ಸಿಡ್ನಿ(ಆಸ್ಟ್ರೇಲಿಯಾ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಮಾರ್ಚ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಥಗಿತಗೊಂಡ ನಂತರ ಇದೇ ಮೊದಲಬಾರಿಗೆ ಕ್ರಿಕೆಟ್ ಮೈದಾನಕ್ಕೆ ಕಾಲಿಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಎಸ್‌ಸಿಜಿಯಲ್ಲಿ ನಡೆಯಲಿರುವ ಮೊದಲ ಎರಡು ಪಂದ್ಯಗಳಿಗೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಕ್ಯಾನ್‌ಬೆರಾದಲ್ಲಿನ ಮೂರನೇ ಏಕದಿನ ಪಂದ್ಯಕ್ಕೆ ಶೇಕಡಾ 65 ರಷ್ಟು ಪ್ರೇಕ್ಷಕರು ಹಾಜರಿರಲಿದ್ದಾರೆ.
ಕೊರೊನೊ ವೈರಸ್ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಎಲ್ಲಾ ಅಂತಾರಾಷ್ಟ್ರೀಯ ಸರಣಿಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಂತಹ ದೇಶೀಯ ಸ್ಪರ್ಧೆಗಳಲ್ಲಿ ಯಾವುದೇ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. ಇದೀಗ ಮೊದಲ ಬಾರಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
ಕನ್ನಡಿಗ ಮಯಾಂಕ್ ಅಗರ್ವಾಲ್ ರೋಹಿತ್ ಸ್ಥಾನ ತುಂಬಬಲ್ಲರು: ಫಿಂಚ್
ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆ್ಯರೋನ್ ಫಿಂಚ್, ಪ್ರೇಕ್ಷಕರ ಮುಂದೆ ಕ್ರಿಕೆಟ್ ಆಟಲು ನಮಮ ತಂಡ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
"ನಾವು ಆಸ್ಟ್ರೇಲಿಯಾದಲ್ಲಿ ಬಹಳ ಜನಸಮೂಹದ ಮುಂದೆ ಕ್ರಿಕೆಟ್ ಆಡಿ ಬಹು ದಿನಗಳು ಕಳೆದಿದೆ. ಮತ್ತೆ ಅಭಿಮಾನಿಗಳ ಮುಂದೆ ಕ್ರಿಕೆಟ್ ಆಡಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಅದು ಎಷ್ಟು ಉತ್ತಮ ವಾತಾವರಣ ಎಂದು ನಮಗೆ ತಿಳಿದಿದೆ "ಎಂದು ಫಿಂಚ್ ಹೇಳಿದ್ದಾರೆ.