ಮ್ಯಾಂಚೆಸ್ಟರ್: ಟೀಂ ಇಂಡಿಯಾ ವಿರುದ್ಧದ ಸೋಲಿನ ಬಳಿಕ ಪಾಕ್ ಕ್ರಿಕೆಟ್ ತಂಡ ಅತೀ ಹೆಚ್ಚು ಟೀಕೆಗೊಳಗಾಗಿದೆ. ಅಲ್ಲಿನ ಕ್ರೀಡಾಭಿಮಾನಿಗಳು ಸರ್ಫರಾಜ್ ನೇತೃತ್ವದ ತಂಡವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪಾಕ್ ಕ್ರೀಡಾಭಿಮಾನಿಗಳು ಬಳಕೆ ಮಾಡುತ್ತಿರುವ ಕೆಟ್ಟ ಪದಗಳಿಂದ ಕೂಡಿದ ಬೈಗುಳಗಳಿಂದ ಪಾಕ್ ಬೌಲರ್ ಮೊಹಮ್ಮದ್ ಅಮೀರ್ ರೋಸಿ ಹೋಗಿದ್ದಾರೆ. ಇದೇ ವಿಚಾರವಾಗಿ ಅಮೀರ್ ಕ್ರೀಡಾಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದು, ದಯವಿಟ್ಟು ಕೆಟ್ಟ ಶಬ್ದ ಬಳಕೆ ಮಾಡಿ, ನಮಗೆ ಬೈಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
-
Pls dont use bad words for the players yes u guys can criticise our performance we will bounce back InshAllah we need ur support 🙏🙏🙏
— Mohammad Amir (@iamamirofficial) June 17, 2019 " class="align-text-top noRightClick twitterSection" data="
">Pls dont use bad words for the players yes u guys can criticise our performance we will bounce back InshAllah we need ur support 🙏🙏🙏
— Mohammad Amir (@iamamirofficial) June 17, 2019Pls dont use bad words for the players yes u guys can criticise our performance we will bounce back InshAllah we need ur support 🙏🙏🙏
— Mohammad Amir (@iamamirofficial) June 17, 2019
ನಮ್ಮ ಪ್ರದರ್ಶನ ವಿಮರ್ಶೆ ಮಾಡಿ, ನಿಮ್ಮ ಸಪೋರ್ಟ್ನಿಂದ ಖಂಡಿತವಾಗಿಯೂ ನಾವು ಮತ್ತೆ ಪುಟಿದೇಳುತ್ತೇವೆ ಎಂದು ಮನವಿ ಮಾಡಿದ್ದಾರೆ.
ಕಳೆದ ಭಾನುವಾರ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್ ಅಮೀರ್ ಉತ್ತಮವಾಗಿ ಬೌಲಿಂಗ್ ಮಾಡಿ ಮೂರು ವಿಕೆಟ್ ಕಬಳಿಸಿದ್ದರು. ಆದರೆ ಇತರೆ ಬೌಲರ್ಗಳ ಕಳಪೆ ಪ್ರದರ್ಶನದ ಫಲವಾಗಿ ಭಾರತ 336 ರನ್ ಗಳಿಕೆ ಮಾಡಿತ್ತು. ಪಂದ್ಯದಲ್ಲಿ ಪಾಕ್ 89 ರನ್ಗಳ ಸೋಲು ಕಂಡಿತ್ತು.