ವಾಷಿಂಗ್ಟನ್: ಕ್ರಿಕೆಟ್ನಲ್ಲಿ ಪ್ಲೇಯರ್ಸ್ ಸಿಂಗಲ್(ಒಂದು) ರನ್ ತಿರಸ್ಕರಿಸುವ ದಿನ ದೂರು ಉಳಿದಿಲ್ಲ ಎಂದು ಟೀಂ ಇಂಡಿಯಾದ ಮಾಜಿ ದಿಗ್ಗಜ ಆಟಗಾರ, ಕ್ರಿಕೆಟ್ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ. ವಾಷಿಂಗ್ಟನ್ನಲ್ಲಿ ನಡೆದ 15ನೇ ಎಂಐಟಿ ಸ್ಲೋನ್ ಸ್ಪೋರ್ಟ್ಸ್ ಅನಾಲಿಟಿಕ್ಸ್ ಸಮ್ಮೇಳನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಪ್ಲೇಯರ್ಸ್ಗಳ ಡೇಟಾ ಆಟಗಾರರ ಆಯ್ಕೆಗೆ ಬಳಕೆ ಮಾಡಲಾಗುತ್ತಿದ್ದು, ಇದು ಉತ್ತಮ ಸ್ಪರ್ಧೆಗೆ ಬಳಕೆಯಾಗಬೇಕಾಗಿದೆ ಎಂದರು. ಕ್ರಿಕೆಟ್ ತಂತ್ರಗಾರಿಕೆ ಮತ್ತು ಆಟಗಾರರ ಆಯ್ಕೆಗೆ ಸಹಾಯ ಮಾಡಲು ಅಂಕಿ - ಅಂಶ ಕ್ರಿಕೆಟ್ನಲ್ಲಿ ಬಳಸಲಾಗುವ ಡೇಟಾ ಉತ್ತಮ ಸ್ಪರ್ಧೆ ನಡೆಸಬೇಕು ಎಂದಿದ್ದಾರೆ.
ಕ್ರಿಕೆಟ್ ಯಾವಾಗಲೂ ಬೇಸ್ ಬಾಲ್ನಂತೆ ಸಂಖ್ಯಾಶಾಸ್ತ್ರೀಯವಾಗಿ ಚಾಲಿತವಾಗಿದೆ. ಆದರೆ, ಕಳೆದ 15 ವರ್ಷಗಳಲ್ಲಿ ನಾವು ಎಲ್ಲವೂ ಮೀರಿ ಸಾಗಿದ್ದೇವೆ. ಇದೀಗ ಆಟಗಾರರ ಆಯ್ಕೆಗೆ ಡೇಟಾ ಬಳಕೆ ಮಾಡಲಾಗ್ತಿದೆ. ಹೀಗಾಗಿ ಪ್ಲೇಯರ್ಸ್ ಪಂದ್ಯಗಳಲ್ಲಿ ಹೆಚ್ಚು ಅಗ್ರೇಸ್ಸಿವ್ ಆಗಿ ಆಟವಾಡ್ತಿದ್ದಾರೆ ಎಂದರು.
ಟಿ-20 ಪಂದ್ಯಗಳಲ್ಲಿ ಹೆಚ್ಚು ಗೆಲ್ಲುವು ಸಾಧಿಸಲು ಕ್ರಿಕೆಟ್ ಆಟಗಾರರು ಬೌಂಡರಿ ಮತ್ತು ಸಿಕ್ಸರ್ಗಳ ಮೊರೆ ಹೊಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ಲೇಯರ್ಸ್ ಸಿಂಗಲ್ ತಿರಸ್ಕರಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಎರಡು ಅಥವಾ ಮೂರು ಎಸೆತಗಳಲ್ಲಿ ಸಿಕ್ಸರ್, ಬೌಂಡರಿ ಹೊಡೆಯಲು ಅವರು ಮುಂದಾಗುತ್ತಿರುವುದು ಎಂದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್, ಭಾರತದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿ ಇಸಾ ಗುಹಾ ಭಾಗಿಯಾಗಿದ್ದರು.