ಮೆಲ್ಬೋರ್ನ್: ಆಸ್ಟ್ರೇಲಿಯಾದ ವೇಗದ ಬೌಲರ್ ಪೀಟರ್ ಸಿಡ್ಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನಿವೃತ್ತಿ ಘೋಷಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಆಸೀಸ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಪೀಟರ್ ಸಿಡ್ಲ್ ತಂಡದ ಆಟಗಾರರೆದುರು ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಈ ಸಮಯದಲ್ಲಿ ಭಾವುಕರಾಗಿದ್ದ ಅವರನ್ನು ಸಹ ಆಟಗಾರರು ಅಪ್ಪಿಕೊಂಡು ಸಮಾಧಾನಪಡಿಸಿದರು.
ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ ತಂಡದ ಪ್ರಭಾವಿ ವೇಗದ ಬೌಲರ್ ಆಗಿದ್ದ ಸಿಡ್ಲ್ 2008ರಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಪಂದ್ಯದಲ್ಲೇ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆಯುವ ಮೂಲಕ ಖಾತೆ ತೆರೆದಿದ್ದರು.
![Australia pacer Peter Siddle bids adieu international cricket](https://etvbharatimages.akamaized.net/etvbharat/prod-images/siddle_1712newsroom_1576555165_889.jpg)
67 ಟೆಸ್ಟ್ ಪಂದ್ಯಗಳಿಂದ 221 ವಿಕೆಟ್ ಪಡೆದಿರುವ ಸಿಡ್ಲ್ ಆಸೀಸ್ 13ನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 2011ರ ಆ್ಯಶಸ್ ಟೆಸ್ಟ್ನಲ್ಲಿ ತಮ್ಮ ಜನ್ಮದಿನದಂದೇ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಅವರ ವೃತ್ತಿ ಜೀವನದ ಸ್ಮರಣೀಯ ಕ್ಷಣವಾಗಿತ್ತು.
ಪೀಟರ್ ಸಿಡ್ಲ್ 22 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳಲ್ಲೂ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು.