ETV Bharat / sports

ಬ್ರಾಡ್​ ದಾಳಿಗೆ ತತ್ತರಿಸಿದ ವೆಸ್ಟ್​ ಇಂಡೀಸ್​ 197ಕ್ಕೆ ಆಲೌಟ್​... ಇಂಗ್ಲೆಂಡ್​ಗೆ 172 ರನ್​ಗಳ ಇನ್ನಿಂಗ್ಸ್​ ಮುನ್ನಡೆ - ಸ್ಟುವರ್ಟ್​ ಬ್ರಾಡ್​ 6 ವಿಕೆಟ್ಸ್​

ಎರಡನೇ ದಿನ ಇಂಗ್ಲೆಂಡ್​ 369 ರನ್​ಗಳಿಸಿ ಆಲೌಟ್​ ಆಗಿತ್ತು. ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ವಿಂಡೀಸ್​ 137ಕ್ಕೆ 6 ವಿಕೆಟ್​ ಕಳೆದುಕೊಂಡಿತ್ತು. ಇಂದು ಮತ್ತೆ ಬ್ಯಾಟಿಂಗ್​ ಮುಂದುವರಿಸಿದ ಹೋಲ್ಡರ್​ ಪಡೆ ನಿನ್ನೆಯ ಮೊತ್ತಕ್ಕೆ 60 ರನ್​ ಸೇರಿಸಿ ಸರ್ವಪತನ ಕಂಡಿತು. ಇಂದಿನ ಎಲ್ಲಾ ವಿಕೆಟ್​ಗಳು ಸ್ಟುವರ್ಟ್​ ಬ್ರಾಡ್​ ಪಾಲಾದವು.

ಇಂಗ್ಲೆಂಡ್​ ವೆಸ್ಟ್​ ಇಂಡೀಸ್​
ಇಂಗ್ಲೆಂಡ್​ ವೆಸ್ಟ್​ ಇಂಡೀಸ್​
author img

By

Published : Jul 26, 2020, 6:32 PM IST

ಮ್ಯಾಂಚೆಸ್ಟರ್​: ಮೂರನೇ ಟೆಸ್ಟ್​ನಲ್ಲಿ ಬ್ರಾಡ್​ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ​ ಇಂಗ್ಲೆಂಡ್​ ತಂಡ ವೆಸ್ಟ್​ ಇಂಡೀಸ್​ ತಂಡವನ್ನು 197ಕ್ಕೆ ಆಲೌಟ್​ ಮಾಡುವ ಮೂಲಕ 182 ರನ್​ಗಳ ಮುನ್ನಡೆ ಸಾಧಿಸಿದೆ.

ಎರಡನೇ ದಿನ ಇಂಗ್ಲೆಂಡ್​ 369 ರನ್​ಗಳಿಸಿ ಆಲೌಟ್​ ಆಗಿತ್ತು. ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ವಿಂಡೀಸ್​ 137ಕ್ಕೆ 6 ವಿಕೆಟ್​ ಕಳೆದುಕೊಂಡಿತ್ತು. ಇಂದು ಮತ್ತೆ ಬ್ಯಾಟಿಂಗ್​ ಮುಂದುವರಿಸಿದ ಹೋಲ್ಡರ್​ ಪಡೆ ನಿನ್ನೆಯ ಮೊತ್ತಕ್ಕೆ 60 ರನ್​ ಸೇರಿಸಿ ಸರ್ವಪತನ ಕಂಡಿತು. ಇಂದಿನ ಎಲ್ಲಾ ವಿಕೆಟ್​ಗಳು ಸ್ಟುವರ್ಟ್​ ಬ್ರಾಡ್​ ಪಾಲಾದವು.

ವೆಸ್ಟ್​ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್​ 46 ರನ್​ಗಳಿಸಿದ್ದೆ ಗರಿಷ್ಠ ಸ್ಕೋರ್​ ಎನಿಸಿಕೊಂಡಿತು. ವಿಕೆಟ್​ ಕೀಪರ್​ ಡೋರಿಚ್​ 37 ಜಾನ್ ಕ್ಯಾಂಪ್​ಬೆಲ್ 32 ರನ್​ಗಳಿಸಿದರು.

ಇಂಗ್ಲೆಂಡ್​ ಪರ ಸ್ಟುವರ್ಟ್​ ಬ್ರಾಡ್​ 31ಕ್ಕೆ 6, ಜೇಮ್ಸ್​ ಆ್ಯಂಡರ್ಸನ್​ 28ಕ್ಕೆ 2, ಜೋಫ್ರಾ ಆರ್ಚರ್​ ಹಾಗೂ ಕ್ರಿಸ್ ವೋಕ್ಸ್​ ತಲಾ ಒಂದು ವಿಕೆಟ್ ಪಡೆದರು.

ಇಂದು ಮೂರನೇ ದಿನವಾಗಿದ್ದು, 60ಕ್ಕೂ ಹೆಚ್ಚಿನ ಓವರ್​ಗಳ ಆಟ ಬಾಕಿಯಿದೆ. ಇಂಗ್ಲೆಂಡ್​ ಈಗಾಗಲೆ 172 ರನ್​ಗಳ ಮುನ್ನಡೆ ಪಡೆದುಕೊಂಡಿರುವುದರಿಂದ ಇಂದು ಮತ್ತು ನಾಳೆ ಮೊದಲ ಸೆಸನ್​ವರೆಗೆ ಬ್ಯಾಟಿಂಗ್​ ನಡೆಸಿದರೆ ಬೃಹತ್​ ಟಾರ್ಗೆಟ್ ನೀಡಬಹುದು. ಒಟ್ಟಿನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿರುವ ವೆಸ್ಟ್​ ಇಂಡೀಸ್​ ತಂಡಕ್ಕೆ ಡ್ರಾ ಸಾಧಿಸುವುದು ಕೂಡ ಕಷ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.