ETV Bharat / sports

ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಕ್ರಿಸ್​ ನಿಂಜಾನಿ ರಾಜಿನಾಮೆ

ನಿಂಜಾನಿ ಸಿಎಸ್​ಎ ಸಂವಿಧಾನವನ್ನು ಬದಲಾಯಿಸಿ ತಮ್ಮ ಅಧಿಕಾರಾವಧಿಯನ್ನು ಒಂದು ವರ್ಷ ಹೆಚ್ಚಿಸಿಕೊಂಡು ವಿವಾದಕ್ಕೆ ಸಿಲುಕಿದ್ದರು. ಅಲ್ಲದೆ ಇತ್ತೀಚೆಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದರಿಂದಅವರು ತನ್ನ ಕರ್ತವ್ಯದಿಂದ ಕೆಳಗಿಳಿದಿರುವುದಾಗಿ ತಿಳಿದು ಬಂದಿದೆ.

ಕ್ರಿಸ್​ ನಿಂಜಾನಿ ರಾಜಿನಾಮೆ
ಕ್ರಿಸ್​ ನಿಂಜಾನಿ ರಾಜಿನಾಮೆ
author img

By

Published : Aug 17, 2020, 7:34 PM IST

Updated : Aug 19, 2020, 9:23 AM IST

ಕೇಪ್‌ಟೌನ್: ಕ್ರಿಕೆಟ್ ದಕ್ಷಿಣ ಆಫ್ರಿಕಾದ (ಸಿಎಸ್‌ಎ) ಅಧ್ಯಕ್ಷ ಸ್ಥಾನಕ್ಕೆ ಕ್ರಿಸ್ ನೆಂಜಾನಿ ರಾಜೀನಾಮೆ ನೀಡಿದ್ದಾರೆ.

ಕ್ರಿಸ್ ನೆಂಜಾನಿ ಸೋಮವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ವಾರ್ಷಿಕ ಸಾಮಾನ್ಯ ಸಭೆಗೆ ಎರಡು ವಾರಗಳಿರುವಾಗ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಆದರೆ ರಾಜಿನಾಮೆಗೆ ನಿಖರವಾದ ಕಾರಣ ನೀಡಿಲ್ಲ ಎಂದು ಕ್ರಿಕೆಟ್​ ದಕ್ಷಿಣ ಆಫ್ರಿಕಾ ತಿಳಿಸಿದೆ.

ನಿಂಜಾನಿ ಸಿಎಸ್​ಎ ಸಂವಿಧಾನವನ್ನು ಬದಲಾಯಿಸಿ ತಮ್ಮ ಅಧಿಕಾರಾವಧಿಯನ್ನು ಒಂದು ವರ್ಷ ಹೆಚ್ಚಿಸಿಕೊಂಡು ವಿವಾದಕ್ಕೆ ಸಿಲುಕಿದ್ದರು. ಅಲ್ಲದೆ ಇತ್ತೀಚೆಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದರಿಂದಅವರು ತನ್ನ ಕರ್ತವ್ಯದಿಂದ ಕೆಳಗಿಳಿದಿರುವುದಾಗಿ ತಿಳಿದು ಬಂದಿದೆ.

  • NEWS: Mr. Chris Nenzani has resigned as the President of the Members Council and the Chairman of the board of directors of Cricket South Africa with effect from 15 August.

    A new President and Chairman will be appointed at the annual general meeting on 5 September. pic.twitter.com/p3rngYMiwR

    — Cricket South Africa (@OfficialCSA) August 17, 2020 " class="align-text-top noRightClick twitterSection" data=" ">

ಮಾಹಿತಿಯ ಪ್ರಕಾರ, ನೆಂಜಾನಿ ಅವರು ಕಳೆದ ಶುಕ್ರವಾರವೇ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ವಾರ್ಷಿಕ ಸಭೆಗೆ 2 ವಾರಗಳು ಬಾಕಿಯಿರುವಾಗಲೇ ರಾಜೀನಾಮೆ ನೀಡಿದ್ದಾರೆ.

ಕ್ರಿಸ್​ ನೆಂಜಾನಿ ಅವರು ಆಗಸ್ಟ್ 15 ರಿಂದ ಜಾರಿಗೆ ಬರುವಂತೆ ಸದಸ್ಯರ ಮಂಡಳಿ ಅಧ್ಯಕ್ಷ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್​ 5 ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕ್ರಿಕೆಟ್​ ದಕ್ಷಿಣ ಆಫ್ರಿಕಾ ತನ್ನ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

Last Updated : Aug 19, 2020, 9:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.