ಚೆನ್ನೈ: ಆರ್ಸಿಬಿ ತಂಡದ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ 2 ವಾರಗಳ ಕ್ವಾರಂಟೈನ್ ನಂತರ 2 ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದಿದ್ದು, ಬುಧವಾರ ಆರ್ಸಿಬಿ ತಂಡ ಸೇರಿಕೊಂಡಿದ್ದಾರೆ.
ಮಾರ್ಚ್ 22ರಂದು ನಡೆಸಿದ್ದ ಕೋವಿಡ್ ಪರೀಕ್ಷೆಯಲ್ಲಿ ದೇವದತ್ಗೆ ಕೊರೊನಾ ದೃಢಪಟ್ಟಿತ್ತು. ನಂತರ ಬಿಸಿಸಿಐ ಪ್ರೋಟೋಕಾಲ್ಗಳ ನಂತರ ಅವರ ಮನೆಯಲ್ಲೇ 2 ವಾರಗಳ ಕಾಲ ಸೆಲ್ಫ್ ಐಸೋಲೇಷನ್ನಲ್ಲಿದ್ದರು. 2 ದಿನಗಳ ಹಿಂದೆ ನಡೆಸಿದ್ದ ಪರೀಕ್ಷೆಯಲ್ಲಿ ನೆಗೆಟಿವ್ ಪಡೆದಿದ್ದ ದೇವದತ್ ಇಂದೂ ಕೂಡ ನೆಗೆಟಿವ್ ರಿಪೋರ್ಟ್ ಪಡೆದು ಆರ್ಸಿಬಿ ಬಯೋಬಬಲ್ ಸೇರಿಕೊಂಡಿದ್ದಾರೆ.
-
Bold Diaries: Devdutt Padikkal joins the RCB camp after testing negative for COVID-19. He’s healthy, feeling better and raring to go. Here’s a message to all RCB fans from Devdutt.#PlayBold #WeAreChallengers #IPL2021 pic.twitter.com/BtVszNABJW
— Royal Challengers Bangalore (@RCBTweets) April 7, 2021 " class="align-text-top noRightClick twitterSection" data="
">Bold Diaries: Devdutt Padikkal joins the RCB camp after testing negative for COVID-19. He’s healthy, feeling better and raring to go. Here’s a message to all RCB fans from Devdutt.#PlayBold #WeAreChallengers #IPL2021 pic.twitter.com/BtVszNABJW
— Royal Challengers Bangalore (@RCBTweets) April 7, 2021Bold Diaries: Devdutt Padikkal joins the RCB camp after testing negative for COVID-19. He’s healthy, feeling better and raring to go. Here’s a message to all RCB fans from Devdutt.#PlayBold #WeAreChallengers #IPL2021 pic.twitter.com/BtVszNABJW
— Royal Challengers Bangalore (@RCBTweets) April 7, 2021
ಈ ಕುರಿತು ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿರುವ ಆರ್ಸಿಬಿ, "ದೇವದತ್ ಪಡಿಕ್ಕಲ್ ಕೋವಿಡ್ 19 ಟೆಸ್ಟ್ನಲ್ಲಿ ನೆಗೆಟಿವ್ ಪಡೆದ ನಂತರ ಆರ್ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಪ್ರಸ್ತುತ ಅವರು ಆರೋಗ್ಯದಿಂದಿದ್ದಾರೆ" ಎಂದು ಪಡಿಕ್ಕಲ್ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಪಡಿಕ್ಕಲ್ ನೆಗೆಟಿವ್ ಪಡೆದ ಖುಷಿಯಲ್ಲಿದ್ದ ಆರ್ಸಿಬಿಗೆ ಮತ್ತೊಂದು ಆಘಾತ ಎದುರಾಗಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ಗೆ ಎರಡನೇ ಕೋವಿಡ್ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅವರೂ ಕೂಡ ಕ್ವಾರಂಟೈನ್ನಲ್ಲಿದ್ದಾರೆ ಎಂದು ಆರ್ಸಿಬಿ ಪ್ರಕಟಣೆ ಬಿಡುಗಡೆ ಮಾಡಿದೆ.
ಇದನ್ನು ಓದಿ: ಏಕದಿನ ರ‍್ಯಾಂಕಿಂಗ್: ನಾಲ್ಕು ವರ್ಷಗಳ ನಂತರ ಅಗ್ರಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಕೊಹ್ಲಿ