ಬರ್ಮಿಂಗ್ಹ್ಯಾಮ್: 2019 ರ ವಿಶ್ವಕಪ್ ಜಯಿಸಿದ್ದ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ 128 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಹೊರತಾಗಿಯೂ ಆಸೀಸ್ ವಿರುದ್ಧ 251ರನ್ಗಳ ಹೀನಾಯ ಸೋಲನುಭಿವಿಸಿದೆ.
398 ರನ್ಗಳ ಬೃಹತ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಹಿರಿಯ ಸ್ಪಿನ್ನರ್ ನಥನ್ ಲಿಯಾನ್ ಬೌಲಿಂಗ್(6) ಹಾಗೂ ಪ್ಯಾಟ್ ಕಮ್ಮಿನ್ಸ್ ದಾಳಿಗೆ ಸಿಲುಕಿ 149 ರನ್ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಆ್ಯಶಸ್ ಪಂದ್ಯದಲ್ಲಿಯೇ ಹೀನಾಯ ಸೋಲು ಕಂಡಿದೆ. ಈ ಮೂಲಕ 2 ವರ್ಷಗಳ ಕಾಲ ನಡೆಯಲಿರುವ ಟೆಸ್ಟ್ ಚಾಂಪಿಯನ್ಶಿಪ್ ಮೊದಲ ಪಂದ್ಯದಲ್ಲಿ ಗೆಲುವು ಪಡೆದು ಅಂಕ ಪಟ್ಟಿಯಲ್ಲಿ ಖಾತೆ ತೆರೆಯಿತು.
4 ನೇ ದಿನ ವಿಕೆಟ್ ನಷ್ಟವಿಲ್ಲದೆ 13 ರನ್ಗಳಿಸಿದ್ದ ಆಂಗ್ಲಪಡೆ ಆ ಮೊತ್ತಕ್ಕೆ ಕೇವಲ 6 ರನ್ ಸೇರಿಸುವಷ್ಟಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ್ದ ರೋನಿ ಬರ್ನ್ಸ್(11) ವಿಕೆಟ್ ಕಳೆದುಕೊಂಡಿತು. ನಂತರ ಜೇಸನ್ ರಾಯ್ ಜೊತೆಗೂಡಿದ ನಾಯಕ ರೂಟ್ 41 ರನ್ಗಳ ಜೊತೆಯಾಟ ನೀಡಿದರು, ಈ ಹಂತದಲ್ಲಿ ರಾಯ್(28) ಲಿಯಾನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಈ ಜೋಡಿ ಬೇರ್ಪಟ್ಟ ಮೇಲೆ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಜೊ ಡೆನ್ಲಿ 11 ರನ್, ರೂಟ್ 28, ಜೋಸ್ ಬಟ್ಲರ್ 1, ಸ್ಟೋಕ್ಸ್ 6, ಜಾನಿ ಬೈರ್ಸ್ಟೋವ್ 6, ಮೊಯಿನ್ ಅಲಿ 4, ಸ್ಟುವರ್ಟ್ ಬ್ರಾಡ್ 0 ರನ್ಗಳಿಸಿ ಔಟ್ ಆದರು. ಆದರೆ ಕ್ರಿಸ್ ವೋಕ್ಸ್ ಮಾತ್ರ 37 ರನ್ಗಳಿಸಿ ಹೆಚ್ಚು ಕ್ರೀಸ್ನಲ್ಲಿ ನಿಂತ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲ್ಲದೆ ಅವರೇ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
-
Australia win!
— ICC (@ICC) August 5, 2019 " class="align-text-top noRightClick twitterSection" data="
A superb performance with bat and ball, especially in the second innings, sees them take a 1-0 lead in the 2019 men's Ashes.#Ashes pic.twitter.com/1W5ACF0ktJ
">Australia win!
— ICC (@ICC) August 5, 2019
A superb performance with bat and ball, especially in the second innings, sees them take a 1-0 lead in the 2019 men's Ashes.#Ashes pic.twitter.com/1W5ACF0ktJAustralia win!
