ETV Bharat / sports

ಎಕ್ಸ್​ಕ್ಲ್ಯೂಸಿವ್.. ಮಹಿ ಭಾಯ್​ ಜತೆ ಸಾಕಷ್ಟು ನೆನಪುಗಳಿವೆ, ಮತ್ತೆ ಅವರ ನಾಯಕತ್ವದಲ್ಲಿ ಆಡುವ ಬಯಕೆ : ಪೂಜಾರ - ಧೋನಿ ನಾಯಕತ್ವದಲ್ಲಿ ಪೂಜಾರ ಕಣಕ್ಕೆ

ನೀವು 0-1ರಲ್ಲಿ ಹಿನ್ನಡೆ ಹೊಂದಿದರೆ ಅದು ಸರಣಿಯನ್ನೇ ಕಳೆದುಕೊಂಡ ಹಾಗಲ್ಲ. ನಿಮಗೆ ಕಮ್​ಬ್ಯಾಕ್ ಮಾಡಲು ಸಾಕಷ್ಟು ಸಮಯವಿರುತ್ತದೆ. ಅಲ್ಲಿ ಯಾವಾಗಲೂ ಸ್ಪರ್ಧೆ ಇರುತ್ತದೆ. ಪ್ರಬಲ ತಂಡದ ವಿರುದ್ಧ ಆಡುವಾಗ, ಅವರು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತಾರೆ. ಆದರೆ, ನೀವು ಬೌನ್ಸ್​ಬ್ಯಾಕ್ ಮಾಡುವುದು ಪ್ರಮುಖವಾಗಿರುತ್ತದೆ..

Cheteshwar Pujara
Cheteshwar Pujara
author img

By

Published : Mar 29, 2021, 10:32 PM IST

ಮುಂಬೈ: ಭಾರತ ಟೆಸ್ಟ್​ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಖಾಯಂ ಆಟಗಾರನಾಗಿರುವ ಚೇತೇಶ್ವರ್​ ಪೂಜಾರ 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸ್ಟ್ರೇಲಿಯನ್ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ದಂಡಿಸಿ, 3 ಶತಕ ಸಿಡಿಸಿ ಮಿಂಚಿದ್ದರು. 1200ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ್ದು ಅವರ ಟೆಸ್ಟ್​ ಕ್ರಿಕೆಟ್​ನ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಚೇತೇಶ್ವರ್ ಪೂಜಾರ ಸಂದರ್ಶನ
ಚೇತೇಶ್ವರ್ ಪೂಜಾರ ಸಂದರ್ಶನ

ಆದರೆ, 2020ರ ಪ್ರವಾಸದಲ್ಲಿ ಚೇತೇಶ್ವರ್​ ಪೂಜಾರ ಅವರಿಂದ ರನ್ ಸರಾಗವಾಗಿ ಬರಲಿಲ್ಲ. ಜೋಶ್ ಹೆಜಲ್​ವುಡ್​, ಮಿಚೆಲ್ ಸ್ಟಾರ್ಕ್​ ಮತ್ತು ಪ್ಯಾಟ್​ ಕಮ್ಮಿನ್ಸ್​ರಂತಹ ಮಾರಕ ವೇಗಿಗಳ ಎದುರು ತಡೆಗೋಡೆಯಾಗಿ ನಿಂತು ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾ ಐತಿಹಾಸಿಕ ಸರಣಿ ಗೆಲ್ಲಲು ನೆರವಾದರು.

ಅದರಲ್ಲೂ ಬ್ರಿಸ್ಬೇನ್​ನ ಗಬ್ಬಾದಲ್ಲಿ ಅವರು ತೋರಿದ ಆಟ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಯುವ ಆಟಗಾರರು ಮತ್ತು ಪೂಜಾರರ ತಾಳ್ಮೆಯ ಆಟದ ಫಲ, ಭಾರತ ಸತತ ಎರಡನೇ ಬಾರಿಗೆ ಆಸೀಸ್​ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದು ಬೀಗಿತ್ತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲವಾದರೂ, ಅವರ ಉಪಸ್ಥಿತಿ ತಂಡದಲ್ಲಿ ಆಶಾ ಭಾವವನ್ನು ನೀಡಿದೆ. ಇನ್ನು, ಇವರ ಆಟವನ್ನು ದಿಗ್ಗಜ ರಾಹುಲ್ ದ್ರಾವಿಡ್​ಗೆ ಹೋಲಿಸುವುದು ಪೂಜಾರಗೆ ಸಂದಿರುವ ಗೌರವ ಎನ್ನಬಹುದು.

