ಅಬುಧಾಬಿ: ಕೆಕೆಆರ್ ತಂಡದ ವಿರುದ್ಧ ಆರ್ಸಿಬಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಕೇವಲ 84 ರನ್ಗಳಿಗೆ ನಿಯಂತ್ರಿಸಿದೆ. ಇದಕ್ಕೆಲ್ಲಾ ಕಾರಣ ನಾಯಕ ಕೊಹ್ಲಿ ತೆಗೆದುಕೊಂಡ ದಿಢೀರ್ ನಿರ್ಧಾರ ಎಂದು ಸ್ಪಿನ್ನರ್ ಯುಜುವೇಂದ್ರ ಚಹಾಲ್ ಹೇಳಿದ್ದಾರೆ.
ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ನಡೆಸಲು ತೀರ್ಮಾನಿಸಿತ್ತು. ಕೊಹ್ಲಿ ಮೊದಲ ಓವರ್ಅನ್ನು ಕ್ರಿಸ್ ಮೋರಿಸ್ಗೆ ನೀಡಿದರು. ಮೋರಿಸ್ ಕೇವಲ 3 ರನ್ ನೀಡಿದ್ದರು. ನಂತರದ ಓವರ್ ಅನ್ನು ಸುಂದರ್ ಬದಲಿಗೆ ಸಿರಾಜ್ಗೆ ನೀಡಿದರು. ಸಿರಾಜ್ ಆ ಓವರ್ನಲ್ಲಿ 2 ವಿಕೆಟ್ ಪಡೆದಿದ್ದಲ್ಲದೆ ಮೇಡನ್ ಮಾಡಿದರು.
ಕೆಕೆಆರ್ ಇನ್ನಿಂಗ್ಸ್ ನಂತರ ಮಾತನಾಡಿದ ಚಹಾಲ್, ಮೋರಿಸ್ ಬೌಲಿಂಗ್ ಮುಗಿಸಿದ ಮೇಲೆ ಎಂದಿನಂತೆ ಸುಂದರ್ 2ನೇ ಓವರ್ ಮಾಡಲು ಬಂದರೂ, ಆದರೆ ಕೊಹ್ಲಿ ಭಯ್ಯ ಈ ದಿನ ಸಿರಾಜ್ಗೆ ಬೌಲಿಂಗ್ ಮಾಡಲು ಹೇಳಿದರು ಎಂದು ತಿಳಿಸಿದ್ದಾರೆ.
ಇದೇ ಮಾತನ್ನು ಕೋಚ್ ಕೂಡ ಹೇಳಿದ್ದು ಸಿರಾಜ್ಗೆ 2ನೇ ಓವರ್ ಬೌಲಿಂಗ್ ನೀಡುವ ಯೋಜನೆ ಕೊಹ್ಲಿ ಆನ್ಫೀಲ್ಡ್ನಲ್ಲಿ ತೆಗೆದುಕೊಂಡ ನಿರ್ಧಾರ ಎಂದು ನಾಯಕನನ್ನು ಮೆಚ್ಚಿಕೊಂಡಿದ್ದಾರೆ.
ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಸಿರಾಜ್ ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 2 ಮೇಡನ್ ತೆಗೆದಿದ್ದಲ್ಲೆ ಕೇವಲ 8 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ಟೂರ್ನಿಯಲ್ಲೇ ಅದ್ಭುತವಾಗಿ ಬೌಲಿಂಗ್ ಮಾಡಿದ ಆರ್ಸಿಬಿ ಬೌಲರ್ಗಳು ಕೆಕೆಆರ್ ತಂಡವನ್ನು ಅವರ ಐಪಿಎಲ್ನ 2ನೇ ಕನಿಷ್ಠ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಈ ಮೂಲಕ 2017ರಲ್ಲಿ ಕೆಕೆಆರ್ ತಂಡ 49ಕ್ಕೆ ಆಲೌಟ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡಿತು.