ETV Bharat / sports

ಪ್ರೇಕ್ಷಕರು ಮೈದಾನಕ್ಕೆ ಬರುವಂತಾದರೆ ಮೆಲ್ಬೋರ್ನ್​ನಲ್ಲೇ ಭಾರತ-ಆಸ್ಟ್ರೇಲಿಯಾ ಬಾಕ್ಸಿಂಗ್​ ಟೆಸ್ಟ್​ ಕ್ರಿಕೆಟ್​ - ಮೆಲಬೋರ್ನ್​ ಕ್ರಿಕೆಟ್​ ಸ್ಟೇಡಿಯಂ

ವಿಕ್ಟೋರಿಯಾ ಪ್ರಸ್ತುತ ಕೋವಿಡ್​ ಸೋಂಕಿನ ಹರಡುವಿಕೆ ಎರಡನೇ ಹಂತದಲ್ಲಿದೆ. ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವಲ್ಲಿ ಮೆಲ್ಬೋರ್ನ್, ದೇಶದ ಉಳಿದ ಭಾಗಗಳಿಗಿಂತ ತುಂಬಾ ಹಿಂದುಳಿದಿದೆ. ಆದ್ದರಿಂದ ಇಲ್ಲಿ ಪ್ರಮುಖ ಇವೆಂಟ್​ಗಳ ಆತಿಥ್ಯ ವಹಿಸುವುದಕ್ಕೆ ಸಾಕಷ್ಟು ಗೊಂದಲಗಳಿವೆ.

ಭಾರತ-ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್​ ಟೆಸ್ಟ್

author img

By

Published : Aug 8, 2020, 2:07 PM IST

ಮೆಲ್ಬೋರ್ನ್​ (ಆಸ್ಟ್ರೇಲಿಯಾ): ವಿಕ್ಟೋರಿಯಾ ರಾಜ್ಯದಲ್ಲಿ ಕೋವಿಡ್​-19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಿಂದ ಸ್ಥಳಾಂತರಿಸಬೇಕೇ ಎಂದು ನಿರ್ಧರಿಸಲು ಇನ್ನೂ ಸಾಕಷ್ಟು ಸಮಯ ಉಳಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಪಾದಿಸಿದೆ.

ವಿಕ್ಟೋರಿಯಾ ಪ್ರಸ್ತುತ ಕೋವಿಡ್​ ಸೋಂಕಿನ ಹರಡುವಿಕೆ ಎರಡನೇ ಹಂತದಲ್ಲಿದೆ. ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವಲ್ಲಿ ಮೆಲ್ಬೋರ್ನ್ ದೇಶದ ಉಳಿದ ಭಾಗಗಳಿಗಿಂತ ತುಂಬಾ ಹಿಂದುಳಿದಿದೆ. ಆದ್ದರಿಂದ ಇಲ್ಲಿ ಪ್ರಮುಖ ಇವೆಂಟ್​ಗಳ ಆತಿಥ್ಯ ವಹಿಸುವುದಕ್ಕೆ ಸಾಕಷ್ಟು ಗೊಂದಲಗಳಿವೆ.

ಆದರೆ, ಸೋಂಕಿನ ಪ್ರಮಾಣ ಕಡಿಮೆಯಾಗಿ, ಜನರು ಪಂದ್ಯ ವೀಕ್ಷಣೆಗೆ ಬರುವುದಾದರೆ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯವನ್ನು ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲೇ ನಡೆಸಬಹುದು ಎಂದು ಕ್ರಿಕೆಟ್​ ಆಸ್ಟ್ರೇಲಿಯಾದ ಸಿಇಒ ನಿಕ್​ ಹ್ಯಾಕ್ಲೆ ತಿಳಿಸಿದ್ದಾರೆ.

ಪ್ರಸ್ತುತ ಮೆಲ್ಬೋರ್ನ್​ನಲ್ಲಿ ತುಂಬಾ ನಿರ್ಬಂಧಗಳಿರುವುದರಿಂದ ಶೀಘ್ರದಲ್ಲಿ ನಾವು ಸಾಮಾನ್ಯ ಸ್ಥಿತಿಗೆ ಹಿಂತಿರುಗುತ್ತೇವೆ ಎಂದು ಭಾವಿಸಿದ್ದೇನೆ. ಜೊತೆಗೆ ಜನರು ಕೂಡ ಹೊರ ಬರಬಹುದು. ಪ್ರೇಕ್ಷಕರು ಮೈದಾನಕ್ಕೆ ಹಿಂತಿರುಗುವಂತಾದರೆ ನಾವೂ ಕೂಡ ಲೈವ್​ ಇವೆಂಟ್​ಗಳಿಗೆ ಹಿಂತಿರುಗಬಹುದು ಎಂದು ಅವರು ಹೇಳಿದ್ದಾರೆ.

ಇದು(ಬಾಕ್ಸಿಂಗ್​​ ಡೇ) ಆಸ್ಟ್ರೇಲಿಯಾದ ಕ್ರೀಡಾ ಕ್ಯಾಲೆಂಡರ್‌ನ ಅತ್ಯಂತ ಅಪ್ರತಿಮ ಇವೆಂಟ್​ಗಳಲ್ಲಿ ಒಂದಾಗಿದೆ. ಖಂಡಿತವಾಗಿಯೂ ಈ ಹಂತದಲ್ಲಿ ನಾವು ಅದರ ಆಯೋಜನೆಗಾಗಿ ಯೋಜನೆ ರೂಪಿಸಲಿದ್ದೇವೆ " ಎಂದು ಹ್ಯಾಕ್ಲೆ ಹೇಳಿದ್ದಾರೆ.

ಭಾರತ ತಂಡ ಐಪಿಎಲ್ ಮುಗಿಯುತ್ತಿದ್ದಂತೆ ನೇರ ಆಸ್ಟ್ರೇಲಿಯಾ ಪ್ರಯಾಣ ಬೆಳಸಲಿದೆ. ಅಲ್ಲಿ 14 ದಿನಗಳ ಕ್ವಾರಂಟೈನ್​ ನಂತರ ಡಿಸೆಂಬರ್​ 3 ರಿಂದ 4 ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.