರಿಸಿದ್ದರು. ಗಂಭೀರ್​ ಜೊತೆಗೆ ಇಂಗ್ಲೆಂಡ್​ನ ಪೀಟರ್​ಸನ್​, ನೆಹ್ರಾ, ಇರ್ಫಾನ್​ ಪಠಾಣ್​ ಹಾಗೂ ಕಿವೀಸ್​ ಮಾಜಿ ವೇಗಿ ಹಾಗೂ ಕಾಮೆಂಟೇಟರ್​​ ಡ್ಯಾನಿ ಮೊರೊಸನ್​ ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ಐಪಿಎಲ್​ನ ಅತ್ಯುತ್ತಮ ನಾಯಕ
ಐಪಿಎಲ್​ನ ಅತ್ಯುತ್ತಮ ನಾಯಕ
author img

By

Published : Apr 19, 2020, 1:31 PM IST

ಮುಂಬೈ: ಐಪಿಎಲ್​ 13 ವರ್ಷಗಳ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಚೆನ್ನೈ ಸೂಪರ್​ ಕಿಂಗ್ಸ್​ ಎಂಎಸ್​ ಧೋನಿ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ರೋಹಿತ್​ ಶರ್ಮಾ ಐಪಿಎಲ್​ನ ಸರ್ವಶ್ರೇಷ್ಠ ನಾಯಕರು ಎಂದು ಘೋಷಣೆ ಮಾಡಲಾಗಿದೆ.

20 ಮಂದಿ ಮಾಜಿ ಕ್ರಿಕೆಟಿಗರು, 10 ಮಂದಿ ಕ್ರೀಡಾ ವರದಿಗಾರರು, 10 ಮಂದಿ ಅಂಕಿ ಅಂಶ ತಜ್ಞರು ಹಾಗೂ ವಿಮರ್ಶಕರು, 7 ಪ್ರಸಾರಕರು ಹಾಗೂ ಮೂರು ಆ್ಯಂಕರ್ಸ್​ಗಳ ತಂಡ ಅತ್ಯುತ್ತಮ 10 ಆಟಗಾರರ ಲಿಸ್ಟ್​, 5 ಅತ್ಯುತ್ತಮ ನಾಯಕರು ಹಾಗೂ 3 ಕೋಚ್​ಗಳನ್ನು ಆಯ್ಕೆ ಮಾಡಲಾಗಿತ್ತು.

ಐಪಿಎಲ್​ನ ಶ್ರೇಷ್ಠ ಬ್ಯಾಟ್ಸ್​ಮನ್​
ಎಬಿ ಡಿ ವಿಲಿಯರ್ಸ್​

50 ಸದಸ್ಯರ ತೀರ್ಪುಗಾರರ ಮತಗಳ ಆಧಾರದ ಮೇಲೆ 3 ಹೆಸರುಗಳ ಕಿರುಪಟ್ಟಿಯನ್ನು ಕೆಕೆಆರ್​ ತಂಡಕ್ಕೆ ಎರಡು ಬಾರಿ ಟ್ರೋಫಿ ತಂದುಕೊಟ್ಟ ನಾಯಕ ಗೌತಮ್​ ಗಂಭೀರ್​ ಹೆಸರಿಸಿದ್ದಾರೆ. ಗಂಭೀರ್​ ಜೊತೆಗೆ ಇಂಗ್ಲೆಂಡ್​ನ ಪೀಟರ್​ಸನ್​, ನೆಹ್ರಾ, ಇರ್ಫಾನ್​ ಪಠಾಣ್​, ಹಾಗೂ ಕಿವೀಸ್​ ಮಾಜಿ ವೇಗಿ ಹಾಗೂ ಕಾಮೆಂಟೇಟರ್​​ ಡ್ಯಾನಿ ಮೊರೊಸನ್​ ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ಅತ್ಯುತ್ತಮ ಐಪಿಎಲ್​ ಬೌಲರ್​
ಲಸಿತ್​ ಮಾಲಿಂಗ

ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು 3 ಬಾರಿ ಚಾಂಪಿಯನ್​ ಪಟ್ಟಕ್ಕೆ ಹಾಗೂ ಟೂರ್ನಿಗಳಲ್ಲಿ 5 ರನ್ನರ್​ ಆಪ್ ಸಹಿತ ಆಡಿದ 10 ಆವೃತ್ತಿಗಳಲ್ಲಿ ಪ್ಲೇ ಆಫ್​ ಹಂತಕ್ಕೆ ಕೊಂಡೊಯ್ದಿದ್ದಾರೆ. ಇನ್ನು ರೋಹಿತ್​ ಶರ್ಮಾ ಮುಂಬೈ ಪರ 7 ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ಇವರಿಬ್ಬರನ್ನು ಐಪಿಎಲ್​ನ ಶ್ರೇಷ್ಠ ನಾಯಕರ ವಿಭಾಗಕ್ಕೆ ಆಯ್ಕೆ ಮಾಡಲಾಗಿದೆ.

ಶ್ರೇಷ್ಠ ಬ್ಯಾಟ್ಸ್​ಮನ್​

ಮಿಸ್ಟರ್​ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್​ರನ್ನು ಐಪಿಎಲ್​ಬ ಶ್ರೇಷ್ಠ ಬ್ಯಾಟ್ಸ್​ಮನ್​ ಎಂದು ಘೋಷಣೆ ಮಾಡಲಾಗಿದೆ. ಐಪಿಎಲ್​ನಲ್ಲಿ ಹೆಚ್ಚುರನ್​ ಸರದಾರರಾದ ವಿರಾಟ್​ ಕೊಹ್ಲಿ ಹಾಗೂ ಸುರೇಶ್​ ರೈನಾ ಅವರ ಕಠಿಣ ಸ್ಪರ್ಧೆಯ ನಡುವೆ ಆಯ್ಕೆಗಾರರು ಎಬಿಡಿಯನ್ನು ಆಯ್ಕೆ ಮಾಡಿದ್ದಾರೆ.

ಶ್ರೇಷ್ಠ ಬೌಲರ್​

ಮುಂಬೈ ಇಂಡಿಯನ್ಸ್​ನ ಲಸಿತ್​ ಮಲಿಂಗಾ ಐಪಿಎಲ್​ನ ಶ್ರೇಷ್ಠ ಬೌಲರ್​ ಆಗಿ ಹೊರಹೊಮ್ಮಿದ್ದಾರೆ. ಅವರು 122 ಪಂದ್ಯಗಳಲ್ಲಿ 170 ವಿಕೆಟ್​ ಪಡೆದಿದ್ದಾರೆ.

ಶ್ರೇಷ್ಠ ಆಲ್​ರೌಂಡರ್​

2018 ಹಾಗೂ 19 ರ ಆವೃತ್ತಿಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್​ಗೇರಲು ನೆರವಾಗಿದ್ದ ಆಸ್ಟ್ರೇಲಿಯಾದ ಶೇನ್​ ವಾಟ್ಸನ್​ ಕೆಕೆಆರ್​ ಹಾಗೂ ಸಿಎಸ್​ಕೆಯ ಡ್ವೇನ್​ ಬ್ರಾವೋರನ್ನು ಹಿಂದಿಕ್ಕಿ ಆಲ್​ರೌಂಡರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.