ಲಂಡನ್: ವಿಶ್ವದಲ್ಲೇ ಕ್ರೀಡಾಹಬ್ಬವೆಂದೇ ಖ್ಯಾತವಾದ ಒಲಿಂಪಿಕ್ನಲ್ಲಿ ಬಹುದಿನಗಳ ಬೇಡಿಕೆಯಾದ ಕ್ರಿಕೆಟ್ ಸೇರಿಸುವುದಕ್ಕೆ ಐಸಿಸಿ ಪ್ರಬಲ ಪ್ರಯತ್ನ ಮಾಡುತ್ತಿದೆ.
2024ರ ಒಲಿಂಪಿಕ್ನಲ್ಲಿ ಕ್ರಿಕೆಟ್ ಸೇರಿಸಲಾಗುತ್ತದೆ ಎಂದು ನಂಬಲಾಗಿತ್ತು. ಆದರೆ, ಐಸಿಸಿ ಒಲಿಂಪಿಕ್ ಕಮಿಟಿಗೆ ಅಧಿಕೃತವಾಗಿ ಮನವಿ ಸಲ್ಲಿಸಲು ತಡಮಾಡಿದ್ದರಿಂದ 2028ರ ಒಲಿಂಪಿಕ್ಗೆ ಮುಂದೂಡಲ್ಪಟ್ಟಿತ್ತು.
ಈ ಕುರಿತು ಮಾತನಾಡಿರುವ ಎಂಸಿಸಿ ಕ್ರಿಕೆಟ್ ಕಮಿಟಿ ಅಧ್ಯಕ್ಷ ಮೈಕ್ ಗಟ್ಟಿಂಗ್ , ಐಸಿಸಿ ಮುಖ್ಯಸ್ಥ ಮನು ಸಾಹ್ನಿ ಎಂಸಿಸಿ ಸಭೆಯಲ್ಲಿ ಕ್ರಿಕೆಟ್ ಆಟವನ್ನು ಒಲಿಂಪಿಕ್ಗೆ ಸೇರಿಸುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಬಿಸಿಸಿಐ ಡೂಪಿಂಗ್ ಪರೀಕ್ಷೆ ನಾಡಾಗೆ ಸೇರಿದ ಮೇಲೆ ಕ್ರಿಕೆಟ್‌ನ ಒಲಿಂಪಿಕ್ಗೆ ಸೇರಿಸಬೇಕು ಎಂಬ ಆಶಯ ಗಟ್ಟಿಯಾಗಿದೆ ಎಂದಿದ್ದಾರೆ.
ನಾವು ಈಗಾಗಲೆ ಐಸಿಸಿ ಮುಖ್ಯಸ್ಥ ಸಾಹ್ನಿ ಅವರೊಂದಿಗೆ ಮಾತನಾಡಿದ್ದೇವೆ, 2028ರ ಒಲಿಂಪಿಕ್ಗೆ ಕ್ರಿಕೆಟ್‌ನ ಸೇರಿಸಲು ಅವರೂ ಕೂಡ ಉತ್ಸುಕರಾಗಿದ್ದಾರೆ. ಆ ನಿಟ್ಟಿನಲ್ಲಿ ಎಂಸಿಸಿ ಹಾಗೂ ಐಸಿಸಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಕ್ರಿಕೆಟ್ ಆಟವನ್ನು ವಿಶ್ವದಾದ್ಯಂತ ಪಸರಿಸಲು ಇದು ಉತ್ತಮ ಅವಕಾಶ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಒಲಿಂಪಿಕ್ 4 ವರ್ಷಗಳಿಗೊಮ್ಮೆ ಎರಡು ವಾರಗಳ ಕಾಲ ನಡೆಯುತ್ತದೆ. ಒಂದು ತಿಂಗಳಲ್ಲವಾದ್ದರಿಂದ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಗೆ ಯಾವುದೇ ತೊಂದರೆಯಲ್ಲ. ನಾಲ್ಕು ವರ್ಷಗಳ ನಂತರ ಮಹತ್ವದ ಟೂರ್ನಿಗೆ ನೀವು ವೇಳಾಪಟ್ಟಿ ರೂಪಿಸಲು ಅವಕಾಶ ನೀಡುತ್ತದೆ ಎಂದು ಗಟ್ಟಿಂಗ್ ಹೇಳಿದ್ದಾರೆ.