ETV Bharat / sports

ಸ್ಟಿವ್​ ಸ್ಮಿತ್​ಗೆ ಮತ್ತೆ ನಾಯಕತ್ವ ಜವಾಬ್ದಾರಿ... ಕ್ರಿಕೆಟ್​ ಆಸ್ಟ್ರೇಲಿಯಾದ ಸ್ಪಷ್ಟನೆ ಹೀಗಿದೆ?

author img

By

Published : Dec 22, 2020, 7:40 PM IST

ಸ್ಮಿತ್​ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಬಾಲ್​ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧದ ಜೊತೆಗೆ ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಸ್ಮಿತ್​ ಜೊತೆಗೆ ಟೆಸ್ಟ್‌ ಸರಣಿಯಲ್ಲಿ ಡೇವಿಡ್ ವಾರ್ನರ್ ಹಾಗೂ ಬೆನ್​ಕ್ರಾಪ್ಟ್​ ಕೂಡ ನಿಷೇಧದ ಶಿಕ್ಷೆಗೆ ಒಳಗಾಗಿದ್ದರು. ನಂತರ 2019ರ ವಿಶ್ವಕಪ್​ ವೇಳೆ ತಂಡಕ್ಕೆ ಮರಳಿದ್ದರು. ಆದರೆ ಸ್ಮಿತ್​ ಕೇವಲ ಬ್ಯಾಟ್ಸ್​ಮನ್​ ಆಗಿ ಮಾತ್ರ ಮುಂದುವರೆದಿದ್ದರು.

ಸ್ಟಿವ್ ಸ್ಮಿತ್​ಗೆ ಆಸ್ಟ್ರೇಲಿಯಾ ನಾಯಕತ್ವ
ಸ್ಟಿವ್ ಸ್ಮಿತ್​ಗೆ ಆಸ್ಟ್ರೇಲಿಯಾ ನಾಯಕತ್ವ

ಮೆಲ್ಬೋರ್ನ್​: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಸ್ಟೀವ್ ಸ್ಮಿತ್ ಅವರನ್ನು ಮತ್ತೆ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್​ ಆಸ್ಟ್ರೇಲಿಯಾದ ಅಧ್ಯಕ್ಷ ಅರ್ಲ್​ ಎಡ್ಡಿಂಗ್ಸ್,​ ಭವಿಷ್ಯಕ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಿತ್ ಒಬ್ಬರೇ ನಮ್ಮ ಆಯ್ಕೆಯಲ್ಲ, ನಮ್ಮಲ್ಲಿ ಆಯ್ಕೆಗಳಿವೆ ಎಂದು ತಿಳಿಸಿದ್ದಾರೆ.

ಸ್ಮಿತ್​ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಬಾಲ್​ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧದ ಜೊತೆಗೆ ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಸ್ಮಿತ್​ ಜೊತೆಗೆ ಟೆಸ್ಟ್‌ ಸರಣಿಯಲ್ಲಿ ಡೇವಿಡ್ ವಾರ್ನರ್ ಹಾಗೂ ಬೆನ್​ಕ್ರಾಪ್ಟ್​ ಕೂಡ ನಿಷೇಧದ ಶಿಕ್ಷೆಗೆ ಒಳಗಾಗಿದ್ದರು. ನಂತರ 2019ರ ವಿಶ್ವಕಪ್​ ವೇಳೆ ತಂಡಕ್ಕೆ ಮರಳಿದ್ದರು. ಆದರೆ ಸ್ಮಿತ್​ ಕೇವಲ ಬ್ಯಾಟ್ಸ್​ಮನ್​ ಆಗಿ ಮಾತ್ರ ಮುಂದುವರೆದಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾ
ಕ್ರಿಕೆಟ್ ಆಸ್ಟ್ರೇಲಿಯಾ

