ETV Bharat / sports

ಐಪಿಎಲ್​ನಲ್ಲಿ ಸತತ 6ನೇ ಬಾರಿ 500ಕ್ಕಿಂತ ಹೆಚ್ಚು ರನ್​ಗಳಿಸಿ ದಾಖಲೆ ಬರೆದ ಡೇವಿಡ್​ ವಾರ್ನರ್​

author img

By

Published : Nov 3, 2020, 11:57 PM IST

Updated : Nov 4, 2020, 12:04 AM IST

2014ರಲ್ಲಿ ಸನ್​ರೈಸರ್ಸ್​ ತಂಡಕ್ಕೆ ಸೇರ್ಪಡೆಗೊಂಡಿದ್ದ ವಾರ್ನರ್​ 2020ರ ವರೆಗೆ ಆಡಿರುವ ಎಲ್ಲಾ ಆವೃತ್ತಿಗಳಲ್ಲೂ 500ಕ್ಕಿಂತ ಹೆಚ್ಚು ರನ್​ಗಳಿಸಿದ್ದಾರೆ. ಈ ಮೂಲಕ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೆಚ್ಚು ಬಾರಿ 500+ ರನ್​ ಬಾರಿಸಿದ ದಾಖಲೆಗೆ ಪಾತ್ರರಾದರು.

ಡೇವಿಡ್​ ವಾರ್ನರ್​
ಡೇವಿಡ್​ ವಾರ್ನರ್​

ಶಾರ್ಜಾ: ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್ ವಾರ್ನರ್​ ಸತತ 6ನೇ ವರ್ಷ ಐಪಿಎಲ್​ನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್​ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

2014ರಲ್ಲಿ ಸನ್​ರೈಸರ್ಸ್​ ತಂಡಕ್ಕೆ ಸೇರ್ಪಡೆಗೊಂಡಿದ್ದ ವಾರ್ನರ್​ 2020ರ ವರೆಗೆ ಆಡಿರುವ ಎಲ್ಲಾ ಆವೃತ್ತಿಗಳಲ್ಲೂ 500ಕ್ಕಿಂತ ಹೆಚ್ಚು ರನ್​ಗಳಿಸಿದ್ದಾರೆ. ಈ ಮೂಲಕ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೆಚ್ಚು ಬಾರಿ 500+ ರನ್​ ಬಾರಿಸಿದ ದಾಖಲೆಗೆ ಪಾತ್ರರಾದರು.

ವಾರ್ನರ್​ 2018ರಲ್ಲಿ ಬಾಲ್​ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಲುಕಿ ನಿಷೇಧಕ್ಕೊಳಗಾಗಿದ್ದರಿಂದ 11ನೇ ಆವೃತ್ತಿಯಲ್ಲಿ ಆಡಿರಲಿಲ್ಲ. ಆ ಒಂದು ಆವೃತ್ತಿ ಹೊರೆತುಪಡಿಸಿದರೆ, 2014ರಿಂದ 2020ರವರೆಗೆ ಎಲ್ಲಾ ಆವೃತ್ತಿಗಳಲ್ಲೂ 500ಕ್ಕಿಂತ ಹೆಚ್ಚಿನ ರನ್​ಗಳಿಸಿದ್ದಾರೆ. ವಾರ್ನರ್​ ಹೊರೆತುಪಡಿಸಿದರೆ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ 13 ಆವೃತ್ತಿಗಳಲ್ಲಿ 5ಬಾರಿ, ಡೆಲ್ಲಿ ತಂಡದ ಶಿಖರ್ ಧವನ್ 4 ಬಾರಿ ಈ ಸಾಧನೆ ಮಾಡಿದ್ದಾರೆ.

ಸನ್​ರೈಸರ್ಸ್​ ಪರ ವಾರ್ನರ್​ ರನ್​ಗಳಿಕೆ

2014- 528

2015-562(ಆರೆಂಜ್ ಕ್ಯಾಪ್)

2016-848

2017-641(ಆರೆಂಜ್ ಕ್ಯಾಪ್)

2019- 692 (ಆರೆಂಜ್ ಕ್ಯಾಪ್)

2020 -501*

Last Updated : Nov 4, 2020, 12:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.