ETV Bharat / sports

ಮಹಿಳಾ ಟಿ20 ವಿಶ್ವಕಪ್​: ನ್ಯೂಜಿಲ್ಯಾಂಡ್​ ಮಣಿಸಿ ಸತತ 7ನೇ ಬಾರಿ ಸೆಮಿಫೈನಲ್​ ಪ್ರವೇಶಿಸಿದ ಆಸ್ಟ್ರೇಲಿಯಾ - ಮಹಿಳಾ ಟಿ20 ವಿಶ್ವಕಪ್​ ಸೆಮಿಫೈನಲ್

ಲೀಗ್​ನಲ್ಲಿ ಆಡಿದ್ದ ಮೂರು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಒಂದು ಸೋಲು ಕಂಡಿದ್ದ ಎರಡು ತಂಡಗಳಿಗೂ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಕೊನೆಯವರೆಗೂ ​ರೋಚಕವಾಗಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು 4 ರನ್​ಗಳಿಂದ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರು.

Australia beat New Zealand
ಮಹಿಳಾ ಟಿ20 ವಿಶ್ವಕಪ್
author img

By

Published : Mar 2, 2020, 4:43 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ)​: ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡ ಕಿವೀಸ್​ ವಿರುದ್ಧ 4 ರನ್​ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದೆ.

ಲೀಗ್​ನಲ್ಲಿ ಆಡಿದ್ದ ಮೂರು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಒಂದು ಸೋಲುಕಂಡಿದ್ದ ಎರಡು ತಂಡಗಳಿಗೂ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಕೊನೆಯವರೆಗೂ ರೋಚಕವಾಗಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು 4 ರನ್​ಗಳಿಂದ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರು.

ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ತಂಡ ಬೆತ್​ ಮೂನಿ ಅವರ ಅರ್ಧಶತಕ(60)ದ ನೆರವಿನಿಂದ 155 ರನ್​ ಕಲೆಹಾಕಿತು. ಮೂನಿಗೆ ಸಾಥ್​ ನೀಡಿದ ಲ್ಯಾನಿಂಗ್​ 21, ಗಾರ್ಡ್ನರ್​ 20, ಪೆರ್ರಿ 21, ಹೇನಸ್​ 19 ರನ್ ​ಗಳಿಸಿ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.

ಅನ್ನಾ ಪೀಟರ್ಸನ್ 2 ವಿಕೆಟ್​​, ಅಮೇಲಿಯಾ ಕೆರ್​ 22ಕ್ಕೆ1, ಹೇಲಿ ಜಾನ್ಸೆನ್​ 26ಕ್ಕೆ1 ಹಾಗೂ ಕ್ಯಾಸ್ಪೆರಕ್​ 29ಕ್ಕೆ 1 ವಿಕೆಟ್​ ಪಡೆದರು.

156 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ನ್ಯೂಜಿಲ್ಯಾಂಡ್​ ತಂಡ 20 ಓವರ್​ಗಳಲ್ಲಿ 151 ರನ್​ ಗಳನ್ನಷ್ಟೇ ಪೇರಿಸಲು ಶಕ್ತವಾಗಿ 4 ರನ್​ಗಳ ಸೋಲುಕಂಡಿತು.

ನಾಯಕಿ ಸೂಫಿ ಡಿವೈನ್​ 31, ಮ್ಯಾಡಿ ಗ್ರೀನ್​ 28, ಸೂಜಿ ಬೇಟ್ಸ್​ 14, ಕೇಟಿ ಮಾರ್ಟಿನ್​ 37 ರನ್​ ಬಾರಿಸಿ ಕೊನೆಯ ಓವರ್​ ವರೆಗೂ ಗೆಲ್ಲಲು ಹರಸಾಹಸ ಪಟ್ಟರೂ 4 ರನ್​ಗಳಿಂದ ಸೋಲುಕಂಡಿತು.

ವಿಶ್ವಕಪ್​ನಲ್ಲಿ ಎರಡನೇ ಪಂದ್ಯವಾಡಿದ ಜಾರ್ಜಿಯಾ ವೇರ್‌ಹ್ಯಾಮ್ ಹಾಗೂ ಮೇಗನ್​ ಶೂಟ್​ ತಲಾ ಮೂರು ವಿಕೆಟ್​ ಪಡೆದು ಕಿವೀಸ್​ ಪಾಲಾಗುತ್ತಿದ್ದ ಗೆಲುವನ್ನು ಆಸ್ಟ್ರೇಲಿಯಾ ಕಡೆ ತಿರುಗಿಸಿದರು.

ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 4ನೇ ತಂಡವಾಗಿ ಸೆಮಿಫೈನಲ್​ ಪ್ರವೇಶಿಸಿತು. ಈಗಾಗಲೇ ಭಾರತ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಸೆಮಿಫೈನಲ್​ ಪ್ರವೇಶಿಸಿವೆ.

ನಾಳಿನ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್​ ವಿರುದ್ಧ ಗೆದ್ದರೆ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವನ್ನು ಎದುರಿಸಬೇಕಾಗುತ್ತದೆ. ದಕ್ಷಿಣ ಆಫ್ರಿಕಾ ವಿಂಡೀಸ್​ ವಿರುದ್ಧ ಸೋತರೆ ಸೆಮಿಫೈನಲ್​ ಆಯ್ಕೆಗೆ ರನ್​ ರೇಟ್​ ಲೆಕ್ಕಾಚಾರ ಮೊರೆ ಹೋಗಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.