ಸ್ಮಿತ್ ಇದೀಗ ನಾಯಕತ್ವ ವಹಿಸಿಕೊಳ್ಳುವುದಕ್ಕೆ ಅರ್ಹರಾಗಿದ್ದಾರೆ. ಪ್ರಸ್ತುತ ಆಸೀಸ್ ತಂಡ ಭಾರತ ಟೆಸ್ಟ್‌ ಸರಣಿಯನ್ನಾಡುತ್ತಿದೆ. ಸ್ಮಿತ್ ನಾಯಕತ್ವದಿಂದ ಕೆಳಗಿಳಿದ ನಂತರ ಟಿಮ್ ಪೇನ್ ಆಸ್ಟ್ರೇಲಿಯಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಇದೀಗ ಕೆಲವು ಮಾಜಿ ಕ್ರಿಕೆಟಿಗರು ಮುಂದೊಮ್ಮೆ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ನಾಯಕರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ: 'ಪೃಥ್ವಿ ಶಾ ಮೇಲೆ ನಂಬಿಕೆಯಿಟ್ಟು ಭಾರತ ಆಡಳಿತ ಮಂಡಳಿ ಮತ್ತೊಂದು ಅವಕಾಶ ನೀಡಲಿ'

ಈ ಚರ್ಚೆ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್, "ಮೊದಲನೇಯದಾಗಿ ನಾವು ನಮ್ಮಲ್ಲಿ ಮೆಗ್(ಲ್ಯಾನಿಂಗ್​, ಆ್ಯರೋನ್​ (ಫಿಂಚ್), ಟಿಮ್ (ಪೇನ್)ನಂತಹ ಮೂವರು ಶ್ರೇಷ್ಠ ನಾಯಕರನ್ನು ಪಡೆದಿದ್ದೇವೆ. ಇನ್ನೂ ಕೆಲವು ಯುವ ನಾಯಕರು ಬರುತ್ತಿದ್ದಾರೆ. ಆದ್ದರಿಂದ ನಮಗೆ ಸ್ಟೀವ್ ಸ್ಮಿತ್ ಒಬ್ಬರೇ ನಾಯಕನ ಅಭ್ಯರ್ಥಿಯಲ್ಲ, ಎಲ್ಲದರಲ್ಲಿ ಯಾರು ಉತ್ತಮರೋ ಅವರು ನಾಯಕರಾಗುತ್ತಾರೆ" ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ

ಎಡ್ಡಿಂಗ್ಸ್,​ ಸ್ಮಿತ್​ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಮಂಡಳಿ ಕೇವಲ ಸ್ಮಿತ್​ ಒಬ್ಬರೊಂದಿಗೆ ಅಂಟಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.

"ಸ್ಟೀವ್(ಸ್ಮಿತ್​) ಒಬ್ಬ ಮಹಾನ್ ಯುವ ಆಟಗಾರ ಮತ್ತು ಅವರು ಹಿಂದೆ ಉತ್ತಮ ನಾಯಕನಾಗಿದ್ದರು. ತಂಡದ ನಾಯಕತ್ವ ಬದಲಾವಣೆಯ ಯೋಜನೆ ಇದೆ. ಆದರೆ ಮುಂದಿನ ನಾಯಕನನ್ನು ನೇಮಿಸುವ ವಿಚಾರದಲ್ಲಿ ಮಂಡಳಿಯಲ್ಲಿ ಕುಳಿತು ಇದುವರೆಗೆ ಯಾವುದೇ ಚರ್ಚೆ ನಡೆಸಿಲ್ಲ" ಎಂದು ಎಡ್ಡಿಂಗ್ಸ್ ಹೇಳಿದ್ದಾರೆ.

ಇದನ್ನು ಓದಿ: ಭಾರತಕ್ಕೆ ಕೊಹ್ಲಿ ಅನುಪಸ್ಥಿತಿ ಕಾಡಲಿದೆ, ಆದರೆ ಪಿತೃತ್ವ ರಜೆಗೆ ಅವರು ಖಂಡಿತ ಅರ್ಹ: ಸ್ಟಿವ್ ಸ್ಮಿತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.