ETV Bharat / sports

ವಿಶ್ವಕಪ್​​ ಕೊನೆ ಪಂದ್ಯದಲ್ಲೂ ಗೇಲ್​ ನಿರಾಸೆ... ಕೇವಲ 7 ರನ್​ಗಳಿಸಿ ವಿಕೆಟ್​ ಒಪ್ಪಿಸಿದ ದೈತ್ಯ! - ನಿರಾಸೆ

ವಿಶ್ವಕಪ್​​ನಲ್ಲಿ ರನ್​ ಮಳೆ ಹರಿಸಲಿದ್ದಾರೆ ಎಂಬ ಮಾತು ಕ್ರಿಸ್​ ಗೇಲ್​ ಸುಳ್ಳಾಗಿಸಿದ್ದು, ಆಡಿರುವ 9 ಪಂದ್ಯಗಳಿಂದಲೂ ಒಂದೇ ಒಂದು ಶತಕ ಮೂಡಿ ಬಂದಿಲ್ಲ.

ಕ್ರಿಸ್​ ಗೇಲ್​
author img

By

Published : Jul 4, 2019, 4:49 PM IST

Updated : Jul 4, 2019, 4:59 PM IST

ಲೀಡ್ಸ್​​: ವೃತ್ತಿ ಬದುಕಿನ ಕೊನೆ ಏಕದಿನ ವಿಶ್ವಕಪ್​ ಆಡಿದ ಕ್ರಿಕೆಟ್​ ದೈತ್ಯ ಕ್ರಿಸ್​ ಗೇಲ್​​ ತಮ್ಮ ಕೊನೆಯ ಪಂದ್ಯದಲ್ಲೂ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 7ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು.

ದುರ್ಬಲ ತಂಡದ ವಿರುದ್ಧ ಬ್ಯಾಟಿಂಗ್​ ದೈತ್ಯ ಗೇಲ್​ ರನ್​ಮಳೆ ಹರಿಸುತ್ತಾರೆಂದು ಚಾತಕ ಪಕ್ಷಿಗಳಂತೆ ಕಾಯ್ದು ಕುಳಿತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ವಿಶ್ವಕಪ್​​ನಲ್ಲಿ ಈ ಹಿಂದಿನ ಪಂದ್ಯಗಳಲ್ಲೂ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಗೇಲ್​ ಯಾವುದೇ ಪಂದ್ಯಗಳಲ್ಲೂ ಶತಕ ಸಿಡಿಸಿಲ್ಲ. ಪಾಕಿಸ್ತಾನದ ವಿರುದ್ಧ 50ರನ್​, ಆಸ್ಟ್ರೇಲಿಯಾ ವಿರುದ್ಧ 21, ಇಂಗ್ಲೆಂಡ್​ ವಿರುದ್ಧ 36 ರನ್​, ಬಾಂಗ್ಲಾ ವಿರುದ್ಧ 0, ನ್ಯೂಜಿಲ್ಯಾಂಡ್​ ವಿರುದ್ಧ 87ರನ್​, ಭಾರತದ ವಿರುದ್ಧ 6ರನ್​ ಹಾಗೂ ಶ್ರೀಲಂಕಾ ವಿರುದ್ಧ ಕೇವಲ 35 ರನ್​ಗಳಿಕೆ ಮಾಡಿದ್ದಾರೆ. ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ 7ರನ್​ಗಳಿಕೆ ವಿಕೆಟ್​ ಒಪ್ಪಿಸಿದರು.

ಏಕದಿನ ಕ್ರಿಕೆಟ್​ ಪಂದ್ಯಗಳಿಂದಲೇ 1,118 ಬೌಂಡರಿ ಹಾಗೂ 326 ಸಿಕ್ಸರ್​ ಬಾರಿಸಿರುವ ಗೇಲ್​, ಈ ವಿಶ್ವಕಪ್​​ನ ಮೆಗಾ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿರುವುದಂತೂ ಸುಳ್ಳಲ್ಲ.

Intro:Body:

ವಿಶ್ವಕಪ್​​ನ ಕೊನೆ ಪಂದ್ಯದಲ್ಲೂ ಗೇಲ್​ ನಿರಾಸೆ... ಕೇವಲ 7ರನ್​ಗಳಿಸಿ ವಿಕೆಟ್​ ಒಪ್ಪಿಸಿದ ದೈತ್ಯ! 

ಲೀಡ್ಸ್​​: ವೃತ್ತಿ ಬದುಕಿನ ಕೊನೆ ಏಕದಿನ ವಿಶ್ವಕಪ್​ ಆಡಿದ ಕ್ರಿಕೆಟ್​ ದೈತ್ಯ ಕ್ರಿಸ್​ ಗೇಲ್​​ ತಮ್ಮ ಕೊನೆಯ ಪಂದ್ಯದಲ್ಲೂ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 7ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. 

ದುರ್ಬಲ ತಂಡದ ವಿರುದ್ಧ ಬ್ಯಾಟಿಂಗ್​ ದೈತ್ಯ ಗೇಲ್​ ರನ್​ಮಳೆ ಹರಿಸುತ್ತಾರೆಂದು ಚಾತಕ ಪಕ್ಷಿಗಳಂತೆ ಕಾಯ್ದು ಕುಳಿತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 

ವಿಶ್ವಕಪ್​​ನಲ್ಲಿ ಈ ಹಿಂದಿನ ಪಂದ್ಯಗಳಲ್ಲೂ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಗೇಲ್​ ಯಾವುದೇ ಪಂದ್ಯಗಳಲ್ಲೂ ಶತಕ ಸಿಡಿಸಿಲ್ಲ. ಪಾಕಿಸ್ತಾನದ ವಿರುದ್ಧ 50ರನ್​, ಆಸ್ಟ್ರೇಲಿಯಾ ವಿರುದ್ಧ 21, ಇಂಗ್ಲೆಂಡ್​ ವಿರುದ್ಧ 36ರನ್​, ಬಾಂಗ್ಲಾ ವಿರುದ್ಧ 0, ನ್ಯೂಜಿಲ್ಯಾಂಡ್​ ವಿರುದ್ಧ 87ರನ್​, ಭಾರತದ ವಿರುದ್ಧ 6ರನ್​ ಹಾಗೂ ಶ್ರೀಲಂಕಾ ವಿರುದ್ಧ ಕೇವಲ 35ರನ್​ಗಳಿಕೆ ಮಾಡಿದ್ದಾರೆ. ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ 7ರನ್​ಗಳಿಕೆ ವಿಕೆಟ್​ ಒಪ್ಪಿಸಿದರು. 

ಏಕದಿನ ಕ್ರಿಕೆಟ್​ ಪಂದ್ಯಗಳಿಂದಲೇ 1,118 ಬೌಂಡರಿ ಹಾಗೂ 326 ಸಿಕ್ಸರ್​ ಬಾರಿಸಿರುವ ಗೇಲ್​, ಈ ವಿಶ್ವಕಪ್​​ನ ಮೆಗಾಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿರುವುದಂತೂ ಸುಳ್ಳಲ್ಲ. 

Conclusion:
Last Updated : Jul 4, 2019, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.