ETV Bharat / sports

ಐಪಿಎಲ್ ಮಿನಿ​ ಹರಾಜು; ಹೆಸರು ನೋಂದಾಯಿಸಿಕೊಳ್ಳಲು ಆಟಗಾರರಿಗೆ ಫೆ.4 ಕೊನೆ ದಿನ

author img

By

Published : Jan 16, 2021, 8:36 PM IST

14ನೇ ಐಪಿಎಲ್​ನಲ್ಲಿ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಜನವರಿ 20 ಕೊನೆಯ ದಿನಾಂಕವಾಗಿದ್ದು, ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಸೂಚನೆ ನೀಡಿದೆ. ಇನ್ನು ಐಪಿಎಲ್​ ಒಪ್ಪಂದ ಹೊಂದಿಲ್ಲದ ಆಟಗಾರರು 2021ರ ಹರಾಜಿಗೆ ಫೆಬ್ರವರಿ 4ರೊಳಗೆ ಹೆಸರನ್ನು ನೋಂದಾಯಿಸಲು ಸೂಚನೆ ಹೊರಡಿಸಿದೆ. ಇನ್ನು ಮೂಲ ದಾಖಲೆಗಳನ್ನು ಫೆಬ್ರವರಿ 12ರ ಒಳಗಾಗಿ ಸಲ್ಲಿಸಲು ಗಡುವು ನೀಡಲಾಗಿದೆ.

ಐಪಿಎಲ್ ಹರಾಜು
ಐಪಿಎಲ್ ಹರಾಜು

ಮುಂಬೈ: ಫೆಬ್ರವರಿ 16ರಂದು 2021ರ ಐಪಿಎಲ್​ಗೆ ಮಿನಿ ಹರಾಜು ನಡೆಯುವ ಸಾಧ್ಯತೆಯಿದ್ದು, ಫೆಬ್ರವರಿ 4ರೊಳಗೆ ಫ್ರಾಂಚೈಸಿ ಕೈಬಿಟ್ಟ ಆಟಗಾರರು ಸೇರಿದಂತೆ ಎಲ್ಲಾ ರಾಜ್ಯದ ಕ್ರಿಕೆಟಿಗರು ಹರಾಜಿನಲ್ಲಿ ತಮ್ಮ ಹೆಸರನ್ನು ಆನ್​ಲೈನ್​ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.

14ನೇ ಐಪಿಎಲ್​ನಲ್ಲಿ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಜನವರಿ 20 ಕೊನೆಯ ದಿನಾಂಕವಾಗಿದ್ದು, ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಸೂಚನೆ ನೀಡಿದೆ. ಇನ್ನು ಐಪಿಎಲ್​ ಒಪ್ಪಂದ ಹೊಂದಿಲ್ಲದ ಆಟಗಾರರು 2021ರ ಹರಾಜಿಗೆ ಫೆಬ್ರವರಿ 4ರೊಳಗೆ ಹೆಸರನ್ನು ನೋಂದಾಯಿಸಲು ಸೂಚನೆ ಹೊರಡಿಸಿದೆ. ಇನ್ನು ಮೂಲ ದಾಖಲೆಗಳನ್ನು ಫೆಬ್ರವರಿ 12ರ ಒಳಗಾಗಿ ಸಲ್ಲಿಸಲು ಗಡುವು ನೀಡಲಾಗಿದೆ.

ಈ ಸಂಬಂಧ ಬಿಸಿಸಿಐ ಎಲ್ಲಾ ಸ್ಟೇಟ್‌ ಕ್ರಿಕೆಟ್​ ಅಸೋಸಿಯೇಷನ್‌ಗಳಿಗೆ ಮೇಲ್ ಕಳುಹಿಸಿದೆ. ಅಲ್ಲದೆ ಆಟಗಾರರು ಕ್ರಿಕೆಟ್ ಅಸೋಸಿಯೇಷನ್ ಜೊತೆಗೆ ಮಾತ್ರ ಸಂವಹನ ನಡೆಸಬೇಕಿದೆ. ಆಟಗಾರರು ಯಾವುದೇ ಏಜೆಂಟ್ ಅಥವಾ ಮ್ಯಾನೇಜರ್​ ಜೊತೆ ಸಂಪರ್ಕ ನಡೆಸುವುವಂತಿಲ್ಲ. ಒಂದು ವೇಳೆ ಇದರಲ್ಲಿ ಏನಾದರೂ ಸಮಸ್ಯೆ ಆದರೆ ತಕ್ಷಣ 2021ರ ಹರಾಜು ಪಟ್ಟಿಯಿಂದ ಅಂತಹ ಆಟಗಾರರ ಹೆಸರನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಐಪಿಎಲ್​ ಹರಾಜಿನಲ್ಲಿ ಪಾಲ್ಗೊಳ್ಳಬೇಕೆಂಬ ಆಟಗಾರರು ತಮ್ಮ ರಾಜ್ಯ ಕ್ರಿಕೆಟ್​ ಸಂಸ್ಥೆಗಳ ಮೂಲಕವೇ ತಮ್ಮ ಹೆಸರನ್ನು ಕಳುಹಿಸಿಕೊಡಬೇಕೆಂದು ಬಿಸಿಸಿಐ ತಿಳಿಸಿದೆ.

ಇದನ್ನು ಓದಿ:ಜೋ ರೂಟ್ ದ್ವಿಶಕತದ ನೆರವಿನಿಂದ ಇಂಗ್ಲೆಂಡ್​ ಬೃಹತ್​ ಮೊತ್ತ: ಇನ್ನಿಂಗ್ಸ್​ ಸೋಲು ತಪ್ಪಿಸಲು ತಿರಿಮನ್ನೆ ಹರಸಾಹಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.