ETV Bharat / sports

ಹೆಟ್ಮಾಯರ್​​​, ಸ್ಟೋನಿಸ್ ಬ್ಯಾಟಿಂಗ್​​​​​ ಬಲ: ರಾಜಸ್ಥಾನ ಗೆಲುವಿಗೆ 185 ರನ್​ ಟಾರ್ಗೆಟ್​​

author img

By

Published : Oct 9, 2020, 9:36 PM IST

ಆರಂಭಿಕ ಬ್ಯಾಟ್ಸ್​​ಮನ್​ಗಳ ವೈಫಲ್ಯದ ನಡುವೆ ಕೂಡ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್​ ರಾಜಸ್ಥಾನ ತಂಡಕ್ಕೆ 185ರನ್​ಗಳ ಗೆಲುವಿನ ಟಾರ್ಗೆಟ್​ ನೀಡಿದೆ.

IPL 2020
IPL 2020

ಶಾರ್ಜಾ: ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​​​ ಮಧ್ಯಮ ಕ್ರಮಾಂಕದಲ್ಲಿ ಸ್ಟೋನಿಸ್​(39), ಹೆಟ್ಮಾಯರ್​​(45)ರನ್​ಗಳ ನೆರವಿನಿಂದ ರಾಜಸ್ಥಾನ ತಂಡಕ್ಕೆ 185ರನ್​​ಗಳ ಸ್ಪರ್ಧಾತ್ಮಕ ಟಾರ್ಗೆಟ್​ ನೀಡಿದೆ.

ಆರಂಭಿಕರಾಗಿ ಕಣಕ್ಕಿಳಿದ ಶಿಖರ್​ ಧವನ್​(5), ಪೃಥ್ವಿ ಶಾ(19)ರನ್​ಗಳಿಕೆ ಮಾಡಿ ಪೆವಿಲಿಯನ್​ ಸೇರಿಕೊಂಡರು. ಇದರ ಬೆನ್ನಲ್ಲೇ ಬಂದ ಕ್ಯಾಪ್ಟನ್​ ಶ್ರೇಯಸ್​(22) ಉತ್ತಮ ಬ್ಯಾಟಿಂಗ್​ ನೀಡುವ ಭರವಸೆ ನೀಡಿದ್ರೂ ಕೂಡ ರನೌಟ್ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಪಂತ್​(5) ಕೂಡ ರನೌಟ್ ಆದರು.

ಮಿಂಚಿದ ಸ್ಟೋನಿಸ್ ​-ಹೆಟ್ಮಾಯರ್​

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿದ ಹೆಟ್ಮಾಯರ್​-ಸ್ಟೋನಿಸ್​ ಜೋಡಿ ಉತ್ತಮ ಜೊತೆಯಾಟ ಆಡಿದರು. ಸ್ಟೋನಿಸ್​(39)ರನ್​ಗಳಿಕೆ ಮಾಡಿದ್ರೆ, ಹೆಟ್ಮಾಯರ್​​​ ಕೇವಲ 24 ಎಸೆತಗಳಲ್ಲಿ (45)ರನ್​ಗಳಿಕೆ ಮಾಡಿದರು. ಇದಾದ ಬಳಿಕ ಬಂದ ಹರ್ಷಲ್ ಪಟೇಲ್​(16)ರನ್​, ಅಕ್ಸರ್ ಪಟೇಲ್​​​(17)ರನ್​ಗಳಿಕೆ ಮಾಡಿದ್ದರಿಂದ ತಂಡ 20 ಓವರ್​ಗಳಲ್ಲಿ 8ವಿಕೆಟ್​ ಕಳೆದುಕೊಂಡು 184ರನ್​ಗಳಿಕೆ ಮಾಡಿತು.

ರಾಜಸ್ಥಾನ ಪರ ಜೋಫ್ರಾ ಆರ್ಚರ್​​ 3ವಿಕೆಟ್ ಪಡೆದುಕೊಂಡು ಮಿಂಚಿದ್ರೆ, ಕಾರ್ತಿಕ್ ತ್ಯಾಗಿ, ಆಂಡ್ರೋ ಟೈ ಹಾಗೂ ರಾಹುಲ್​ ತಲಾ 1ವಿಕೆಟ್​ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.