ನವದೆಹಲಿ : ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಲ್ಕು ಬಾರಿ ಚಾಂಪಿಯನ್ ಪಟ್ಟ ತಂಡದುಕೊಟ್ಟಿರುವ ರೋಹಿತ್ ಶರ್ಮಾ ತಮ್ಮ ತಂಡದಲ್ಲಿ ತಾವು ಕನಿಷ್ಠ ಪ್ರಮುಖ ವ್ಯಕ್ತಿ, ತಂಡದಲ್ಲಿರುವ ಬಹುತೇಕರು ಶ್ರೇಷ್ಠ ವ್ಯಕ್ತಿಗಳು ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭಗೊಳ್ಳುತ್ತಿದೆ. ಈ ಮೂಲಕ 6 ತಿಂಗಳ ಬಳಿಕ ಕ್ರಿಕೆಟ್ಗೆ ಮರಳಲಿದೆ. ಭಾರತದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಬಾರಿ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ರೋಹಿತ್ ತಮ್ಮ ನಾಯಕತ್ವದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
'ನಾನು ನಾಯಕನಾಗಿ ನನ್ನದೇ ಆದ ಒಂದು ಥಿಯರಿ ನಂಬಿರುವೆ. ತಂಡದಲ್ಲಿ ನಾಯಕನಾದವನು ಕಡಿಮೆ ಪ್ರಾಮುಖ್ಯತೆ ಇರುವ ವ್ಯಕ್ತಿಯಾಗಿರುತ್ತಾನೆ. ಈ ಯೋಜನೆಯಲ್ಲಿ ಬೇರೆಯವರು ನಾಯಕನಿಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿರುತ್ತಾರೆ. ಇದು ಬೇರೆ ನಾಯಕರಿಗೆ ವಿಭಿನ್ನವಾಗಿ ತೋಚಬಹುದು. ಆದರೆ, ನನಗೆ ಈ ಥಿಯರಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ' ಎಂದು ರೋಹಿತ್ ಶರ್ಮಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸುದೀರ್ಘ ಸಮಯದಿಂದ ಮನೆಯಲ್ಲಿರುವುದರಿಂದ ಐಪಿಎಲ್ ಸಿದ್ಧತೆಗೆ ಸಮಯ ಸಾಕಾಗುವುದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ಇನ್ನೂ ಸಾಕಷ್ಟು ಸಮಯವಿದೆ. ನಿಧಾನವಾಗಿ ನಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಹುದು ಎಂದಿದ್ದಾರೆ.
'ಈ ವಾರ ಜಿಮ್ಗಳು ತೆರೆಯಬಹುದು ಎಂಬ ಭರವಸೆಯಲ್ಲಿದ್ದೇನೆ. ಯಾಕೆಂದರೆ, ನಾನು ನನ್ನ ಸ್ಟ್ರೆಂತ್ ಟ್ರೈನಿಂಗ್ ಸೆಷನ್ ಪ್ರಾರಂಭಿಸಬಹುದು. ಪ್ರಸ್ತುತ ಮಾನ್ಸೂನ್ ಕಾರಣ ಹೊರಾಂಗಣ ತರಬೇತಿ ಪಡೆಯಲು ಸಾಧ್ಯವಿಲ್ಲ. ನಾನು ಒಳಾಂಗಣ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ಪತ್ರ ಬರೆಯಲು ಯೋಚಿಸುತ್ತಿದ್ದೇನೆ' ಎಂದು ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 2013, 2015, 2017 ಹಾಗೂ 2019ರಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.