ETV Bharat / sports

ಟೆಸ್ಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು : ಅಜರುದ್ದೀನ್ - ಭಾರತ vs ಆಸ್ಟ್ರೇಲಿಯಾ ಲೇಟೆಸ್ಟ್ ನ್ಯೂಸ್

ಜಡೇಜಾ ಎಷ್ಟು ಫಿಟ್ ಎಂದು ತಿಳಿದಿಲ್ಲ. ಜಡೇಜಾ ಚೆಂಡನ್ನು ತಿರುಗಿಸಲು ಸಾಧ್ಯವಾಗುವುದಿಲ್ಲ. ಅವರು ಉತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಆಲ್‌ರೌಂಡರ್. ಆದರೆ, ನಾನು ಅಲ್ಲಿದ್ದರೆ, ಅವರ ಬದಲು ಲೆಗ್​ ಸ್ಪಿನ್ನರ್‌ನ ಆಯ್ಕೆ ಮಾಡುತ್ತಿದ್ದೆ..

Hardik Pandya
ಹಾರ್ದಿಕ್ ಪಾಂಡ್ಯ
author img

By

Published : Dec 16, 2020, 1:09 PM IST

ನವದೆಹಲಿ : ಅಡಿಲೇಡ್ ಓವಲ್‌ನಲ್ಲಿ ನಡೆಯುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಐದು ಬೌಲರ್‌ಗಳು, ಐದು ಬ್ಯಾಟ್ಸ್‌ಮನ್‌ಗಳು ಮತ್ತು ಓರ್ವ ವಿಕೆಟ್‌ ಕೀಪರ್‌ನೊಂದಿಗೆ ಕಣಕ್ಕಿಳಿಯಬೇಕು ಎಂದು ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.

ಭಾರತಕ್ಕೆ ಒಬ್ಬ ಉತ್ತಮ ಆಲ್​ರೌಂಡರ್ ಅಗತ್ಯವಿರುವುದರಿಂದ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿರಬೇಕು ಎಂದು ಅಜರ್ ಅಭಿಪ್ರಾಯಪಟ್ಟಿದ್ದಾರೆ. ಆಡುವ ಹನ್ನೊಂದರಲ್ಲಿ ರಿಸ್ಟ್ ಸ್ಪಿನ್ನರ್ ಸೇರಿದಂತೆ ಇಬ್ಬರು ಸ್ಪಿನ್ನರ್‌ಗಳನ್ನು ಒಳಗೊಂಡಿರಬೇಕು ಎಂದಿರುವ ಅಜರ್, ಸ್ಲಿಪ್-ಫೀಲ್ಡಿಂಗ್ ಬಗ್ಗೆ ಕೊಂಚ ಜಾಗೃತರಾಗಿರಬೇಕು ಎಂದಿದ್ದಾರೆ.

"ಗುಲಾಬಿ ಚೆಂಡಿನಲ್ಲಿ ಸ್ಪಿನ್ ಬೌಲರ್ ವಿರುದ್ಧ ಆಡಲು ಕಷ್ಟಪಡುತ್ತಾರೆ. ಪಿಚ್ ಒಣಗಿದ್ದರೆ, ಚೆಂಡು ತಿರುಗುತ್ತದೆ, ಖಂಡಿತವಾಗಿಯೂ ನೀವು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು. ಆದರೆ, ಕೊಹ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಅನುಮಾನವಿದೆ" ಎಂದು ಅಜರುದ್ದೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಓದಿ ಆಸೀಸ್ ತಂಡಕ್ಕೆ ಶುಭ ಸುದ್ದಿ ಕೊಟ್ಟ ಪೈನ್: ನಾಳೆ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆ

"ಟೆಸ್ಟ್ ಪಂದ್ಯವನ್ನು ಗೆಲ್ಲಲು, ಐದು ಮುಖ್ಯ ಬೌಲರ್‌ಗಳು ಬೇಕು. ನಾಯಕನಾಗಿ ನನಗೆ ಆ ಅನುಭವವಾಗಿದೆ. ದಿನದ ಕೊನೆಯಲ್ಲಿ ಬೌಲರ್‌ಗಳು ಪಂದ್ಯವನ್ನು ಗೆಲ್ಲಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿಕೆಟ್ ಉತ್ತಮವಾಗಿದ್ದರೆ, ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ಭಾವಿಸುತ್ತೇನೆ" ಎಂದಿದ್ದಾರೆ.

"ಜಡೇಜಾ ಎಷ್ಟು ಫಿಟ್ ಎಂದು ತಿಳಿದಿಲ್ಲ. ಜಡೇಜಾ ಚೆಂಡನ್ನು ತಿರುಗಿಸಲು ಸಾಧ್ಯವಾಗುವುದಿಲ್ಲ. ಅವರು ಉತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಆಲ್‌ರೌಂಡರ್. ಆದರೆ, ನಾನು ಅಲ್ಲಿದ್ದರೆ, ಅವರ ಬದಲು ಲೆಗ್​ ಸ್ಪಿನ್ನರ್‌ನ ಆಯ್ಕೆ ಮಾಡುತ್ತಿದ್ದೆ" ಎಂದಿದ್ದಾರೆ.

"ನಮ್ಮಲ್ಲಿ ಫೀಲ್ಡಿಂಗ್ ಸಮಸ್ಯೆ ಇದೆ, ನಾವು ಕೆಲವು ಅವಕಾಶಗಳನ್ನು ಕೈಬಿಟ್ಟಿದ್ದೇವೆ. ಖಂಡಿತವಾಗಿಯೂ ಸ್ಲಿಪ್ ಫೀಲ್ಡಿಂಗ್ ಭಾರತಕ್ಕೆ ಸಮಸ್ಯೆಯಾಗಲಿದೆ" ಎಂದು ಅಜರುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.