ETV Bharat / sports

ಬಿಗ್​ಬ್ಯಾಶ್​ ಲೀಗ್​ನಲ್ಲಿ 3 ವಿಶೇಷ ಬದಲಾವಣೆ ತಂದ ಕ್ರಿಕೆಟ್ ಆಸ್ಟ್ರೇಲಿಯಾ!

author img

By

Published : Nov 16, 2020, 10:06 PM IST

ಡಿಸೆಂಬರ್​ 10ರಿಂದ 10ನೇ ಆವೃತ್ತಿಯ ಬಿಗ್​ಬ್ಯಾಶ್ ಲೀಗ್​ ಆರಂಭಗೊಳ್ಳಲಿದ್ದು, ಈ ನಿಯಮಗಳು ಚಾಲ್ತಿಗೆ ಬರಲಿವೆ. ಕ್ರಿಕೆಟ್​ ಆಸ್ಟ್ರೇಲಿಯಾದ ಈ ಹೊಸ ಪದ್ಧತಿ ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ತರಿಸಿದೆ.

ಬಿಗ್​ಬ್ಯಾಶ್​ ಲೀಗ್​ನಲ್ಲಿ ಮೂರು ವಿಶೇಷ ಬದಲಾವಣೆ

ಬ್ರಿಸ್ಬೇನ್​: ಐಪಿಎಲ್​ ನಂತರ ವಿಶ್ವದ ಪ್ರಮುಖ ಟಿ-20 ಟೂರ್ನಮೆಂಟ್ ಆಗಿರುವ ಆಸ್ಟ್ರೇಲಿಯಾದ ಬಿಗ್​ಬ್ಯಾಶ್​ ಈ ಬಾರಿ ಹೊಸದಾದ ಮೂರು ನಿಯಮಗಳನ್ನು ಜಾರಿಗೆ ತಂದಿದೆ. ​

ಬಿಗ್​ಬ್ಯಾಶ್​ 2020ರ ಆವೃತ್ತಿಯಲ್ಲಿ ಟೂರ್ನಿ ಆಕರ್ಷಿಸುವುದಕ್ಕಾಗಿ ಪವರ್​ ಸರ್ಜ್​, ಎಕ್ಸ್​-ಫ್ಯಾಕ್ಟರ್​ ಹಾಗೂ ಬ್ಯಾಶ್​ ಬೂಸ್ಟ್​ ಎಂಬ 3 ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಪವರ್ ಸರ್ಜ್:

ಟಿ-20 ಕ್ರಿಕೆಟ್​ನಲ್ಲಿ ಪ್ರಸ್ತುತ ಮೊದಲ 6 ಓವರ್‌ಗಳು ಬ್ಯಾಟಿಂಗ್ ಪವರ್ ಪ್ಲೇ ಆಗಿವೆ. ಈ ವೇಳೆ 30 ಅಡಿ ವೃತ್ತದಿಂದ ಆಚೆಗೆ ಕೇವಲ ಇಬ್ಬರು ಆಟಗಾರರಿಗೆ ಅವಕಾಶವಿರುತ್ತದೆ. ಬಿಗ್​ಬ್ಯಾಶ್​ನಲ್ಲಿ ಪವರ್ ಪ್ಲೇಯನ್ನು ಮೊದಲ 4 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಉಳಿದ 2 ಓವರ್​ಗಳನ್ನು 11ನೇ ಓವರ್ ಬಳಿಕ ತಮಗಿಷ್ಟ ಬಂದ ಸಮಯದಲ್ಲಿ 2ನೇ ಪವರ್​ ಪ್ಲೇ ಪಡೆಯುವ ಅವಕಾಶವನ್ನು ಬ್ಯಾಟಿಂಗ್ ಮಾಡುವ ತಂಡಕ್ಕೆ ನೀಡಲಾಗಿದೆ.

ಎಕ್ಸ್ - ಫ್ಯಾಕ್ಟರ್ ಪ್ಲೇಯರ್ :

11ರ ಬಳಗದ ಜೊತೆ ಇಬ್ಬರು ಹೆಚ್ಚುವರಿ ಆಟಗಾರರನ್ನ ಹೆಸರಿಸಲು ಅವಕಾಶ. ಆ ಇಬ್ಬರಲ್ಲಿ ಓರ್ವ ಆಟಗಾರರ 10ನೇ ಓವರ್ ಬಳಿಕ ಆಡುವ 11ರ ಬಳಗದಲ್ಲಿ ಬ್ಯಾಟಿಂಗ್ ಮಾಡದ ಅಥವಾ ಒಂದಕ್ಕಿಂತ ಕಡಿಮೆ ಓವರ್ ಎಸೆದಿರುವ ಯಾವುದೇ ಆಟಗಾರನ ಬದಲಿ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ನೀಡಲಾಗಿದೆ.

ಬ್ಯಾಶ್ ಬೂಸ್ಟ್ :-

10 ಓವರ್‌ಗಳಲ್ಲಿ ಚೇಸ್​ ಮಾಡುವ ತಂಡ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕಿಂತ ಹೆಚ್ಚು ರನ್ ​ಗಳಿಸಿದರೆ ಆ ತಂಡಕ್ಕೆ ಒಂದು ಬೋನಸ್ ಅಂಕ ನೀಡುವುದು. ಅದೇ ರೀತಿ ಮೊದಲ 10 ಓವರ್​ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕಿಂತ ಕಡಿಮೆ ಮೊತ್ತ ದಾಖಲಿಸಿದರೆ ಬೌಲಿಂಗ್ ಮಾಡುವ ತಂಡ ಬೋನಸ್ ಅಂಕ ಪಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.