— ICC (@ICC) August 5, 2019
A superb performance with bat and ball, especially in the second innings, sees them take a 1-0 lead in the 2019 men's Ashes.#Ashes pic.twitter.com/1W5ACF0ktJ
ಅತ್ಯುತ್ತಮ ಬೌಲಿಂಗ್ ನಡೆಸಿದ ಹಿರಿಯ ಸ್ಪಿನ್ನರ್ ನಥನ್ ಲಿಯಾನ್ 6 ವಿಕೆಟ್ ಪಡೆದರೆ, ವೇಗಿ ಪ್ಯಾಟ್ ಕಮ್ಮಿನ್ಸ್ 4 ವಿಕೆಟ್ ಪಡೆದು ಮಿಂಚಿದರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 80.4 ಓವರ್ಗಳಲ್ಲಿ 284 ರನ್ಗಳಿಸಿದ್ದರು. ಸ್ಮಿತ್ 144, ಪೀಟರ್ ಸಿಡ್ಲ್ 44 ರನ್ಗಳಿಸಿದರೆ, ಸ್ಟುವರ್ಟ್ ಬ್ರಾಡ್ 86ಕ್ಕೆ 5, ಕ್ರಿಸ್ ವೋಕ್ಸ್ 58 ಕ್ಕೆ 3 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 135.5 ಓವರ್ಗಳಲ್ಲಿ 374 ಆಲೌಟ್ ಆಗಿತ್ತು. ರೋನಿ ಬರ್ನ್ಸ್ 133, ರೂಟ್ 57, ಬೆನ್ ಸ್ಟೋಕ್ಸ್ 50 ರನ್ಗಳಿಸಿದ್ದರು.
-
AUSSIES WIN! Lyon finishes with 6-49, Cummins 4-32.
— cricket.com.au (@cricketcomau) August 5, 2019 " class="align-text-top noRightClick twitterSection" data="
Australia complete a stunning fightback at Edgbaston to take a 1-0 #Ashes lead and collect 24 points in the World Test Championship: https://t.co/adY5nEzxYR pic.twitter.com/npNPmjCnOS
">AUSSIES WIN! Lyon finishes with 6-49, Cummins 4-32.
— cricket.com.au (@cricketcomau) August 5, 2019
Australia complete a stunning fightback at Edgbaston to take a 1-0 #Ashes lead and collect 24 points in the World Test Championship: https://t.co/adY5nEzxYR pic.twitter.com/npNPmjCnOSAUSSIES WIN! Lyon finishes with 6-49, Cummins 4-32.
— cricket.com.au (@cricketcomau) August 5, 2019
Australia complete a stunning fightback at Edgbaston to take a 1-0 #Ashes lead and collect 24 points in the World Test Championship: https://t.co/adY5nEzxYR pic.twitter.com/npNPmjCnOS
128 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ 112 ಓವರ್ಗಳಲ್ಲಿ 487 ರನ್ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಸ್ಟಿವ್ ಸ್ಮಿತ್ 142, ಮ್ಯಾಥ್ಯೂ ವೇಡ್ 110, ಟ್ರೇವಿಸ್ ಹೆಡ್ 51 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 85ಕ್ಕೆ 3, ಮೊಯಿನ್ ಅಲಿ 130 ಕ್ಕೆ 2 ವಿಕೆಟ್ ಪಡೆದಿದ್ದರು.
ಎರಡೂ ಇನ್ನಿಂಗ್ಸ್ಗಳಲ್ಲೂ ಶತಕ ಬಾರಿಸಿದ ಸ್ಟಿವ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. 2ನೇ ಆ್ಯಶಸ್ ಪಂದ್ಯ ಆಗಸ್ಟ್ 14 ರಿಂದ ನಡೆಯಲಿದೆ.
-
Steve Smith is the Player of the Match. Fair shout #Ashes pic.twitter.com/ucZe0QXGEE
— cricket.com.au (@cricketcomau) August 5, 2019 " class="align-text-top noRightClick twitterSection" data="
">Steve Smith is the Player of the Match. Fair shout #Ashes pic.twitter.com/ucZe0QXGEE
— cricket.com.au (@cricketcomau) August 5, 2019Steve Smith is the Player of the Match. Fair shout #Ashes pic.twitter.com/ucZe0QXGEE
— cricket.com.au (@cricketcomau) August 5, 2019