ಕಾನ್ಬೆರಾ: ಭಾರತೀಯ ಬೌಲರ್‌ಗಳು ಐಪಿಎಲ್ನಲ್ಲಿ ಸಾಕಷ್ಟು ಪಂದ್ಯಗಳನ್ನಾಡಿರುವುದರಿಂದ ಕೆಲಸದ ಹೊರೆ ಹೆಚ್ಚಾಗಿತ್ತು. ಅವರು ಟಿ-20 ಪಂದ್ಯಗಳನ್ನಾಡಿರುವುದರಿಂದ 50 ಓವರ್ಗಳ ಕ್ರಿಕೆಟ್ಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಭಾರತ ತಂಡ ಆಸೀಸ್ ವಿರುದ್ಧದ ಮೊದಲೆರಡು ಪಂದ್ಯಗಲ್ಲಿ 66 ರನ್ ಮತ್ತು 51 ರನ್ಗಳಿಂದ ಸೋಲು ಕಂಡಿದೆ. ಎರಡು ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯ ಭಾರಿ ಟೀಕೆಗೆ ಒಳಗಾಗಿತ್ತು. ಮೂರನೇ ಪಂದ್ಯ ಮನುಕಾ ಓವೆಲ್ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಟಿ-20 ಮತ್ತು ಟೆಸ್ಟ್ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತ ಬಯಸಿದೆ.
"ಇದು ಕೇವಲ ಟಿ-20ಯಿಂದ ಏಕದಿನ ಪಂದ್ಯಕ್ಕೆ ಪರಿವರ್ತನೆಯ ಹಂತವಾಗಿದೆ ಎಂದು ಖಾತ್ರಿಪಡಿಸುತ್ತೇನೆ. 50 ಓವರ್ಗಳ ಪಂದ್ಯಕ್ಕೆ ಬದಲಾಗುವುದು ತುಂಬಾ ಕಷ್ಟ. ವಿಶೇಷವಾಗಿ ಬೌಲರ್‌ಗಳು 10 ಓವರ್‌ಗಳನ್ನು ಟ್ರೊಟ್‌ನಲ್ಲಿ ಬೌಲ್ ಮಾಡುವುದು ನಿಜವಾಗಿಯೂ ಕಷ್ಟ. ಆದ್ದರಿಂದ ಬೌಲರ್ಗಳ ದೃಷ್ಟಿಕೋನದಲ್ಲಿ ನೋಡುವುದಾದರೆ ಪರಿವರ್ತನೆ ಸುಲಭದ ಮಾತಲ್ಲ" ಎಂದು ಐಯ್ಯರ್ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 374 ರನ್ ಗಳಿಸಿ ಭಾರತವನ್ನು 308ಕ್ಕೆ ನಿಯಂತ್ರಿಸಿದರೆ, ಎರಡನೇ ಪಂದ್ಯದಲ್ಲಿ 389 ರನ್ ಗಳಿಸಿ 338 ರನ್ಗಳಿಗೆ ನಿಯಂತ್ರಿಸಿ ಸರಣಿ ತನ್ನದಾಗಿಸಿಕೊಂಡಿದೆ.
ಕಳೆದ ಎರಡು ಇನ್ನಿಂಗ್ಸ್ಗಳಲ್ಲೂ ಬ್ಯಾಟ್ಸ್ಮನ್ಗಳು ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ಬೌಲರ್‌ಗಳು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಐಯ್ಯರ್ ಹೇಳಿದ್ದಾರೆ.
ಭಾರತೀಯ ಬೌಲರ್‌ಗಳು ವಿಶ್ವ ದರ್ಜೆಯ ಬೌಲರ್ಗಳಾಗಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ಬಲಿಷ್ಠವಾಗಿ ತಿರುಗಿ ಬೀಳಲಿದ್ದಾರೆ. ಅವರ ಮತ್ತು ಕೋಚ್ಗಳ ಮೇಲೆ ನನಗೆ ನಂಬಿಕೆಯಿದೆ. ಆದರೆ ಸೋಲಿಗೆ ಯಾರೊಬ್ಬರನ್ನೂ ದೂಷಣೆ ಮಾಡಲು ನಾನು ಇಚ್ಛಿಸುವುದಿಲ್ಲ. ಆದರೆ ಅವರು ಅಭ್ಯಾಸದ ವೇಳೆ ತೋರುವ ಕೆಲಸದ ನೀತಿ ನನಗೆ ಖುಷಿ ತಂದಿದೆ ಎಂದಿದ್ದಾರೆ.