ಚೇತೇಶ್ವರ್ ಪೂಜಾರ ಸಂದರ್ಶನ
ಚೇತೇಶ್ವರ್ ಪೂಜಾರ ಸಂದರ್ಶನ

ಇದೀಗ ಇಂಗ್ಲೆಂಡ್ ಸರಣಿ ಮುಗಿಸಿ ಬಂದಿರುವ ಪೂಜಾರ ಐಪಿಎಲ್​ನಲ್ಲಿ 7 ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾರರನ್ನು ಎಂಸ್​ ಧೋನಿ ನಾಯಕತ್ವದ ಸಿಎಸ್​ಕೆ ತಂಡ 50 ಲಕ್ಷ ರೂ.ಗಳಿಗೆ ಖರೀದಿಸಿದೆ. ಬಿಳಿ ಬಣ್ಣದ ಜರ್ಸಿಯಲ್ಲಿ ಮಾತ್ರ ಕಾಣಸಿಗುತ್ತಿದ್ದ ಪೂಜಾರ ದೀರ್ಘಸಮಯದ ನಂತರ ಬಣ್ಣದ ಜರ್ಸಿ ತೊಡಲಿದ್ದಾರೆ. ತಮ್ಮ ಐಪಿಎಲ್ ಕಮ್​ಬ್ಯಾಕ್​ ಸೇರಿ ಕೆಲ ಆಸಕ್ತಿಕರ ವಿಚಾರಗಳನ್ನು ಈಟಿವಿ ಭಾರತದ ಜೊತೆ ಪೂಜಾರ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನೀವು ಆಡಿದ್ದೀರಾ. ಈ ವೇಳೆ ಬಯೋ ಬಬಲ್​ನಲ್ಲಿ ಜೀವನ ಹೇಗಿತ್ತು?

ಬಯೋ ಬಬಲ್​ನಲ್ಲಿರುವುದು ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವ ಮೊದಲು ಇದ್ದಷ್ಟು ಸುಲಭವಲ್ಲ. ಇದು ತುಂಬಾ ಕಠಿಣ. ಆದರೆ, ವೃತ್ತಿಪರ ಕ್ರಿಕೆಟಿಗನಾಗಿರುವುದರಿಂದ ಮಾನಸಿಕವಾಗಿ ಕಠಿಣರಾಗಿರಬೇಕು. ಯಾವುದೇ ಸವಾಲುಗಳಿಗೆ ಸಿದ್ಧರಾಗಿರಬೇಕು. ಅದಕ್ಕಾಗಿ ನೀವು ಒಂದು ಮಾರ್ಗ ಕಂಡು ಹಿಡಿದುಕೊಂಡು ಬಬಲ್ ಜೀವನಕ್ಕೆ ಒಗ್ಗಿಕೊಳ್ಳಬೇಕು.

ತುಂಬಾ ವರ್ಷಗಳ ನಂತರ ಐಪಿಎಲ್​ನಲ್ಲಿ ಆಡುವ ಅವಕಾಶ ಸಿಕ್ಕಾಗ ನಿಮಗುಂಟಾದ ಭಾವನೆ ಹೇಗಿತ್ತು?

ಐಪಿಎಲ್‌ನ ಭಾಗವಾಗುವುದು ನಾನು ಯಾವಾಗಲೂ ನೆನೆಪಿಸಿಕೊಳ್ಳುವ ವಿಷಯ. ಕಳೆದ ಕೆಲವು ವರ್ಷಗಳಿಂದ ನಾನು ಅದರ ಭಾಗವಾಗಿರದಿರುವುದು ದುರದೃಷ್ಟಕರ. ಆದರೆ, ಐಪಿಎಲ್‌ನ ಭಾಗವಾಗಿರುವುದನ್ನು ಸದಾ ಆನಂದಿಸುತ್ತೇನೆ. ಈ ನಿರ್ದಿಷ್ಟ ಸ್ವರೂಪದಲ್ಲಿ ಆಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ. ಇದೀಗ ನಾನು ಸಿಎಸ್‌ಕೆ ಭಾಗವಾಗಿದ್ದೇನೆ. ನನ್ನ ಮೇಲೆ ನಂಬಿಕೆಯನ್ನು ತೋರಿಸಿದ ಮತ್ತು ತಂಡದ ಭಾಗವಾಗಲು ಅವಕಾಶವನ್ನು ನೀಡಿದ ಸಿಎಸ್​ಕೆ ಪ್ರಾಂಚೈಸಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ.

