ಟ್ರಿನಿಡಾಡ್: ಕೋವಿಡ್ 19 ಪರಿಣಾಮ ದೀರ್ಘ ಸಮಯದಿಂದ ಸ್ತಗಿತಗೊಂಡಿದ್ದ ಕ್ರಿಕೆಟ್ ಈಗಾಗಲೆ ಇಂಗ್ಲೆಂಡ್ನಲ್ಲಿ ಶುರುವಾಗಿದೆ. ಆದರೆ ಟ್ರಿನಿಡಾಡ್ನಲ್ಲಿ ಕೆರಿಬಿಯನ್ ಲೀಗ್ ಮೂಲಕ ಟಿ20 ಕ್ರಿಕೆಟ್ ಕೂಡ ಆರಂಭವಾಗಲಿದೆ .
2020ರ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗಲಿದ್ದು, ಟ್ರಿಂಬಾಂಗೊ ನೈಟ್ ರೈಡರ್ಸ್ ಮತ್ತು ಗಯಾನ ಅಮೇಜಾನ್ ವಾರಿಯರ್ಸ್ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ. ಟ್ರೆನಿಡಾಡ್‌ನ ಎರಡು ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದ್ದು, ಎಲ್ಲಾ ತಂಡಗಳ ಆಟಗಾರರು ಬಯೋ ಸೆಕ್ಯೂರ್ ವಾತಾವರಣದಲ್ಲಿ ಇರಬೇಕಾಗಿದೆ.
ಒಟ್ಟಾರೆ ಟೂರ್ನಿಯಲ್ಲಿ 23 ದಿನಗಳ ಕಾಲ ನಡೆಯಲಿದ್ದು ಫೈನಲ್ ಪಂದ್ಯ ಸೆಪ್ಟೆಂಬರ್ 10ರಂದು ಮುಕ್ತಾಯವಾಗಲಿದೆ.
ಟ್ರಿನಿಡಾಡ್‌ನ ಟರೌಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಕಿರಾನ್ ಪೊಲಾರ್ಡ್, ಡ್ವೇಯ್ನ್ ಬ್ರಾವೋ, ಸುನಿಲ್ ನರೈನ್, ಕಾಲಿನ್ ಮನ್ರೋ ಅಂತಹ ಸ್ಫೋಟಕ ಬ್ಯಾಟ್ಸ್ಮನ್ಗಳು ಬೌಂಡರಿ ಸಿಕ್ಸರ್ಗಳ ರಸದೌತಣ ನೀಡಲಿದ್ದಾರೆ.
ಬಾರ್ಬೇಡೊಸ್ ಟ್ರೈಡೆಂಟ್ಸ್ ಮತ್ತು ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್ ಎರಡನೇ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 3 ಗಂಟೆಗೆ ಆರಂಭವಾಗಲಿದೆ.