ದುಬೈ: ಭಾರತದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಮಾರ್ಚ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
-
Who's your ICC Men's Player of the Month for March?
— ICC (@ICC) April 8, 2021 " class="align-text-top noRightClick twitterSection" data="
Sean Williams 🇿🇼 264 Test runs at 132, 2 centuries
Rashid Khan 🇦🇫 11 Test wickets at 25; 6 T20I wickets at 12.6
Bhuvneshwar Kumar 🇮🇳 6 ODI wickets at 22.5; 4 T20I wickets at 28.7
Vote here 👉 https://t.co/cf06lbaFnA#ICCPOTM pic.twitter.com/oVw0Bssg2y
">Who's your ICC Men's Player of the Month for March?
— ICC (@ICC) April 8, 2021
Sean Williams 🇿🇼 264 Test runs at 132, 2 centuries
Rashid Khan 🇦🇫 11 Test wickets at 25; 6 T20I wickets at 12.6
Bhuvneshwar Kumar 🇮🇳 6 ODI wickets at 22.5; 4 T20I wickets at 28.7
Vote here 👉 https://t.co/cf06lbaFnA#ICCPOTM pic.twitter.com/oVw0Bssg2yWho's your ICC Men's Player of the Month for March?
— ICC (@ICC) April 8, 2021
Sean Williams 🇿🇼 264 Test runs at 132, 2 centuries
Rashid Khan 🇦🇫 11 Test wickets at 25; 6 T20I wickets at 12.6
Bhuvneshwar Kumar 🇮🇳 6 ODI wickets at 22.5; 4 T20I wickets at 28.7
Vote here 👉 https://t.co/cf06lbaFnA#ICCPOTM pic.twitter.com/oVw0Bssg2y
ಎಲ್ಲ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸಲು ಐಸಿಸಿ ಗುರುವಾರ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಅದರಲ್ಲಿ ಭುವನೇಶ್ವರ್ ಕುಮಾರ್ ಜೊತೆಗೆ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಇದ್ದಾರೆ.
ಮಹಿಳೆಯರ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್ , ದಕ್ಷಿಣ ಆಫ್ರಿಕಾದಲಿಜೆಲ್ ಲೀ ಮತ್ತು ಭಾರತದ ಪುನಮ್ ರಾವುತ್ ನಾಮ ನಿರ್ದೇಶನಗೊಂಡಿದ್ದಾರೆ.
ಭುವನೇಶ್ವರ್ ಕುಮಾರ್ ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಿಂದ 4.65 ಎಕಾನಮಿಯಲ್ಲಿ 6 ವಿಕೆಟ್ ಪಡೆದಿದ್ದರು. ಟಿ-20ಯಲ್ಲಿ 6.38 ಎಕಾನಮಿಯಲ್ಲಿ 4 ವಿಕೆಟ್ ಪಡೆದಿದ್ದರು. ರಶೀದ್ ಖಾನ್ ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಪಡೆದರು ಅಫ್ಘಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ-20ಯಲ್ಲಿ 3 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದರು.
3ನೇ ಸ್ಪರ್ಧಿ ಸೀನ್ ವಿಲಿಯಮ್ಸ್ 2 ಟೆಸ್ಟ್ ಪಂದ್ಯಗಳಲ್ಲಿ 2 ಶತಕ ಸೇರಿದಂತೆ 264 ರನ್ ಹಾಗೂ 2 ವಿಕೆಟ್ ಕೂಡ ಪಡೆದಿದ್ದರು.
ಮಹಿಳೆಯರ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್ ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3.56 ಎಕಾನಮಿಯಲ್ಲಿ 8 ವಿಕೆಟ್ ಮತ್ತು ಟಿ20 ಸರಣಿಯಲ್ಲಿ 4.75 ಎಕಾನಮಿಯಲ್ಲಿ 4 ವಿಕೆಟ್ ಪಡೆದಿದ್ದರು. ಪೂನಮ್ ರಾವುತ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1 ಶತಕ ಮತ್ತು 2 ಅರ್ಧಶತಕದ ನೆರವಿನಿಂದ 263 ರನ್ಗಳಿಸಿದ್ದರು. ಕೊನೆಯ ಸ್ಪರ್ಧಿ ಲೀ ಏಕದಿನ ಸರಣಿಯಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದರು.
ಈ ಪ್ರಶಸ್ತಿಯನ್ನು ತಿಂಗಳ ಮೊದಲನೇ ದಿನದಿಂದ ಕೊನೆಯ ದಿನದವರೆಗಿನ ಪ್ರದರ್ಶನವನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.
ಇದನ್ನು ಓದಿ:ಭಾರತದೆದುರಿನ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ 20 ಸದಸ್ಯರ ತಂಡ ಪ್ರಕಟಿಸಿದ ಕಿವೀಸ್