ಚೇತೇಶ್ವರ್ ಪೂಜಾರ ಸಂದರ್ಶನ

ಟೆಸ್ಟ್​ನಿಂದ ಐಪಿಎಲ್​ನಂತಹ ಲೀಗ್​ನಲ್ಲಿ ಆಡುವಾಗ ನಿಮ್ಮ ಆಟದ ವಿಧಾನದ ಬಗ್ಗೆ ಹೇಳಿ?

ನಾನು ಸಯ್ಯದ್​ ಮುಷ್ತಾಕ್ ಅಲಿ ಮತ್ತು ಸೌರಾಷ್ಟ್ರ ಪ್ರೀಮಿಯರ್​ ಲೀಗ್​ನಲ್ಲಿ ಸಾಕಷ್ಟು ಟಿ20 ಕ್ರಿಕೆಟ್ ಆಡಿದ್ದೇನೆ. ದೇಶಿಯ ಟೂರ್ನಿ ಸೇರಿದಂತೆ ಕೌಂಟಿ ಕ್ರಿಕೆಟ್​ನಲ್ಲಿ ವೈಟ್​ ಬಾಲ್​ ಪಂದ್ಯಗಳನ್ನು ಆಡಿದ್ದೇನೆ. ಅಲ್ಲಿ ಹೇಗೆ ಹೋಗಬೇಕೆಂಬುದು ನನಗೆ ಗೊತ್ತಿದೆ. ಜೊತೆಗೆ ಮಹಿ ಭಾಯ್​, ಕೋಚ್​ಗಳಾದ​ ಫ್ಲೆಮಿಂಗ್,​ ಮೈಕ್ ಹಸ್ಸಿ ರೀತಿಯ ಅನುಭವಿಗಳನ್ನು ಹೊಂದಿರುವ ತಂಡದ ಭಾಗವಾಗುತ್ತಿರುವುದರಿಂದ ನಾನು ಈ ಮಾದರಿಯಲ್ಲಿ ಹೇಗೆ ಹೊಂದಿಕೊಳ್ಳಬೇಕು ಎಂಬುದರ ಬಗ್ಗೆ ಅವರಿಂದ ಮಾರ್ಗದರ್ಶನ ಪಡೆಯಲಿದ್ದೇನೆ. ಎಲ್ಲಕ್ಕಿಂತ ನಾನು ತುಂಬಾ ಆತ್ಮವಿಶ್ವಾಸದಲ್ಲಿದ್ದೇನೆ. ಈಗಾಗಲೇ ಉತ್ತಮ ತಯಾರಿ ಆರಂಭಿಸಿದ್ದೇನೆ.

ಮತ್ತೆ ಎಂಎಸ್​ ಧೋನಿ ನಾಯಕತ್ವದಲ್ಲಿ ಆಡಲು ಹೇಗನ್ನಿಸುತ್ತಿದೆ?

ನನಗೆ ಈ ಹಿಂದೆ ಮಹಿ ಭಾಯ್ ಅವರೊಂದಿಗೆ ಆಡಿದ ನೆನಪುಗಳು ಬಹಳಷ್ಟಿವೆ. 2010ರಲ್ಲಿ ಅವರ ನಾಯಕತ್ವದಲ್ಲೇ ನಾನು ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದೇನೆ. ಮತ್ತೆ ಅವರೊಂದಿಗೆ ಆಡುವುದಕ್ಕೆ ಎದುರು ನೋಡುತ್ತಿದ್ದೇನೆ. ಇದು ವಿಭಿನ್ನ ಸ್ವರೂಪ, ವಿಭಿನ್ನ ವಿಧಾನವಾಗಿರುವುದರಿಂದ ಸಾಧ್ಯವಾದಷ್ಟು ವಿಷಯಗಳನ್ನು ಅವರಿಂದ ಕಲಿಯಲು ಎದುರು ನೋಡುತ್ತಿದ್ದೇನೆ.

