ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 60ರನ್ಗಳ ಅಂತರದ ಗೆಲುವು ದಾಖಲು ಮಾಡಿದೆ.
ಪಂದ್ಯದ ಮಧ್ಯದಲ್ಲಿ ನಡೆದ ವಿಚಿತ್ರ ಘಟನೆವೊಂದು ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ತಮಿಳುನಾಡು ತಂಡ ಆರಂಭದಲ್ಲೇ ಮುರುಳಿ ವಿಜಯ್ ವಿಕೆಟ್ ಕಳೆದುಕೊಳ್ತು. ಇದಾದ ಬಳಿಕ ಸರ್ಪ್ರೈಸ್ ರೀತಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಾರೆ. ಈ ವೇಳೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದಿದ್ದರೂ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಇದೀಗ ಭಾರಿ ದಂಡಕ್ಕೆ ಗುರಿಯಾಗುವ ಸಾಧ್ಯತೆ ಇದೆ.
-
Guess who's walking out to bat at No.3 in the Vijay Hazare Trophy final? @ashwinravi99🤔 #KARvTN @Paytm #VijayHazare pic.twitter.com/1nrhVZQs2R
— BCCI Domestic (@BCCIdomestic) October 25, 2019 " class="align-text-top noRightClick twitterSection" data="
">Guess who's walking out to bat at No.3 in the Vijay Hazare Trophy final? @ashwinravi99🤔 #KARvTN @Paytm #VijayHazare pic.twitter.com/1nrhVZQs2R
— BCCI Domestic (@BCCIdomestic) October 25, 2019Guess who's walking out to bat at No.3 in the Vijay Hazare Trophy final? @ashwinravi99🤔 #KARvTN @Paytm #VijayHazare pic.twitter.com/1nrhVZQs2R
— BCCI Domestic (@BCCIdomestic) October 25, 2019
ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಆಗಮಿಸುತ್ತಿದ್ದ ವೇಳೆ ಆರ್ ಅಶ್ವಿನ್ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಹಾಕಿಕೊಂಡು ಮೈದಾನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆ ಮಾಡಿದ್ದಾರೆ. ಈಗಾಗಲೇ ಮ್ಯಾಚ್ ರೆಪ್ರಿ ಚಿನ್ಮಯಾ ಶರ್ಮಾ ಅವರಿಗೆ ದಂಡ ವಿಧಿಸಿದ್ದು, ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಅವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ದೇಶೀಯ ಕ್ರಿಕೆಟ್ಗಳಲ್ಲಿ ಯಾವುದೇ ಐಸಿಸಿ ಉಪಯೋಗಿತ ವಸ್ತು ಅಥವಾ ಲೋಗೋ ಬಳಕೆ ಮಾಡುವಂತಿಲ್ಲ ಎಂಬ ರೂಲ್ಸ್ ಇದೆ. ಆದರೆ, ಇದೀಗ ಅಶ್ವಿನ್ ಆ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಅವರಿಗೆ ದಂಡ ಹಾಕುವ ಸಾಧ್ಯತೆ ಇದೆ.