ನವದೆಹಲಿ: ಪ್ರಮುಖ ದೇಶೀಯ ಪಂದ್ಯಾವಳಿ ರಣಜಿ ಟ್ರೋಫಿ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ, ಆದರೆ ಮಾರ್ಚ್‌ನಲ್ಲಿ ಮಹಿಳಾ ಕ್ರಿಕೆಟ್ ಸೀಸನ್ ಪ್ರಾರಂಭಿಸಲು ಅನುಮೋದನೆ ನೀಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ದೇಶೀಯ ಋತುಮಾನವು ಸ್ಥಗಿಸಗೊಂಡಿತ್ತು. ಆದರೆ, ಈ ತಿಂಗಳ ಆರಂಭದಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿಯೊಂದಿಗೆ ಋತುಮಾನವನ್ನು ಪ್ರಾರಂಭಿಸಲಾಗಿದ್ದು, ಬಯೋ-ಬಬಲ್‌ನಲ್ಲಿ ಪಂದ್ಯಗಳನ್ನು ಆಡಲಾಗುತ್ತಿದೆ.
ಬಿಸಿಸಿಐ ಭಾನುವಾರ ನಡೆಸಿದ ಭೆಯಲ್ಲಿ ರಣಜಿ ಟೂರ್ನಿ ಕುರಿತು ನಿರ್ಧರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತಾದರೂ ಸದಸ್ಯರಲ್ಲಿ ಯಾವುದೇ ಒಮ್ಮತ ಇರಲಿಲ್ಲ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಪ್ರತಿಷ್ಠಿತ ಪ್ರಥಮ ದರ್ಜೆ ಪಂದ್ಯಾವಳಿಯನ್ನು ಆಯೋಜಿಸುವ ಪರವಾಗಿದ್ದರು.
ಓದಿ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ: ಟಿ-20 ವಿಶ್ವಕಪ್‌ಗೆ ಈಗಿನಿಂದಲೇ ತಾಲೀಮು
"ಅಧ್ಯಕ್ಷರು ರಣಜಿ ಟ್ರೋಫಿಯನ್ನು ನಡೆಸಲು ಒಲವು ತೋರಿದರೂ ಕೆಲವರು ಅದಕ್ಕೆ ಸಮ್ಮತಿ ಸೂಚಿಸಲಿಲ್ಲ. ಆದರೆ, ಅವರು ವಿಜಯ್ ಹಜಾರೆ ಟ್ರೋಫಿಯನ್ನು (50 ಓವರ್) ಆಯೋಜಿಸುವ ಪರವಾಗಿದ್ದರು. ರಣಜಿ ಟ್ರೋಫಿ ಅಥವಾ ವಿಜಯ್ ಹಜಾರೆ ಟ್ರೋಫಿಯನ್ನು ಆಯೋಜಿಸಲಾಗುವುದು ಮತ್ತು ಈ ವಾರದ ಅಂತ್ಯದ ವೇಳೆಗೆ ಈ ಬಗ್ಗೆ ನಿರ್ಧರಿಸಲಾಗುವುದು" ಎಂದು ಮೂಲಗಳು ತಿಳಿಸಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್-ಏಪ್ರಿಲ್ ಸಮಯದಲ್ಲಿ ಆಡುವ ನಿರೀಕ್ಷೆಯಿದೆ, ಆದ್ದರಿಂದ ಪ್ರಥಮ ದರ್ಜೆ ಪಂದ್ಯಾವಳಿಗಾಗಿ ಸ್ಲಾಟ್‌ಗಳನ್ನು ಹುಡುಕುವಲ್ಲಿ ಬಿಸಿಸಿಐಗೆ ತೊಂದರೆಯಾಗಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಬಹುಶಃ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಟಿ-20 ವಿಶ್ವಕಪ್ ನಂತರ ಆಟಗಾರ್ತಿಯರು ಕ್ರಿಕೆಟ್‌ನಿಂದ ಹೊರಗುಳಿದಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಃಸ್ಥಾಪಿಸಲು ಬಿಸಿಸಿಐ ಶ್ರೀಲಂಕಾ ಮತ್ತು ಇಂಗ್ಲೆಂಡ್‌ಗಳೊಂದಿಗೆ ಮಾತನಾಡಲಿದೆ.
ಓದಿ ಕಾಂಗರೂಗಳಿಗೆ ಶಾಕ್ ನೀಡಿದ ಟೀಂ ಇಂಡಿಯಾ : 182 ರನ್ ಮುನ್ನಡೆಯಲ್ಲಿ ಆಸ್ಟ್ರೇಲಿಯಾ
"ಮಹಿಳೆಯರಿಗೆ ಪೂರ್ಣ ದೇಶೀಯ ಋತುವಿನ ಸಾಧ್ಯತೆಯಿದ್ದು, ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಶ್ರೀಲಂಕಾ ಮತ್ತು ಇಂಗ್ಲೆಂಡ್ ಭಾರತಕ್ಕೆ ಬರುವ ನಿರೀಕ್ಷೆಯಿದೆ" ಎಂದು ಅಧಿಕಾರಿ ಹೇಳಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ನೀಡುವಂತೆ ಬಿಸಿಸಿಐ ಸರ್ಕಾರವನ್ನು ಒತ್ತಾಯಿಸುತ್ತಿದೆ. ಸಭೆಯಲ್ಲಿ ಈ ವಿಷಯದ ಬಗ್ಗೆಯೂ ಚರ್ಚಿಸಲಾಯಿತು ಎಂದು ಹೇಳಿದ್ದಾರೆ.