ETV Bharat / sports

ಭಾರತ - ಆಸೀಸ್ ಅಹರ್ನಿಶಿ ಟೆಸ್ಟ್: ದಿನದಾಂತ್ಯಕ್ಕೆ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ - ವಿರಾಟ್ ಕೊಹ್ಲಿ

ಮೊದಲ ದಿನದಾಂತ್ಯಕ್ಕೆ ಉತ್ತಮ ಪ್ರದರ್ಶನ ತೋರಿದ ಆಸೀಸ್ ವೇಗಿಗಳು, ಟೀಂ ಇಂಡಿಯಾದ ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಭಾರತ ತಂಡ 6 ವಿಕೆಟ್ ನಷ್ಟಕ್ಕೆ 233 ರನ್​ ಗಳಿಸಿದೆ.

Australia vs India, 1st Test
ಭಾರತ-ಆಸೀಸ್ ಅಹರ್ನಿಶಿ ಟೆಸ್ಟ್
author img

By

Published : Dec 17, 2020, 5:40 PM IST

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯಕ್ಕೆ ಟೀಂ ಇಂಡಿಯಾಕ್ಕೆ ಹಿನ್ನಡೆಯಾಗಿದ್ದು 6 ವಿಕೆಟ್ ನಷ್ಟಕ್ಕೆ 233 ರನ್​ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ, ವೇಗಿ ಸ್ಟಾರ್ಕ್ ಶಾಕ್ ನೀಡಿದ್ರು. ಫಾರ್ಮ್​ನಲ್ಲಿ ಇಲ್ಲದಿದ್ದರೂ ಆಯ್ಕೆ ಯಾಗಿದ್ದ ಪೃಥ್ವಿ ಶಾ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು.

ನಂತರ ಜೊತೆಯಾದ ಮಯಾಂಕ್ ಮತ್ತು ಪೂಜಾರ ಕೊಂಚ ಸಮಯ ಆಸೀಸ್ ಬೌಲರ್​ಗಳನ್ನು ಕಾಡಿದ್ರು. ಆದರೆ 17 ರನ್​ ಗಳಿಸಿದ್ದ ಮಯಾಂಕ್ ಕಮ್ಮಿನ್ಸ್​ ಎಸೆತದಲ್ಲಿ ಕ್ಲೀನ್​​ ಬೌಲ್ಡ್ ಆಗಿ ನಿರಾಸೆ ಅನುಭವಿಸಿದ್ರು. ಟೀಂ ಇಂಡಿಯಾ 32 ರನ್​ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿಕೊಂಡ್ರು.

ನಂತರ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪುಜಾರಾ ಆಸೀಸ್ ಬೌಲರ್​ಗಳ ಬೆವರಿಳಿಸಿದ್ರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಪೂಜಾರ(43), ನಾಥನ್ ಲಿಯಾನ್ ಬೌಲಿಂಗ್​ನಲ್ಲಿ ಲಾಬುಶೇನ್​ಗೆ ಕ್ಯಾಚ್​ ನೀಡಿ ವಿಕೆಟ್ ಒಪ್ಪಿಸಿದ್ರು. ಈ ನಡುವೆ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ರು.

ಪೂಜಾರ ನಿರ್ಗಮನದ ನಂತರ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರಹಾನೆ ಮತ್ತು ಕೊಹ್ಲಿ ಆಸೀಸ್ ಬೌಲರ್​ಗಳನ್ನು ಕಾಡಲು ಶುರುಮಾಡಿದ್ರು. ಆದರೆ ಲಿಯಾನ್ ಬೌಲಿಂಗ್​ ವೇಳೆ ಇಲ್ಲದ ರನ್ ಕದಿಯಲು ಹೋದ ವಿರಾಟ್ ಕೊಹ್ಲಿ (74) ರನ್​ ಔಟ್​ಗೆ ಬಲಿಯಾದ್ರು. ಉಪನಾಯಕ ರಹಾನೆ (42) ರನ್ ​ಗಳಿಸಿ ಔಟ್ ಆದ್ರು. ನಂತರ ಬಂದ ಹನುಮ ವಿಹಾರಿ 16 ರನ್​ ಗಳಿಸಿ ನಿರಾಸೆ ಅನುಭವಿಸಿದ್ರು.

ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 233 ರನ್​ ಗಳಿಸಿದೆ. ಅಶ್ವಿನ್ 15 ರನ್ ಮತ್ತು ಸಹಾ 9 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.