ಬರ್ಮಿಂಗ್ಹ್ಯಾಮ್: ಒಂದು ವರ್ಷ ಕ್ರಿಕೆಟ್ನಿಂದ ನಿಷೇಧದ ಶಿಕ್ಷೆ ಅನುಭವಿಸಿ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್ ಸ್ಮಿತ್ ಎರಡನೇ ಇನ್ನಿಂಗ್ಸ್ನಲ್ಲೂ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ತಾವೊಬ್ಬ ಟೆಸ್ಟ್ ಚಾಂಪಿಯನ್ ಬ್ಯಾಟ್ಸ್ಮನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 17 ರನ್ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗಿಳಿದಿದ್ದ ಸ್ಟಿವ್ ಸ್ಮಿತ್ 10ನೇಯವರಾಗಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ 8 ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಏಕಾಂಗಿಯಾಗಿ ಹೋರಾಡಿದ್ದ ಸ್ಮಿತ್ 144 ರನ್ ಗಳಿಸಿ ಔಟಾಗಿದ್ದರು. ಅವರು ಔಟಾಗುವ ಮುನ್ನ 16 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು.
-
Centuries in both innings of the match, take a bow Steve Smith!
— ICC (@ICC) August 4, 2019 " class="align-text-top noRightClick twitterSection" data="
A stunning return to the longest form from the Australian.#Ashes pic.twitter.com/vVXlPEVtsl
">Centuries in both innings of the match, take a bow Steve Smith!
— ICC (@ICC) August 4, 2019
A stunning return to the longest form from the Australian.#Ashes pic.twitter.com/vVXlPEVtslCenturies in both innings of the match, take a bow Steve Smith!
— ICC (@ICC) August 4, 2019
A stunning return to the longest form from the Australian.#Ashes pic.twitter.com/vVXlPEVtsl
ಇದೀಗ ಎರಡನೇ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. 146 ಎಸೆತಗಳಲ್ಲಿ ಶತಕ ಪೂರೈಸಿದ ಸ್ಟಿವ್ ಸ್ಮಿತ್ ವೃತ್ತಿ ಜೀವನದ 25 ನೇ ಶತಕ ದಾಖಲಿಸಿದರು. ಇವರ ಇನ್ನಿಂಗ್ಸ್ನಲ್ಲಿ10 ಬೌಂಡರಿ ಸೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ 284 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ರೋನಿ ಬರ್ನ್ಸ್ ಅವರ ಶತಕದ ನೆರವಿನಿಂದ 374 ರನ್ ಗಳಿಸಿ, 90 ರನ್ಗಳ ಮುನ್ನಡೆ ಸಾಧಿಸಿತ್ತು.