ಸಿಡ್ನಿ: ದೊಡ್ಡ ಹೊಡೆತಗಳಿಗೆ ಹೆಸರಾದ ವೆಸ್ಟ್ ಇಂಡೀಸ್ ಆಲ್ರೌಂಡರ್ ಕಾರ್ಲೋಸ್ ಬ್ರಾಥ್ವೇಟ್ ಮುಂಬರುವ ಬಿಗ್ಬ್ಯಾಶ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುವುದಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.
ಈ ಬೇಸಿಗೆಯಲ್ಲಿ ಆರಂಭಗೊಳ್ಳಲಿರುವ ಲೀಗ್ನಲ್ಲಿ 6 ವರ್ಷಗಳ ನಂತರ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಸೇರ್ಪಡೆಗೊಂಡಿದ್ದರು. ಇದೀಗ ಒಂದು ವಾರದ ಅಂತರದಲ್ಲಿ ವಿಂಡೀಸ್ ಆಲ್ರೌಂಡರ್ಗೆ ಸಿಕ್ಸರ್ಸ್ ಮಣೆಯಾಕಿದೆ.
ಲೀಗ್ ಆರಂಭವಾಗಲಿರುವ ಒಂದುವಾರಕ್ಕೆ ಮುಂಚಿತವಾಗಿ ಬ್ರಾಥ್ವೇಟ್ ಆಸ್ಟ್ರೇಲಿಯಾಕ್ಕೆ ಆಗಮಿಸಲಿದ್ದು, ಜೇಮ್ಸ್ ವಿನ್ಸ್ ಮತ್ತು ಟಾಮ್ ಕರ್ರನ್ ಜೊತೆ ವಿದೇಶಿ ಆಟಗಾರರ ವಿಭಾಗಕ್ಕೆ ಸೇರಿಕೊಳ್ಳಲಿದ್ದಾರೆ. ಪ್ರಸ್ತುತ 3 ವಿದೇಶಿ ಆಟಗಾರರು ಹಾಲಿ ಚಾಂಪಿಯನ್ ಸಿಕ್ಸರ್ಸ್ ಬಳಗೆ ಸೇರಿದಂತಾಗಿದೆ.
ಬ್ರಾಥ್ವೇಟ್ ಬಿಬಿಎಲ್ 7 ನಲ್ಲಿ ಬದಲಿ ಆಟಗಾರನಾಗಿ ಸಿಕ್ಸರ್ ಸೇರಿಕೊಂಡು 4 ಪಂದ್ಯಗಳನ್ನಾಡಿದ್ದರು. ಅವರು ತಂಡಕ್ಕೆ ಸತತ 4 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.