ಮೇಲ್ಬೋರ್ನ್: ಉದ್ಘಾಟನಾ ಪಂದ್ಯದ ಸೋಲಿನ ನಂತರ ಮತ್ತೆ ಚಾಂಪಿಯನ್ ಆಟಕ್ಕೆ ಮರಳಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ವಿಶ್ವಕಪ್ನಲ್ಲಿ ಬಾಂಗ್ಲಾದೇಶವನ್ನು 86 ರನ್ಗಳಿಂದ ಮಣಿಸುವ ಮೂಲಕ ಸತತ ಎರಡನೇ ಜಯ ಸಾಧಿಸಿದೆ.
ಟಿ-20 ವಿಶ್ವಕಪ್ನ 10 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿ 189 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ವಿಶ್ವಕಪ್ನಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಯಿತು.
ಆರಂಭಿಕ ಬ್ಯಾಟ್ಸ್ವುಮನ್ ಅಲಿಸ್ಸಾ ಹೀಲಿ 83 ಹಾಗೂ ಬೆತ್ ಮೂನಿ 81 ರನ್ಗಳಿಸಿದರು ಈ ಜೋಡಿ ಮೊದಲ ವಿಕೆಟ್ಗೆ ದಾಖಲೆಯ 151 ರನ್ಗಳಿಸಿತು. ಹೀಲಿ 53 ಎಸೆತಗಳಲ್ಲಿ 3 ಸಿಕ್ಸರ್ಸ್ ಹಾಗೂ 10 ಬೌಂಡರಿ ಸಹಿತ 83 ರನ್ಗಳಿಸಿದರೆ, ಮೂನಿ 58 ಎಸೆತಗಳಲ್ಲಿ 9 ಬೌಂಡರಿ ಸಹಿತ 81 ರನ್ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಗಾರ್ಡ್ನರ್ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 22 ರನ್ಗಳಿಸಿತು.
-
Australia win by 86 runs!
— T20 World Cup (@T20WorldCup) February 27, 2020 " class="align-text-top noRightClick twitterSection" data="
A superb all-round team performance 👏#AUSvBAN | #T20WorldCup
SCORE 📝 https://t.co/ZSMgugPHcl pic.twitter.com/HvCJKvep5t
">Australia win by 86 runs!
— T20 World Cup (@T20WorldCup) February 27, 2020
A superb all-round team performance 👏#AUSvBAN | #T20WorldCup
SCORE 📝 https://t.co/ZSMgugPHcl pic.twitter.com/HvCJKvep5tAustralia win by 86 runs!
— T20 World Cup (@T20WorldCup) February 27, 2020
A superb all-round team performance 👏#AUSvBAN | #T20WorldCup
SCORE 📝 https://t.co/ZSMgugPHcl pic.twitter.com/HvCJKvep5t
ಇನ್ನು 190 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾ ಮಹಿಳಾ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ಗಳಿಸಲಷ್ಟೇ ಶಕ್ತವಾಯಿತು. ಫರಾನಾ ಹಕ್ 36 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಆಸ್ಟ್ರೇಲಿಯಾ ಪರ ಮೆಗನ್ ಶೂಟ್ 3 ವಿಕೆಟ್, ಜೆಸ್ ಜೊನ್ನಾಸೆನ್ 2, ಆ್ಯನ್ನಾಬೆಲ್ ಸದರ್ಲೆಂಡ್ ಹಾಗೂ ನಿಕೋಲಸ್ ಕ್ಯಾರಿ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
83 ರನ್ಗಳಿಸಿದ ಅಲಿಸ್ಸಾ ಹೀಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆಸ್ಟ್ರೇಲಿಯಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.