ETV Bharat / sports

ಆರ್​ಸಿಬಿ ಸ್ಟಾರ್​ ಬೌಲರ್​​ ಕೇನ್​ ರಿಚರ್ಡ್ಸನ್​ಗೆ ಕೊರೊನಾ  ಸೋಂಕು!?

author img

By

Published : Mar 13, 2020, 12:18 PM IST

ಕೊರೊನಾ ಸೋಂಕು ಈಗಾಗಲೇ ಇಡೀ ವಿಶ್ವವನ್ನೇ ಆವರಿಸಿಕೊಂಡಿದ್ದು, ಇದೀಗ ಆಸೀಸ್​ ವೇಗಿಯೊಬ್ಬನಿಗೆ ವೈರಸ್​ ತಗುಲಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಹೀಗಾಗಿ ಅವರು ತಂಡದಿಂದ ದೂರು ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Australia's Kane Richardson
Australia's Kane Richardson

ಸಿಡ್ನಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಕಣಕ್ಕಿಳಿಯುವ ಸ್ಟಾರ್​ ಬೌಲರ್​ ಕೇನ್​ ರಿಚರ್ಡ್ಸನ್​​ ಅವರಿಗೆ ಕೊರೊನಾ ವೈರಸ್​ ತಗುಲಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಹೀಗಾಗಿ ಅವರ ಮೇಲೆ ತೀವ್ರ ನಿಗಾ ಈಡಲಾಗಿದೆ.

ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್​ ನಡುವೆ ಏಕದಿನ ಕ್ರಿಕೆಟ್​ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಅವರಲ್ಲಿ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ತಪಾಸಣೆಗೊಳಪಡಿಸಲಾಗಿದ್ದು, ವರದಿಯಾಗಿ ಕಾಯುತ್ತಿರುವುದಾಗಿ ತಿಳಿದು ಬಂದಿದೆ. ಇದರ ಜತೆಗೆ ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ.

ಕಳೆದ ವಾರ ಆಫ್ರಿಕಾ ವಿರುದ್ಧ ಮುಕ್ತಾಯಗೊಂಡ ಕ್ರಿಕೆಟ್​ ಸರಣಿ ನಂತರ ಸ್ವದೇಶಕ್ಕೆ ವಾಪಸ್​ ಆಗಿದ್ದ ರಿಚರ್ಡ್ಸನ್​, ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಲ್ಲಿ ಭಾಗಿಯಾಬೇಕಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಈ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

29 ವರ್ಷದ ಕೇನ್​ ಆರೋಗ್ಯದಲ್ಲಿ ಈ ರೀತಿಯ ಏರುಪೇರು ಕಾಣಿಸಿಕೊಂಡಿರುವ ಕಾರಣ, ಈಗಾಗಲೇ ತಂಡದ ಇತರ ಪ್ಲೇಯರ್ಸ್​ಗಳಿಂದ ಅವರನ್ನ ದೂರವಿರಿಸಲಾಗಿದ್ದು, ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೇನ್​ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಆಡುತ್ತಿದ್ದು, ಅವರು ಮೈದಾನಕ್ಕಿಳಿಯುವುದು ಡೌಟ್​ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.