ETV Bharat / sports

ಚೇತನ್​ ಚೌಹಾಣ್​ಗೆ ಭಾರತೀಯ ಕ್ರಿಕೆಟ್​ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು : ಸೌರವ್ ಗಂಗೂಲಿ - ಚೇತನ್​ ಚೌಹಾಣ್​ ಸಾವಿಗೆ ಗಂಗೂಲಿ ಸಂತಾಪ

ನೀವು ನಮ್ಮೊಂದಿಗೆ ಸದಾ ಇರುತ್ತೀರಾ, ನಿಮ್ಮ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಗಂಗೂಲಿ ಚೌಹಾನ್​ ಸಾವಿಗೆ ಸಂತಾಪ ಸೂಚಿಸಿದ್ದಾರೆ

ಸೌರವ್ ಗಂಗೂಲಿ -ಚೇತನ್​ ಚೌಹಾಣ್
ಸೌರವ್ ಗಂಗೂಲಿ -ಚೇತನ್​ ಚೌಹಾಣ್
author img

By

Published : Aug 17, 2020, 4:21 PM IST

ಮುಂಬೈ: ಸೋಮವಾರವಷ್ಟೇ ಕೋವಿಡ್​ 19 ಪಾಸಿಟಿವ್​ ಹೊಂದಿದ್ದು ಮೃತಪಟ್ಟ ಚೇತನ್​ ಚೌಹಾಣ್​ ಅವರು ಭಾರತೀಯ ಕ್ರಿಕೆಟ್​ನೊಂದಿಗೆ ಅಪಾರವಾದ ಒಲವು ಹೊಂದಿದ್ದರು ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

ಚೇತನ್​ ಚೌಹಾಣ್​ ಕೋವಿಡ್​ 19 ಪಾಸಿಟಿವ್​ ನಂತರ ಆಸ್ಪತ್ರೆ ಸೇರಿಕೊಂಡಿದ್ದರು. ಆದರೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕೊನೆಗೂ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು.

ಚೇತನ್ ಚೌಹಾನ್ ಅವರ ನಿಧನವನ್ನು ತಿಳಿದು ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದಾಗ ನಾನು ಅವರೊಂದಿಗೆ ತುಂಬಾ ಸಮಯ ಕಳೆದಿದ್ದೇನೆ. ಅವರು ಕಠಿಣ ಆರಂಭಿಕ ಬ್ಯಾಟ್ಸ್‌ಮನ್ ಮಾತ್ರವಲ್ಲದೆ , ತುಂಬಾ ಹಾಸ್ಯ ಪ್ರಜ್ಞೆ ಹೊಂದಿದ್ದ ವ್ಯಕ್ತಿಯಾಗಿದ್ದರು. ಮತ್ತು ಭಾರತೀಯ ಕ್ರಿಕೆಟ್‌ಗೆ ಅಪಾರವಾದ ಬಾಂಧವ್ಯ ಹೊಂದಿದ್ದರು ”ಎಂದು ಗಂಗೂಲಿ ಬಿಸಿಸಿಐನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚೇತನ್​ ಚೌಹಾಣ್
ಚೇತನ್​ ಚೌಹಾಣ್

ಈ ವರ್ಷ ನಾವು ಕೆಲವು ಪ್ರೀತಿಪಾತ್ರರಾದ ವ್ಯಕ್ರಿಗಳನ್ನು ಕಳೆದುಕೊಳ್ಳುವುದರಿಂದ ಮರೆಯುವುದನ್ನು ಕಲಿಯಬೇಕಿದೆ. ನೀವು ನಮ್ಮೊಂದಿಗೆ ಸದಾ ಇರುತ್ತೀರಾ, ನಿಮ್ಮ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಗಂಗೂಲಿ ತಿಳಿಸಿದ್ದಾರೆ.

ಸುನಿಲ್​ ಗವಾಸ್ಕರ್​ ಅವರ ನೆಚ್ಚಿನ ಆರಂಭಿಕ ಜೊತೆಗಾರನಾಗಿದ್ದ ಚೇತನ್​ ಚೌಹಾಣ್​​ ಭಾರತದ ಪರ 40 ಟೆಸ್ಟ್​ ಹಾಗೂ 7 ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟಾರೆ 3010 ರನ್​ಗಳಿಸಿದ್ದಾರೆ. ಅವರು ಸುನಿಲ್​ ಗವಾಸ್ಕರ್​ ಜೊತೆಗೆ 10 ಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಈ ಜೋಡಿ ಭಾರತದ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಒಂದಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.