ನಿಮ್ಮ ಅಭ್ಯಾಸ ಹೇಗೆ ನಡೆಯುತ್ತಿದೆ? ತಂತ್ರಗಾರಿಕೆ ಅಥವಾ ಶಾಟ್ ಆಯ್ಕೆಯಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದೀರಾ?

ಇಲ್ಲಿ ಆಡುವಾಗ ನೀವು ಅಭಿವ್ಯಕ್ತಿಶೀಲರಾಗಿರಬೇಕು. ಈ ಸ್ವರೂಪದಲ್ಲಿ ನಿಮಗೆ ಸಾಕಷ್ಟು ಸ್ವಾತಂತ್ರ್ಯವಿರುತ್ತದೆ. ಸರಿಯಾದ ಹೊಡೆತಗಳನ್ನು ಆರಿಸಬೇಕು, ಕೆಲವು ವಿಷಯಗಳಲ್ಲಿ ನಾನು ಕೆಲಸ ಮಾಡುವ ಅಗತ್ಯವಿದೆ. ಆಟದ ಯೋಜನೆಗಳ ಬಗ್ಗೆ ನಾನು ನಿರ್ದಿಷ್ಟವಾಗಿ ಏನೂ ಹೇಳಲು ಸಾಧ್ಯವಿಲ್ಲ. ಆದರೆ, ನಿಮ್ಮ ಆಟದಲ್ಲಿ ನೀವು ಹೊಂದಿರುವ ಶಾಟ್​ಗಳನ್ನು ಯಾವಾಗ ಆಡಬೇಕೆಂಬುದರ ಬಗ್ಗೆ ನಿಮಗೆ ತಿಳಿದಿರಬೇಕು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 0-1ರಲ್ಲಿ ಹಿನ್ನಡೆ ಅನುಭವಿಸಿಯೂ ಕಮ್​ಬ್ಯಾಕ್ ಮಾಡಿ, ಪ್ರಾಬಲ್ಯ ಸಾಧಿಸಲು ಹೇಗೆ ಸಾಧ್ಯವಾಯಿತು?

ನಾವು 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಮೊದಲ ಪಂದ್ಯವನ್ನು ಗೆದ್ದಿದ್ದೆವು. ಇದು ಸರಣಿ ಗೆಲ್ಲಲು ಸಹಾಯವಾಯಿತು. ಆದರೆ, ಈ ಬಾರಿ ಮೊದಲ ಪಂದ್ಯದಲ್ಲೇ ಸೋಲು ಕಂಡೆವು. ಯಾಕೆಂದರೆ ನಾವು ಪಿಂಕ್​ಬಾಲ್​ನಲ್ಲಿ ಆಡಿದ್ದರಿಂದ ಆ ಪಂದ್ಯ ತುಂಬಾ ಕಠಿಣವಾಗಿತ್ತು. ಆದರೆ, ನೀವು ಉತ್ತಮ ತಂಡವನ್ನು ಹೊಂದಿದ್ದರೆ ಹೇಗೆ ಬೌನ್ಸ್​ ಬ್ಯಾಕ್ ಮಾಡಬೇಕೆಂದು ತಿಳಿದಿರುತ್ತದೆ.

ನೀವು 0-1ರಲ್ಲಿ ಹಿನ್ನಡೆ ಹೊಂದಿದರೆ ಅದು ಸರಣಿಯನ್ನೇ ಕಳೆದುಕೊಂಡ ಹಾಗಲ್ಲ. ನಿಮಗೆ ಕಮ್​ಬ್ಯಾಕ್ ಮಾಡಲು ಸಾಕಷ್ಟು ಸಮಯವಿರುತ್ತದೆ. ಅಲ್ಲಿ ಯಾವಾಗಲೂ ಸ್ಪರ್ಧೆ ಇರುತ್ತದೆ. ಪ್ರಬಲ ತಂಡದ ವಿರುದ್ಧ ಆಡುವಾಗ, ಅವರು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತಾರೆ. ಆದರೆ, ನೀವು ಬೌನ್ಸ್​ಬ್ಯಾಕ್ ಮಾಡುವುದು ಪ್ರಮುಖವಾಗಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.