ಮುಂದಿನ ತಿಂಗಳು 6ರಿಂದ ನಡೆಯುವ ಭಾರತ ವಿರುದ್ದದ ಸರಣಿಯಂದ ದೂರ ಉಳಿಯಲು ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ನಿರ್ಧರಿಸಿದ್ದಾರೆ.
ಮುಂದಿನ ತಿಂಗಳು ನಡೆಯುವ ಭಾರತ ಹಾಗೂ ವಿಂಡೀಸ್ ನಡುವಿನ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ ಎಂದು ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಗೇಲ್ ತಿಳಿಸಿದ್ದಾರೆ.
ಸಂದರ್ಶನದವೊಂದರಲ್ಲಿ ಮಾತನಾಡಿದ ಅವರು, ಮುಂದಿನ ಭಾರತದಲ್ಲಿ ನಡೆಯುವ ಏಕದಿನ ಹಾಗೂ ಭಾರತ ಸರಣಿಗೆ ತಮಗೆ ಕರೆ ಬಂದಿದೆ. ಆದರೆ 2020 ವಿಶ್ವಕಪ್ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಇದಲ್ಲದೆ ಅವರು ಮುಂಬರುವ ಬಿಗ್-ಬ್ಯಾಶ್, ಬಾಂಗ್ಲಾ ಪ್ರೀಮಿಯರ್ ಲೀಗ್ಗಳಲ್ಲಿಯೂ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಇದೇ ತಿಂಗಳಲ್ಲಿ ನಡೆದ ಜೋಷಿ ಸ್ಟಾರ್ ಟೂರ್ನಿಯಲ್ಲಿ ಆಡಿದ 6 ಇನ್ನಿಂಗ್ಸ್ಗಳಿಂದ ಕೇವಲ 101 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದರು. ನಾನು ಒಂದು, ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲವೆಂದ ಮಾತ್ರಕ್ಕೆ ಕ್ರಿಸ್ ಗೇಲ್ ತಂಡಕ್ಕೆ ಹೊರೆಯಾಗುವುದಿಲ್ಲ ಎಂದು ಹೇಳುವ ಮೂಲಕ ಟೀಕಾಕರಿಗೂ ತಿರುಗೇಟು ನೀಡಿದರು.