ಸಿಡ್ನಿ: ಭಾರತದ ಬೌಲರ್ಗಳು ಸ್ಟಿವ್ ಸ್ಮಿತ್ ಅವರನ್ನು ಔಟ್ ಮಾಡಲು ಬೌನ್ಸರ್ ಮತ್ತು ಶಾರ್ಟ್ ಬಾಲ್ಗಳನ್ನು ಪ್ರಯೋಗಿಸದಿದ್ದಕ್ಕೆ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಟಿವ್ ಸ್ಮಿತ್ ಈ ಸರಣಿಯಲ್ಲಿ ವೃತ್ತಿ ಜೀವನದಲ್ಲಿ ಶ್ರೇಷ್ಠ ಫಾರ್ಮ್ನಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲೂ 62 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ. ಇವರ ಶತಕದ ನೆರವಿನಿಂದ ಆಸೀಸ್ ಭಾರತ ತಂಡವನ್ನು ಮೊದಲ ಪಂದ್ಯದಲ್ಲಿ 66 ಹಾಗೂ 2ನೇ ಪಂದ್ಯದಲ್ಲಿ 51 ರನ್ಗಳ ಸೋಲು ಕಂಡಿದೆ.
ಆದರೆ ಸ್ಟಿವ್ ಸ್ಮಿತ್ ಬೌನ್ಸರ್ ಮತ್ತು ಶಾರ್ಟ್ ಪಿಚ್ ಬಾಲ್ ಆಡಲು ತಿಣಕಾಡುತ್ತಾರೆ. ಅದು ಅವರ ದೌರ್ಬಲ್ಯ. ಆದ್ರೆ ಅದನ್ನು ಭಾರತ ತಂಡದ ಬುಮ್ರಾ, ಶಮಿ ಹಾಗೂ ಸೈನಿ ಒಮ್ಮೆಯೂ ಪ್ರಯೋಗ ಮಾಡದೇ ಇರುವುದಕ್ಕೆ ಹಾಗ್, ಭಾರತೀಯ ಬೌಲರ್ಗಳ ತಂತ್ರಗಾರಿಕೆ ಏನು ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
"ಸ್ಮಿತ್ ಬ್ಯಾಟಿಂಗ್ ಮಾಡಲು ಬಂದಾಗ ಭಾರತೀಯ ಬೌಲರ್ಗಳು ಬೌನ್ಸರ್ ಎಸೆತಗಳನ್ನು ಪ್ರಯೋಗಿಸದಿರುವುದಕ್ಕೆ ನನಗೆ ಆಶ್ಚರ್ಯವಾಗುತ್ತಿದೆ. ಬೌನ್ಸರ್ಬದಲಾಗಿ ಗುಡ್ ಲೆಂತ್ ಮತ್ತು ಫುಲ್ಲರ್ ಪ್ರಯೋಗ ಮಾಡುತ್ತಿರುವುದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಸ್ಮಿತ್ ದೌರ್ಬಲ್ಯ ಎಂದರೆ ಶಾರ್ಟ್ ಬಾಲ್. ಅದನ್ನು ಭಾರತೀಯರು ಪ್ರಯೋಗಿಸುತ್ತಿಲ್ಲ" ಎಂದು ಹಾಗ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಅದೇ ರೀತಿ ಮ್ಯಾಕ್ಸ್ವೆಲ್ಗೂ ಕೂಡ ಹೆಚ್ಚು ಶಾರ್ಟರ್ ಬಾಲ್ಗಳನ್ನು ಮಾಡದಿರುವುದಕ್ಕೆ ಹಾಗ್ ಬೇಸರವಾಗಿದ ಎಂದಿದ್ದಾರೆ. ಮ್ಯಾಕ್ಸ್ವೆಲ್ ಎರಡನೇ ಪಂದ್ಯದಲ್ಲಿ 29 ಎಸೆತಗಳಲ್ಲಿ 63 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.