ಮೆಲ್ಬೋರ್ನ್: ಪಾಕಿಸ್ತಾನಕ್ಕೆ ಟಿ-20 ಕ್ರಿಕೆಟ್ನಲ್ಲಿ ಸೋಲಿನ ರುಚಿ ತೋರಿಸಿದ್ದ ಶ್ರೀಲಂಕಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಮುಖಭಂಗ ಅನುಭವಿಸಿದೆ.
ಶ್ರೀಲಂಕಾ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತ್ತು. ತಂಡದ ಪರ ವಿಕೆಟ್ ಕೀಪರ್ ಕುಸಾಲ್ ಪೆರೆರಾ 57 ರನ್ ಕಲೆ ಹಾಕಿದ್ರು.
ನಿಗದಿತ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ತು. ನಾಯಕ ಆ್ಯರೊನ್ ಫಿಂಚ್ 37 ಹಾಗೂ ವಾರ್ನರ್ ಅಜೇಯ 57ರನ್ ಕೂಡಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಕೊನೆಯದಾಗಿ ತಂಡ 17.4 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 145ರನ್ಗಳಿಸಿ ಮಾಡಿ ಜಯಭೇರಿ ಬಾರಿಸಿತು. ಈ ಮೂಲಕ ವಾರ್ನರ್ ಆಡಿರುವ ಮೂರು ಟಿ-20 ಪಂದ್ಯಗಳಿಂದ ಅಜೇಯರಾಗುಳಿದು 217 ರನ್ ಗಳಿಕೆ ಮಾಡಿದರು. ಪಂದ್ಯಶ್ರೇಷ್ಠ ಹಾಗು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗೆ ಅವರು ಭಾಜನರಾದರು.
ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಸರಣಿಗಾಗಿ ವಿಶ್ವದ ಎಲ್ಲಾ ತಂಡಗಳು ಸಜ್ಜುಗೊಳ್ಳುತ್ತಿವೆ. ಇದೀಗ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಕಮ್ಬ್ಯಾಕ್ ಮಾಡಿ ತಂಡದ ಆತ್ಮವಿಶ್ವಾಸ ಹಚ್ಚಿಸಿದ್ದಾರೆ.