ETV Bharat / sports

ಇಶಾಂತ್​ ಶರ್ಮಾ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆಗಾಗಿ ಐಪಿಎಲ್ ಜಿಸಿಗೆ ಮನವಿ ಸಲ್ಲಿಸಿದ ಡೆಲ್ಲಿ

author img

By

Published : Oct 12, 2020, 6:29 PM IST

ಡೆಲ್ಲಿ ತಂಡದಲ್ಲಿ ಇಶಾಂತ್​ರೊಂದಿಗೆ ಶುರುವಾದ ಗಾಯ, ನಂತರ ಅಮಿತ್ ಮಿಶ್ರಾ , ರವಿ ಚಂದ್ರನ್ ಆಶ್ವಿನ್​ ಹಾಗೂ ರಿಷಭ್​ ಪಂತ್ ವರೆಗೆ ಬಂದು ನಿಂತಿದೆ. ಇದರಲ್ಲಿ ಅಶ್ವಿನ್ ಚೇತರಿಸಿಕೊಂಡಿದ್ದರೆ, ಪಂತ್ ಒಂದು ವಾರ ವಿಶ್ರಾಂತಿಯಲ್ಲಿರಲಿದ್ದಾರೆ. ಇನ್ನು ಅಮಿತ್ ಮಿಶ್ರಾ ಐಪಿಎಲ್​ನಿಂದಲೇ ಹೊರಬಿದ್ದಿದ್ದಾರೆ.​

ಇಶಾಂತ್​ ಶರ್ಮಾ
ಇಶಾಂತ್​ ಶರ್ಮಾ

ದುಬೈ: ಗಾಯದ ಕಾರಣದಿಂದ 13ನೇ ಐಪಿಎಲ್​ನಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡಿರುವ ಇಶಾಂತ್ ಶರ್ಮಾರ ಸ್ಥಾನಕ್ಕೆ ಬೇರೆ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೋರಿ ಡೆಲ್ಲಿ ತಂಡದ ಐಪಿಎಲ್​ ಆಡಳಿತ ಮಂಡಳಿಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

ಎಎನ್ಐ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಇಶಾಂತ್ ಶರ್ಮಾರ ಬದಲಿ ಆಟಗಾರನನ್ನ ಎದುರು ನೋಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಲ್ಲಿ ಅಧಿಕಾರಿಯೊಬ್ಬರು, ಹೌದು.. ನಾವು ಇಶಾಂತ್ ಜಾಗಕ್ಕೆ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಐಪಿಎಲ್​ ಆಡಳಿತ ಮಂಡಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಡೆಲ್ಲಿ ತಂಡದಲ್ಲಿ ಇಶಾಂತ್​ರೊಂದಿಗೆ ಶುರುವಾದ ಗಾಯ, ನಂತರ ಅಮಿತ್ ಮಿಶ್ರಾ , ರವಿ ಚಂದ್ರನ್ ಆಶ್ವಿನ್​ ಹಾಗೂ ರಿಷಭ್​ ಪಂತ್ ವರೆಗೆ ಬಂದು ನಿಂತಿದೆ. ಇದರಲ್ಲಿ ಅಶ್ವಿನ್ ಚೇತರಿಸಿಕೊಂಡಿದ್ದರೆ, ಪಂತ್ ಒಂದು ವಾರ ವಿಶ್ರಾಂತಿಯಲ್ಲಿರಲಿದ್ದಾರೆ. ಇನ್ನು ಅಮಿತ್ ಮಿಶ್ರಾ ಐಪಿಎಲ್​ನಿಂದಲೇ ಹೊರಬಿದ್ದಿದ್ದಾರೆ.​

ಡೆಲ್ಲಿ ತಂಡ ಆಡಿರುವ 7 ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.