ಅಡಿಲೇಡ್ : ಶುಕ್ರವಾರ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂದಿನ ಮೂರು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ವೇಗಿ ಪ್ಯಾಟ್ ಕಮ್ಮಿನ್ಸ್ ಎಸೆದ ಶಾರ್ಟ್ ಬಾಲ್ ಮೊಣಕೈಗೆ ತಗುಲಿದ ಪರಿಣಾಮ ಶಮಿ ತೀವ್ರ ನೋವಿನಿಂದ ರಿಟೈರ್ಡ್ ಹರ್ಟ್ ಪಡೆದು ಮೈದಾನದಿಂದ ಹೊರ ನಡೆದರು. ಹೆಚ್ಚಿನ ಸ್ಕ್ಯಾನ್‌ಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಓದಿ ಟೀಂ ಇಂಡಿಯಾದ ಅತ್ಯಂತ ಕಳಪೆ ಪ್ರದರ್ಶನ; ಕಡಿಮೆ ಸ್ಕೋರ್ ಮಾಡಿದ ತಂಡಗಳ ಇತಿಹಾಸ ಇಂತಿದೆ
"ಮೊಹಮ್ಮದ್ ಶಮಿ ಗಾಯಗೊಂಡಿದ್ದು, ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರು ಭಾಗವಹಿಸುವ ಸಾಧ್ಯತೆ ಕಡಿಮೆ" ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಮೊಹಮ್ಮದ್ ಸಿರಾಜ್ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಲು ಸಜ್ಜಾಗುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪಿತೃತ್ವ ರಜೆ ಮೇಲೆ ವಿರಾಟ್ ಕೊಹ್ಲಿ ತವರಿಗೆ ವಾಪಸ್ ಆಗುತ್ತಿರುವುದು ಟೀಂ ಇಂಡಿಯಾ ಬ್ಯಾಟಿಂಗ್ ಬಲ ಕುಗ್ಗಿಸಿದೆ. ಇದೀಗ ಮೊಹಮ್ಮದ್ ಶಮಿ ಅಲಭ್ಯತೆ ಬೌಲಿಂಗ್ ವಿಭಾಗಕ್ಕೂ ದೊಡ್ಡ ಪೆಟ್ಟು ನೀಡಿದೆ.