ಲಖನೌ: ಉತ್ತರ ಪ್ರದೇಶದ ಸಚಿವ ಮೊಹ್ಸಿನ್ ರಾಜಾ ಕ್ರಿಕೆಟ್ ಆಟಗಾರರಿಂದ ತಾರತಮ್ಯ ಎದುರಿಸಿದ ಪಾಕಿಸ್ತಾನದ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರನ್ನು ಹೊಸ ಪೌರತ್ವ (ತಿದ್ದುಪಡಿ) ಕಾಯ್ದೆ -2019ರ ಅಡಿಯಲ್ಲಿ ಭಾರತಕ್ಕೆ ಸ್ವಾಗತಿಸಿದ್ದಾರೆ.
ಅವರು ಪಾಕಿಸ್ತಾನದಲ್ಲಿ ಎಲ್ಲಾ ರೀತಿಯ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ದಾನಿಶ್ ಕನೇರಿಯಾ ಅವರ ಹೆಸರು ದಿನೇಶ್ ಕನೇರಿಯಾ. ಆದರೆ ಅವರು ಪಾಕಿಸ್ತಾನ ತಂಡದಲ್ಲಿ ಆಡಲು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದಿದ್ದಾರೆ.
ಅದೇ ರೀತಿ, ಮೊಹಮ್ಮದ್ ಯೂಸುಫ್ ಓರ್ವ ಕ್ರಿಶ್ಚಿಯನ್ ಮತ್ತು ಅವರ ಹೆಸರು ಯೂಸುಫ್ ಯುಹಾನಾ ಆಗಿತ್ತು. ಪಾಕಿಸ್ತಾನದಲ್ಲಿ ತಾರತಮ್ಯ ಎದುರಿಸುತ್ತಿರುವ ಈ ಇಬ್ಬರು ಆಟಗಾರರು ಭಾರತಕ್ಕೆ ಬರಬಹುದು. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಇದೆ, ನಾವು ಅವರನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಹಿಂದೂ ಎಂಬ ಕಾರಣಕ್ಕೆ ಪಾಕ್ ಸಹ ಪ್ಲೇಯರ್ಸ್ ಅನುಚಿತ ವರ್ತನೆ: ಶೊಯೇಬ್ ಹೇಳಿಕೆ ನಿಜ ಎಂದ ಕನೇರಿಯಾ!
ಪಾಕಿಸ್ತಾನ ಕ್ರಿಕೆಟ್ ತಂಡ ಪ್ರತಿನಿಧಿಸಿದ್ದ ಎರಡನೇ ಹಿಂದೂ ಆಟಗಾರ ಎಂಬ ಹೆಗ್ಗಳಿಕೆ ಕನೇರಿಯಾ ಅವರದ್ದಾಗಿದ್ದು, ಅದೇ ಕಾರಣಕ್ಕೆ ಅವರನ್ನ ತಂಡದಿಂದ ದೂರ ಇಡಲಾಗಿತ್ತು. ಅವರ ಜೊತೆಗೆ ಒಟ್ಟಿಗೆ ಕುಳಿತು ಯಾವುದೇ ಪ್ಲೇಯರ್ಸ್ ಊಟ ಮಾಡುತ್ತಿರಲಿಲ್ಲ ಎಂದು ಪಾಕ್ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದರು.
ಕ್ರಿಕೆಟ್ನಿಂದ ನಿಷೇಧ: ಸಹಾಯ ಕೋರಿ ಪಾಕ್ ಪ್ರಧಾನಿ ಮೊರೆಹೋದ ದಾನಿಶ್ ಕನೇರಿಯಾ
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದ ಕನೇರಿಯಾ, ಶೊಯೇಬ್ ಅಖ್ತರ್ ಹೇಳಿರುವುದು ಸತ್ಯ. ನಾನು ಹಿಂದೂ ಎಂಬ ಕಾರಣಕ್ಕಾಗಿ ಯಾರೂ ನನ್ನೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ಎಂದಿದ್ದರು. ಅಲ್ಲದೆ ಸಂಕಷ್ಟದಲ್ಲಿರುವ ನನಗೆ ಸಹಾಯ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಮನವಿ ಮಾಡಿದ್ದರು.