ಡೆಲ್ಲಿ: ನ್ಯೂಜಿಲ್ಯಾಂಡ್ ಪರ ಕೇವಲ 11 ಇನ್ನಿಂಗ್ಸ್ಗಳನ್ನಾಡಿರುವ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಡಿವೋನ್ ಕಾನ್ವೆ ಟಿ20 ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್‌ರಂತಹ ಸ್ಟಾರ್ ಬ್ಯಾಟ್ಸ್ಮನ್ಗಳನ್ನು ಹಿಂದಿಕ್ಕಿ ಟಾಪ್ 5ಕ್ಕೆ ಎಂಟ್ರಿಕೊಟ್ಟಿದ್ದಾರೆ.
ನ್ಯೂಜಿಲ್ಯಾಂಡ್ ಪರ 13 ಪಂದ್ಯಗಳನ್ನಾಡಿದ್ದು, 11 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ 52 ಎಸೆತಗಳಲ್ಲಿ ಅಜೇಯ 92 ರನ್ಗಳಿಸಿದ್ದರು. ಈ ಇನ್ನಿಂಗ್ಸ್ನಂತರ ಅವರು 5 ಸ್ಥಾನ ಬಡ್ತಿ ಪಡೆದು ಭಾರತದ ವಿರಾಟ್ ಕೊಹ್ಲಿ(5) ಮತ್ತು ಕೆ.ಎಲ್.ರಾಹುಲ್(6)ರನ್ನು ಹಿಂದಿಕ್ಕಿ 4ನೇ ಶ್ರೇಯಾಂಕ ಪಡೆದಿದ್ದಾರೆ.
-
A sizzling 52-ball 92* in the first T20I against Bangladesh has helped Devon Conway continue his rise up the rankings!
— ICC (@ICC) March 31, 2021 " class="align-text-top noRightClick twitterSection" data="
He's now No.4 in the @MRFWorldwide ICC Rankings for Men's T20I batting! 🌟 pic.twitter.com/G66FWmuFX0
">A sizzling 52-ball 92* in the first T20I against Bangladesh has helped Devon Conway continue his rise up the rankings!
— ICC (@ICC) March 31, 2021
He's now No.4 in the @MRFWorldwide ICC Rankings for Men's T20I batting! 🌟 pic.twitter.com/G66FWmuFX0A sizzling 52-ball 92* in the first T20I against Bangladesh has helped Devon Conway continue his rise up the rankings!
— ICC (@ICC) March 31, 2021
He's now No.4 in the @MRFWorldwide ICC Rankings for Men's T20I batting! 🌟 pic.twitter.com/G66FWmuFX0
ಇಂಗ್ಲೆಂಡ್ನ ಡೇವಿಡ್ ಮಲನ್, ಆಸ್ಟ್ರೇಲಿಯಾದ ಫಿಂಚ್ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ಅಗ್ರ 3 ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಕಿವೀಸ್ ನಾಯಕ ಟಿಮ್ ಸೌಥಿ 2 ಸ್ಥಾನ ಮೇಲೇರಿ 7ಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿ, ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲೆರಡು ಸ್ಥಾನದಲ್ಲಿದ್ದಾರೆ. ಭಾರತದ ಯಾವುದೇ ಬೌಲರ್ಗಳು ಟಾಪ್ 10ರಲ್ಲಿ ಕಾಣಿಸಿಕೊಂಡಿಲ್ಲ. ವಾಷಿಂಗ್ಟನ್ ಸುಂದರ್ 14ನೇ ಸ್ಥಾನದಲ್ಲಿ ಭಾರತದ ಟಾಪ್ ಶ್ರೇಯಾಂಕಿತರಾಗಿದ್ದಾರೆ.
ಇದನ್ನೂ ಓದಿ:ಏಕದಿನ ಬೌಲಿಂಗ್ ರ್‍ಯಾಂಕ್: ಬುಮ್ರಾ ಹಿಂದಿಕ್ಕಿದ ಹೆನ್ರಿ, 11ನೇ ರ್ಯಾಂಕ್ಗೆ ಬಡ್ತಿ ಪಡೆದ ಭುವಿ